ಮಂಗಳೂರು| ಸಮಾಜವನ್ನು ನವೋದಯದ ಉತ್ತುಂಗಕ್ಕೆ ಕೊಂಡೊಯ್ದ ಐತಿಹಾಸಿಕ ವ್ಯಕ್ತಿಗಳ ಆಶೀರ್ವಾದ ಪಡೆದು, ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ನೇತೃತ್ವದ ಕೇರಳ ಯಾತ್ರೆ ಇಂದು ಸಪ್ತಭಾಷಾ ಸಂಗಮ ಭೂಮಿಯಲ್ಲಿ ಆರಂಭಗೊಂಡಿದೆ. ಮಾನವೀಯತೆಯನ್ನು ಪ್ರೀತಿಸುವ ಹೃದಯಗಳಿಗೆ ಸ್ನೇಹದ ಸುವರ್ಣ ಸ್ಪರ್ಶದೊಂದಿಗೆ ವಿದ್ವತ್ಪೂರ್ಣ ನಾಯಕನ ವಿಜಯಯಾತ್ರೆ ಪ್ರಾರಂಭವಾಗಿದೆ.
ಇಂದು ಮಧ್ಯಾಹ್ನ 1.30 ಕ್ಕೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭವಾಗೊಂಡ ಕೇರಳ ಯಾತ್ರೆ, ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ವರ್ತಮಾನಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡುತ್ತದೆ. “ಮನುಷ್ಯರೊಂದಿಗೆ” ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಯಾತ್ರೆಯು, ತಾರತಮ್ಯವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿದೆ. ಸಮಸ್ತ ಕೇರಳ ಜಮ್ಇಯತುಲ್ ಉಲಮಾ ಶತಮಾನೋತ್ಸವದ ಅಂಗವಾಗಿ ಕೇರಳ ಯಾತ್ರೆ ನಡೆಯುತ್ತಿದೆ.
ಮಧ್ಯಾಹ್ನ 2.30 ಕ್ಕೆ ಸಮಸ್ತ ಕೇರಳ ಜಮ್ಇಯತುಲ್ ಉಲಮಾ ಅಧ್ಯಕ್ಷರಾದ ಇ. ಸುಲೈಮಾನ್ ಮುಸ್ಲಿಯಾರ್ ಮತ್ತು ಕೇರಳ ಯಾತ್ರಾ ಸಮಿತಿ ಅಧ್ಯಕ್ಷರಾದ ಕೆ.ಎಸ್. ಅಟಕೋಯ ತಂಙಳ್ (ಕುಂಬೋಲ್) ಅವರು ಯಾತ್ರಾ ನಾಯಕರಾದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರಿಗೆ ಧ್ವಜವನ್ನು ಹಸ್ತಾಂತರಿಸಿದರು. ಕರ್ನಾಟಕ ಜಮ್ಇಯತುಲ್ ಉಲಮಾ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್, ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ್, ಡಾ. ಮುಹಮ್ಮದ್ ಫಾಝಿಲ್ ರಝ್ವಿ ಮುಂತಾದವರು ಉಪಸ್ಥಿತರಿದ್ದರು.



ತಲಪಾಡಿಯಲ್ಲಿ ಜನಸ್ತೋಮ- ಅದ್ದೂರಿ ಬೀಳ್ಕೊಡುಗೆ
ಸುಲ್ತಾನುಲ್ ಉಲಮಾರ ಕೇರಳ ಯಾತ್ರೆಗೆ ಕನ್ನಡ ಮಣ್ಣಿನ ಸುನ್ನೀ ಸಂಘ ಕುಟುಂಬದಿಂದ ಅದ್ದೂರಿ ಸ್ವಾಗತ ಹಾಗೂ ಬೀಳ್ಕೊಡುಗೆ ತಲಪಾಡಿ ಟೋಲ್ ಗೇಟ್ ಬಳಿ ನಡೆಯಿತು. ಕರ್ನಾಟಕ ವಕ್ಫ್ ಕೌನ್ಸಿಲ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಅವರು ಸುಲ್ತಾನುಲ್ ಉಲಮಾರಿಗೆ ಹೂಗುಚ್ಚ ನೀಡಿ ಸ್ವಾಗತಿಸಿ ಕನ್ನಡ ಮಣ್ಣಿಂದ ಕೇರಳ ನಾಡಿಗೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮೋಂಟುಗೋಳಿ , ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ , ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಎಮ್ ಎಸ್ ಎಮ್ ಝೈನಿ ಕಾಮಿಲ್ ಸಖಾಫಿ, ಕೆಕೆಎಂ ಕಾಮಿಲ್ ಸಖಾಫಿ, ಎಸ್ ಎಸ್ ಎಫ್ ಮಾಜಿ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಡಂಗೇರಿ, ಇಸ್ಮಾಯಿಲ್ ಮಾಸ್ಟರ್ ಸಹಿತ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ನಾಯಕರು ಭಾಗಿಯಾದರು. ಸುನ್ನೀ ಸಂಘ ಕುಟುಂಬದ ನಾಯಕರು ಎಸ್ ವೈ ಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ನಾಯಕರು , ಇಸಾಬ ಸಾಂತ್ವನದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾಸರಗೋಡಿನಲ್ಲಿ ಉದ್ಘಾಟನೆ
ಸಂಜೆ 4 ಗಂಟೆಗೆ ಜಿಲ್ಲಾ ನಾಯಕರು, ಶತಮಾನೋತ್ಸವದ ಕಾವಲುಗಾರರೊಂದಿಗೆ ಕಾಸರಗೋಡಿನ ಚೆರ್ಕಳದಲ್ಲಿ ಮೆರವಣಿಗೆಯನ್ನು ಸ್ವೀಕರಿಸಲಿದ್ದಾರೆ.
ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವು ಸಯ್ಯಿದ್ ಅಲಿ ಬಾಫಕಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಲಿದೆ. ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ, ಸಮಸ್ತ ಅಧ್ಯಕ್ಷರಾದ ಇ ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸಚಿವ ಕಡನ್ನಪ್ಪಲ್ಲಿ ರಾಮಚಂದ್ರನ್, ಕರ್ನಾಟಕ ಸ್ಪೀಕರ್ ಯುಟಿ ಖಾದರ್, ಸಂಸದ ರಾಜಮೋಹನ್ ಉನ್ನಿಥಾನ್, ಶಾಸಕರಾದ ಎಂ ರಾಜಗೋಪಾಲನ್, ಎನ್ ಎ ನೆಲ್ಲಿಕುನ್ನು, ಅಡ್ವ. ಸಿ.ಎಚ್.ಕುಂಜಂಬು, ಇ.ಚಂದ್ರಶೇಖರನ್, ಎ.ಕೆ.ಎಂ.ಅಶ್ರಫ್, ಚಿನ್ಮಯ ಮಿಷನ್ ಕೇರಳ ಘಟಕದ ಅಧ್ಯಕ್ಷ ಶ್ರೀ ಶ್ರೀ ಪೂಜನಿಯ ಸ್ವಾಮಿ ವಿವೇಕಾನಂದ ಸರಸ್ವತಿ, ಫಾದರ್ ಮ್ಯಾಥ್ಯೂ ಬೇಬಿ ಮಾರ್ಥೋಮ, ಕಲ್ಲಟ್ರ ಮಾಹಿನ್ ಹಾಜಿ ಉಪಸ್ಥಿತರಿರುವರು.
ಮಾಲಿಕ್ ದಿನಾರ್ ರ.ಅ ಅವರ ಪಾದಸ್ಪರ್ಶದಿಂದ ಆಶೀರ್ವದಿಸಲ್ಪಟ್ಟ ಉತ್ತರ ಕೇರಳದಿಂದ ಆರಂಭಗೊಳ್ಳುವ ಯಾತ್ರೆಯು, ಸಮರ ಭೂಮಿ, ಕೃಷಿ ಮನೋಭಾವವನ್ನು ಪ್ರೇರೇಪಿಸುವ ಮಣ್ಣು, ಬೆಟ್ಟಗಳು, ಸಮುದ್ರ ತೀರಗಳು ಮತ್ತು ಸರೋವರಗಳನ್ನು ದಾಟಿ ಜ.16 ರಂದು ಅನಂತಪುರಿಯಲ್ಲಿ ಮುಕ್ತಾಯಗೊಳ್ಳಲಿದೆ.
ಮಲಯಾಳಂನ ಮನಸ್ಸಿನಲ್ಲಿ ಸಹೋದರತ್ವ ಮತ್ತು ಸಹಿಷ್ಣುತೆಯ ಬೆಳಕನ್ನು ಹರಡಿದ ಕೇರಳ ಮುಸ್ಲಿಂ ಜಮಾಅತ್ ನೇತೃತ್ವದ ಸುನ್ನಿ ಸಂಘ ಕುಟುಂಬದ ನೇತೃತ್ವದಲ್ಲಿ ಮನಸ್ಸುಗಳಿಂದ ಮನಸ್ಸುಗಳಿಗೆ ಈ ಯಾತ್ರೆ ಸಾಗಲಿದೆ. ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಮತ್ತು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಯಾತ್ರೆಯ ಉಪ ನಾಯಕರಾಗಿದ್ದಾರೆ. ಯಾತ್ರೆಗೆ ಸಂಬಂಧಿಸಿದಂತೆ, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕೇರಳ ಯಾತ್ರಾ ಸಮಿತಿ ಅಧ್ಯಕ್ಷ ಕೆ.ಎಸ್. ಆಟ್ಟಕೋಯ ತಂಙಳ್ ಮತ್ತು ಸಂಚಾಲಕ ಸಿ. ಮುಹಮ್ಮದ್ ಫೈಝಿ ತಿಳಿಸಿದ್ದಾರೆ.


