ಕಾರ್ಕಳ: SMA ಕಾರ್ಕಳ ರೀಜಿನಲ್ ವತಿಯಿಂದ ಅನ್ನಸ್ವೀಹತ್ ತರಬೇತಿ ಶಿಬಿರವು ಇಂದು(25-1-2026) ಸಂಜೆ 7 ಗಂಟೆಗೆ ಬಜಗೋಳಿ ಮಸೀದಿ ವಠಾರದಲ್ಲಿ ನಡೆಯಲಿದ್ದು, ಸಲ್ಮಾನ್ ಜುಮಾ ಮಸೀದಿ ಬಂಗ್ಲೆಗುಡ್ಡೆ ಖತೀಬ್ ಅಸ್ಸಯ್ಯಿದ್ ಫಝಲ್ ತಂಙಲ್ ದುಆ ದೊಂದಿಗೆ ಚಾಲನೆ ನೀಡಲಿದ್ದಾರೆ.
ಜಾಮಿಯಾ ಸಅದಿಯಾ ಅರಬಿಕ್ ಕಾಲೇಜು ಕಾಸರಗೋಡು ಇದರ ಪ್ರೊಫೆಸರ್ ಬಹು ಅಲ್ ಹಾಜ್ ಹುಸೈನ್ ಸಅದಿ ಕೆ.ಸಿರೋಡ್ ಇಸ್ಲಾಮಿನಲ್ಲಿ ನಾಯಕತ್ವ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಗೆಯ್ಯಲಿದ್ದಾರೆ.
ವೇದಿಕೆ ಯಲ್ಲಿ ಶಾಹುಲ್ ಹಮೀದ್ ರಶೀದ್ ಸಅದಿ ಅಲ್ ಅಫ್ಳಲಿ ಹೊಸ್ಮಾರು, ಅಬ್ದುರ್ರಹ್ಮಾನ್ ಮುಸ್ಲಿಯಾರ್ ನೆಲ್ಲಿಕಾರು, ಅಬ್ದುರ್ರಹ್ಮಾನ್ ಹುಮೈದಿ ಅಲ್ ಅಸ್ಅದಿ ಬಜಗೋಳಿ, ಸುಲೈಮಾನ್ ಸಅದಿ ಅಲ್ ಅಫ್ಳಲಿ ಹೊಸ್ಮಾರ್,
ಅಬ್ದುರಶೀದ್ ಸಖಾಫಿ ಮಜೂರು, ಅಹ್ಮದ್ ಶರೀಫ್ ಸಅದಿ ಕಿಲ್ಲೂರು, ಅಬ್ದುಲ್ ಲತೀಫ್ ಸಾಣೂರ್, ಸಿ. ಯಚ್ ಪುತ್ತಾಕ ಬಜಗೋಳಿ ಹಾಗೂ ಕಾರ್ಕಳ ರೇಂಜಿಗೆ ಒಳಪಟ್ಟ ಎಲ್ಲಾ ಮಸೀದಿಯ ಖತೀಬರುಗಳು ಹಾಗೂ ಅಧ್ಯಕ್ಷರುಗಳು ಭಾಗವಹಿಸಿಸಲಿದ್ದಾರೆ.



