janadhvani

Kannada Online News Paper

ಚಳಿಯಿಂದ ತಪ್ಪಿಸಲು ಟ್ರಕ್ ಒಳಗೆ ಹೀಟರ್ ಇಟ್ಟು ಮಲಗಿದ್ದ ಭಾರತೀಯ ಯುವಕನಿಗೆ ದಾರುಣ ಅಂತ್ಯ

ಚಳಿಯಿಂದ ರಕ್ಷಣೆ ಪಡೆಯಲು ಹೀಟರ್ ಇಟ್ಟು ಮಲಗಿದ್ದ ಅನ್ಸಾರ್ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ.

ಮಸ್ಕತ್ : ಒಮಾನ್ ನ ಫುಜೈರಾದಲ್ಲಿ ಮಲಯಾಳಿ ಯುವಕನೊಬ್ಬ ದುರಂತ ಅಂತ್ಯ ಕಂಡಿದ್ದಾನೆ. ಕೋಝಿಕ್ಕೋಡ್ ನ ವಡಗರದ ವಳ್ಳಿಕಾಟ್ಟ್ ಮೂಲದ ಅನ್ಸಾರ್ (28) ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೆವಿ ಟ್ರಕ್ ಒಳಗೆ ಚಳಿಯಿಂದ ರಕ್ಷಣೆ ಪಡೆಯಲು ಹೀಟರ್ ಇಟ್ಟು ಮಲಗಿದ್ದ ಅನ್ಸಾರ್ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ. ಫುಜೈರಾದ ಮಸಾಫಿಯಲ್ಲಿ ಈ ದುರಂತ ಘಟನೆ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಯುವಕನ ಮೃತದೇಹವು ಅವನು ಕೆಲಸ ಮಾಡುತ್ತಿದ್ದ ಟ್ರಕ್ ಒಳಗೆ ಪತ್ತೆಯಾಗಿದೆ. ಚಳಿಗಾಲದಲ್ಲಿ ಬೆಚ್ಚನೆಗಾಗಿ ಬಳಸುತ್ತಿದ್ದ ಹೀಟರ್ ನಿಂದ ಹೊಗೆ ಉಸಿರಾಡಿದ್ದರಿಂದ ಯುವಕ ಮೃತಪಟ್ಟಿರುವುದಾಗಿ ಪ್ರಾಥಮಿಕವಾಗಿ ದೃಢೀಕರಿಸಲಾಗಿದೆ. ಫುಜೈರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅನ್ಸಾರ್ ಮೃತದೇಹವನ್ನು ಮಸಾಫಿ ಶವಾಗಾರದಲ್ಲಿ ಇರಿಸಲಾಗಿದೆ. ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಊರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ.