janadhvani

Kannada Online News Paper

ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್- ರಿಯಾದ್ ಸಮಿತಿಗೆ ನವ ಸಾರಥ್ಯ

ರಿಯಾದ್ :ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ರಿಯಾದ್ ಘಟಕದ ವಾರ್ಷಿಕ ಮಹಾಸಭೆ ದಿನಾಂಕ 2, ಜನವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ರಿಯಾದ್ ನಲ್ಲಿ ಜರಗಿತು.
ಅಧ್ಯಕ್ಷ ಪಿ.ಎಸ್. ಅಬ್ದುಲ್ ಅಝೀಝ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳರವರು ಪವಿತ್ರ ಖುರ್ ಆನ್ ಪಠಿಸಿದರು.
ಸದಸ್ಯ ಅಬ್ದುಲ್ ಜಬ್ಬಾರ್ ರವರು ಸಭೆಗೆ ಆಗಮಿಸಿದ ಸರ್ವ ಸದಸ್ಯರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.

ಕೆಎಂವೈಎ ದಮ್ಮಾಂ ಈಷ್ಟರ್ನ್ ರೀಜನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ರವರು ಆಯತ್ ಹದೀಸ್ ಗಳೊಂದಿಗೆ ನಸೀಹತ್ ನೀಡಿ ಕೆಎಂವೈಎ 37 ವರ್ಷಗಳಿಂದ ನಡೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ವಿವರಿಸಿ ಅಲ್ಲಾಹನ ಪವಿತ್ರ ನಾಮದಿಂದ ಸಮಾರಂಭವನ್ನು ಉದ್ಘಾಟಿಸಿದರು.

ಕಾರ್ಯದರ್ಶಿ ಸೈಫುಲ್ಲ ಮಾಹಿನ್ ವಾರ್ಷಿಕ ವರದಿ ಹಾಗೂ ಸುಲೈಮಾನ್ ರವರು ಪ್ರವರ್ತನಾ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದರು.
ಉಪಾಧ್ಯಕ್ಷ ಅನ್ವರ್ ಹುಸೈನ್, ಸ್ಥಾಪಕ ಹಾಗೂ ಹಿರಿಯ ಸದಸ್ಯ ಹಸನ್ ಬಾವ ಸಭೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಸ್ಥಾನ ವಹಿಸಿದ್ದ ಅಬ್ದುಲ್ ಅಝೀಝ್ ರವರು ಮಾತನಾಡುತ್ತಾ ಕೆಎಂವೈಎ ಯ ಉನ್ನತಿಗಾಗಿ ಶ್ರಮಿಸಿದ ಸದಸ್ಯರನ್ನು ಶ್ಲಾಘಿಸಿದರು. ಮುಂಬರುವ ನೂತನ ಸಮಿತಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಪ್ರವರ್ತಕರಾಗಿರಿ ಎಂದು ನುಡಿದರು.
ದಮ್ಮಾಂ ಘಟಕದ ಮಾಜಿ ಅಧ್ಯಕ್ಷ ಬಿ. ಎಂ ರಫೀಖ್ ಹಾಗೂ ಓರ್ಗನೈಝರ್ ಸೈಫುಲ್ಲ ಮುಹ್ಯಿದ್ದೀನ್ ಚುನಾವಣಾಧಿಕಾರಿ ಗಳಾಗಿ 2026-27 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರು: ಪಿ.ಎಸ್. ಅಬ್ದುಲ್ ಅಝೀಝ್

ಅಧ್ಯಕ್ಷರು: ಸುಲೈಮಾನ್ ಶರೀಫ್

ಉಪಾಧ್ಯಕ್ಷರು:

1. ಅನ್ವರ್ ಹುಸೇನ್

2. ಹಫೀಝ್

ಪ್ರಧಾನ ಕಾರ್ಯದರ್ಶಿ: ಸೈಫುಲ್ಲಾ ಮಾಹಿನ್

ಕಾರ್ಯದರ್ಶಿ: ಝುಬೈರ್ ರೋಶನ್

ಕೋಶಾಧಿಕಾರಿ:ಇಮ್ರಾನ್

ಉಪ ಕೋಶಾಧಿಕಾರಿ: ನಯಾಝುದ್ದೀನ್

ಸಂಘಟನಾ ಕಾರ್ಯದರ್ಶಿ ಹುಸೈನ್ ಶಾಫಿ

ಸಲಹೆಗಾರರು:

ಎಸ್.ಯು. ಝುಬೈರ್

ಎ. ರೆಹಮಾನ್ ಕಾರ್ನಾಡ್

ಎ. ಹಮೀದ್ ಕೂಳೂರು

ಎ. ಜಬ್ಬಾರ್

ಬಿ.ಎಂ. ರಫೀಕ್

ಸದಸ್ಯರು:

ಮುಹ್ಸಿನ್

ಝುಬೈರ್ ಅಹ್ಮದ್

ಸಮೀರ್

ಮುಹಮ್ಮದ್ ಹ್ಯಾರಿಸ್

ಝಮೀರ್ ಕಾಪು

ಹಸನ್ ಬಾವಾ

ರಾಝಿ ರಫೀಕ್

ಜುನೈದ್

ನೂರುದ್ದೀನ್

ಇಮ್ತಿಯಾಝ್

ಉಮರ್ ಶಾಫಿ

ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸುಲೈಮಾನ್ ಶರೀಫ್ ಮಾತನಾಡುತ್ತಾ ಮುಂಬರುವ ದಿನಗಳಲ್ಲಿ ಕೆಎಂವೈಎ ಯನ್ನು ಬಲಪಡಿಸಲು ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ಪ್ರೋತ್ಸಾಹ ಅತ್ಯಗತ್ಯವಿದೆ. ಕೈ ಜೋಡಿಸಿ ಅಭಿವೃಧ್ಧಿಪಡಿಸಿರಿ ಎಂದು ಭಿನ್ನವಿಸಿದರು.
ಕೆಎಂವೈಎ ಯ ಉನ್ನತಿಗಾಗಿ ಕಳೆದ 28 ವರ್ಷಗಳಿಂದ ದುಡಿಯುತ್ತಿರುವ ಕೆಎಂವೈಎ ದಮ್ಮಾಂ ಘಟಕದ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರ ಕಾರ್ಯವೈಖರಿ ಯನ್ನು ಪ್ರಶಂಷಿಸಿ ಕೆಎಂವೈಎ ರಿಯಾದ್ ಘಟಕದ ವತಿಯಿಂದ ಶಾಲು ಹಾಗೂ ಕಿಂಗ್ ಡಂ ಎವಾರ್ಡ್ ನೀಡಿ ಆದರಣೀಯವಾಗಿ ಸನ್ಮಾನಿಸಲಾಯಿತು.
ಕೆಎಂವೈಎ ರಿಯಾದ್ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ರವರ ಉತ್ತಮ ಪ್ರವರ್ತನೆಗಾಗಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ಸೈಫುಲ್ಲ ಮಾಹಿನ್ ಧನ್ಯವಾದಗೈದರು.