janadhvani

Kannada Online News Paper

ಡಿಕೆಯಸ್ಸಿ ಅಲ್ ಖೋಬರ್ ಘಟಕ: ನೂತನ ಸಾರಥಿಗಳು

ಅಧ್ಯಕ್ಷ: ಉಸ್ಮಾನ್ ಹೊಸಂಗಡಿ ಪ್ರ. ಕಾರ್ಯದರ್ಶಿ: ಶಾಫಿ ಶುಐಬ್ ಮಂಗಳೂರು ಹಣಕಾಸು ಕಾರ್ಯದರ್ಶಿ: ಅಶ್ರಫ್ ಚಿಕ್ಕಮಗಳೂರು

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಕೇಂದ್ರ ಸಮಿತಿಯ ದಮ್ಮಾಂ ವಲಯದ ಅಧೀನಕ್ಕೊಳಪಟ್ಟ ಅಲ್ ಖೋಬರ್ ಘಟಕದ 31 ನೇ ವಾರ್ಷಿಕ ಮಹಾಸಭೆಯು ದಿನಾಂಕ 15, ಜನವರಿ 2026 ಗುರುವಾರ ಅಸ್ತ ಶುಕ್ರವಾರ ರಾತ್ರಿ ನಡೆಯಿತು.
ಘಟಕದ ಅಧ್ಯಕ್ಷ ಇರ್ಶಾದ್ ಅಬ್ದುರ್ರಹ್ಮಾನ್ ರವರ ಘನ ಅಧ್ಯಕ್ಷ ತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳ ಪವಿತ್ರ ಖುರ್ ಆನ್ ನ ಸೂರತುಲ್ ಇಸ್ರಾಅ ಪಠಿಸಿದರು.
ಮುಹಮ್ಮದ್ ರೋಯಲ್ ಸಭಿಕರನ್ನು ಸ್ವಾಗತಿಸಿದರು.

ಡಿಕೆಯಸ್ಸಿ ಕೇಂದ್ರ ಸಮಿತಿ ದಾಯಿ ಉಸ್ತಾದ್ ಅಬ್ದುರ್ರಶೀದ್ ಸಅದಿ ಸಂಘಟನಾ ಶೈಲಿ ಹಾಗೂ ಡಿಕೆಯಸ್ಸಿಯನ್ನು ಮುನ್ನಡೆಸುವ ರೀತಿಯನ್ನು ವಿವರಿಸಿದರು.
ಡಿಕೆಯಸ್ಸಿ ಕೇಂದ್ರ ಸಮಿತಿ ಹಮ್ಮಿಕೊಂಡ ನೂತನ ಹೆಜ್ಜೆ ಉಸ್ ರತುಲ್ ಇಹ್ಸಾನ್ ಗೆ ಸದಸ್ಯರನ್ನು ಸೇರಿಸುವ ಕಾರ್ಯಕ್ರಮಕ್ಕೆ ಸಹಕರಿಸಿರಿ ಎಂದು ಕಿವಿಮಾತು ಹೇಳಿದರು.
ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಮಂಗಳೂರು ವಾರ್ಷಿಕ ವರದಿ ಮತ್ತು ಹಣಕಾಸು ಕಾರ್ಯದರ್ಶಿ ಸರ್ಫ್ರಾಝ್ ಬಜ್ಪೆ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.

ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಇರ್ಶಾದ್ ಪಾಣಾಜೆಯವರು ಪ್ರಸಕ್ತ ಸಾಲಿನಲ್ಲಿ ಸದಸ್ಯರೆಲ್ಲರೂ ಡಿಕೆಯಸ್ಸಿಯ ಅಭಿವೃಧ್ಧಿಗೋಸ್ಕರ ಕೈ ಜೋಡಿಸಿ ಯಶಸ್ವಿಗೊಳಿಸಿದ್ದೀರಿ. ಇನ್ನು ಮುಂದಕ್ಕೂ ತಾವುಗಳೆಲ್ಲರ ಸೇವೆ ನಿರಂತರವಾಗಿರಲಿ ಎಂದು ನುಡಿದರು.
ಸಭೆಯಲ್ಲಿ ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳ, ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು, ತುಖ್ಬ ಘಟಕದ ಹಣಕಾಸು ಕಾರ್ಯದರ್ಶಿ ಮುಹಮ್ಮದ್ ಹನೀಫ್ ಜೆಪ್ಪು, ಜುಬೈಲ್ ಘಟಕದ ಹಣಕಾಸು ಕಾರ್ಯದರ್ಶಿ ಅನ್ವರ್ ಪಡುಬಿದ್ರಿ ಉಪಸ್ಥಿತರಿದ್ದರು.

2026-27 ನೇ ಸಾಲಿಗೆ ನೂತನ ಸಮಿತಿಯನ್ನು ಡಿಕೆಯಸ್ಸಿ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ರವರು ಚುನಾವಣಾಧಿಕಾರಿಯಾಗಿ ರಚಿಸಿದರು.
ಗೌರವಾಧ್ಯಕ್ಷ: ಮುಹಮ್ಮದ್ ಶರೀಫ್ ಬಜ್ಪೆ
ಡೆವಲಪ್ ಮೆಂಟ್ ಚೆಯರ್ಮ್ಯಾನ್:
ಅಬ್ದುಲ್ ಜಬ್ಬಾರ್ ಕೂರ್ನಡ್ಕ
ಅಧ್ಯಕ್ಷ: ಉಸ್ಮಾನ್ ಹೊಸಂಗಡಿ
ಪ್ರಧಾನ ಕಾರ್ಯದರ್ಶಿ:
ಶಾಫಿ ಶುಐಬ್ ಮಂಗಳೂರು
ಹಣಕಾಸು ಕಾರ್ಯದರ್ಶಿ:
ಅಶ್ರಫ್ ಚಿಕ್ಕಮಗಳೂರು
ಕಮ್ಯುನಿಕೇಶನ್ ಸೆಕ್ರೆಟರಿ:
ಮುಹಮ್ಮದ್ ಇರ್ಶಾದ್ ಪಾಣಾಜೆ
ಉಪಾಧ್ಯಕ್ಷರು:
ಮುಹಮ್ಮದ್ ರೋಯಲ್ ಮುಕ್ವೆ
ಮುಹಮ್ಮದ್ ಹನೀಫ್ ದೇರಳಕಟ್ಟೆ
ಕಾರ್ಯದರ್ಶಿಗಳು:
ಆಸಿಫ್ ಕೆಸಿ ರೋಡ್
ಸರ್ಫ್ರಾಝ್ ಬಜ್ಪೆ
ಸಲಹೆಗಾರರು:
ಇಸ್ಮಾಯೀಲ್ ಪಡ್ಡಂದಡ್ಕ
ಅಬ್ದುರ್ರಶೀದ್ ಬೆಳ್ಳಾರೆ
ಅಬ್ದುಲ್ ಗಫೂರ್ ಸಜಿಪ
ಅಶ್ರಫ್ ನಾವುಂದ
ಮುಹಮ್ಮದ್ ಮಲೆಬೆಟ್ಟು
ಕಾರ್ಯಕಾರಿ ಸಮಿತಿ ಸದಸ್ಯರು:
ಮುಹಮ್ಮದ್ ಅಶ್ರಫ್ ಉಚ್ಚಿಲ
ರಫೀಖ್ ವಿಟ್ಲ
ಶಬೀರ್ ಬೆಳ್ಳಾರೆ
ಅಬ್ದುಲ್ ಹಮೀದ್ ಸುಳ್ಯ
ಹಸನ್ ಮುಕ್ವೆ
ಅಬ್ದುರ್ರಝ್ಝಾಖ್ ಕಂಬಳಬೆಟ್ಟು
ಅಬ್ಬುಂಞ ಮುಕ್ವೆ
ಹಬೀಬ್ ನೇರಳಕಟ್ಟೆ

ಮದದ್ ವಿಂಗ್ ಅಧ್ಯಕ್ಷ ಅಶ್ರಫ್ ಜೆವಿಸಿ ರವರು ಮದದ್ ವಿಂಗ್ ಬಗ್ಗೆ ಮಾತನಾಡಿ ಡಿಕೆಯಸ್ಸಿ ಕಾರ್ಯಕರ್ತರಿಗೆ ಗಲ್ಫ್ ರಾಷ್ಟ್ರಗಳಲ್ಲಿ ಅಡಚಣೆ ಗಳಿದ್ದಲ್ಲಿ ಸಹಕಾರ ನೀಡುವ ಉದ್ದೇಶವಾಗಿದ್ದು ಸರ್ವರೂ ಸಹಕರಿಸಬೇಕೆಂದು ವಿನಂತಿಸಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಉಸ್ಮಾನ್ ಹೊಸಂಗಡಿರವರು ಡಿಕೆಯಸ್ಸಿಯ ಮುಂದಿನ ಅಭಿವೃಧ್ಧಿಗೋಸ್ಕರ ಸದಸ್ಯರೆಲ್ಲರೂ ನಿಸ್ವಾರ್ಥ ದಿಂದ ಪ್ರವರ್ತನೆಗೈದು ಪರಲೋಕ ವಿಜಯಕ್ಕಾಗಿ ಶ್ರಮಿಸಿರಿ ಎಂದು ಭಿನ್ನವಿಸಿದರು.
ರಮಳಾನ್ ಇಫ್ತಾರ್ 28, ಫೆಬ್ರುವರಿ ಶನಿವಾರ ನಡೆಸುವುದು.
ಕೊನೆಯಲ್ಲಿ ಅಶ್ರಫ್ ಉಚ್ಚಿಲ ಧನ್ಯವಾದಗೈದರು.
ವಲಯ ಸಮಿತಿ ಸದಸ್ಯರು:
1. ಉಸ್ಮಾನ್ ಹೊಸಂಗಡಿ
2. ಶಾಫಿ ಶುಐಬ್ ಮಂಗಳೂರು
3. ಅಶ್ರಫ್ ಚಿಕ್ಕಮಗಳೂರು
4. ಮುಹಮ್ಮದ್ ರೋಯಲ್
5. ಇಸ್ಮಾಯೀಲ್ ಪಡ್ಡಂದಡ್ಕ
6. ಅಬ್ದುಲ್ ಗಫೂರ್ ಸಜಿಪ
7. ಅಶ್ರಫ್ ನಾವುಂದ
8. ಅಬ್ದುರ್ರಶೀದ್ ಬೆಳ್ಳಾರೆ
9. ಅಬ್ದುಲ್ ಜಬ್ಬಾರ್ ಕೂರ್ನಡ್ಕ