janadhvani

Kannada Online News Paper

ಕೇರಳ ಯಾತ್ರೆ ಯಶಸ್ವಿಗೊಳಿಸಿ- ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ. ಈಸ್ಟ್ ಜಿಲ್ಲೆ ಕರೆ

ಶೈಖುನಾ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ 3 ನೇ ಕೇರಳ ಯಾತ್ರೆಯು 2026 ಜನವರಿ 1 ರಂದು ಗುರುವಾರ ಮಧ್ಯಾಹ್ನ 1.30 ಕ್ಕೆ ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಚಾಲನೆಗೊಳ್ಳಲಿದೆ.

ಪುತ್ತೂರು : ಮನುಷ್ಯರೊಂದಿಗೆ ಎಂಬ ಧ್ಯೇಯವಾಕ್ಯದಲ್ಲಿ ಕೇರಳ ಮುಸ್ಲಿಂ ಜಮಾಅತ್ ಆಯೋಜಿಸಿರುವ, ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ 3 ನೇ ಕೇರಳ ಯಾತ್ರೆಯು 2026 ಜನವರಿ 1 ರಂದು ಗುರುವಾರ ಮಧ್ಯಾಹ್ನ 1.30 ಕ್ಕೆ ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಚಾಲನೆಗೊಳ್ಳಲಿದೆ.

ಮಾನವೀಯತೆ, ಸಹಬಾಳ್ವೆ, ಧಾರ್ಮಿಕ ಸೌಹಾರ್ದತೆ, ಮಾನವೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾರುವ ಈ ಯಾತ್ರೆಯು ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಅಂದು ಸಂಜೆ ಉದ್ಘಾಟನೆಗೊಂಡು ಕೇರಳದ ವಿವಿಧ ಕೇಂದ್ರಗಳಲ್ಲಿ ಸ್ವಾಗತ ಸಮಾರಂಭಗಳು ನಡೆಯಲಿದ್ದು ಜನವರಿ 16 ರಂದು ತಿರುವನಂತಪುರದಲ್ಲಿ ಸಮಾರೋಪ ಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ರ‌ಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್, ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್, ಅಮೀನುಶ್ಶರಿಯ್ಯಾ ಸಯ್ಯಿದ್ ಅಲೀ ಬಾಫಖಿ ತಂಞಳ್, ಖುದ್ವತ್ತುಸ್ಸಾದಾತ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್, ಬದರುಸ್ಸಾದಾತ್ ಇಬ್ರಾಹಿಂ ಬುಖಾರಿ ತಂಙಳ್ ಕುಂಬೋಳ್, ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಕುಟ್ಯಾಡಿ, ಕರ್ನಾಟಕ ರಾಜ್ಯ ಸ್ಪೀಕರ್ ಯು ಟಿ ಖಾದರ್, ವೈ ಅಬ್ದುಲ್ಲಾ ಕುಂಞಿ ಏನಪೋಯ, ಉಳ್ಳಾಲ ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ ಮೊದಲಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.

ಉಳ್ಳಾಲ ಸಯ್ಯಿದ್ ಮುಹಮ್ಮದುಲ್ ಶರೀಫುಲ್ ಮದನಿ (ಖ.ಸಿ.) ದರ್ಗಾ ಝಿಯಾರತ್ ಆಗಮಿಸುವ ಕೇರಳ ಯಾತ್ರಾ ತಂಡವನ್ನು ಸ್ವಾಗತಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುನ್ನಿ ಸಂಘಟನೆಯ ಯುನಿಟ್, ಸರ್ಕಲ್ ಝೋನ್ , ಜಿಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಷಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯು ಕರೆ ನೀಡಿದೆ.

ವರದಿ : ಯೂಸುಫ್ ಸಯೀದ್ ಪುತ್ತೂರು