janadhvani

Kannada Online News Paper

ಇತಿಹಾಸ ಪ್ರಸಿದ್ಧ ಹಯಾತುಲ್ ಔಲಿಯಾ(ಖ.ಸಿ) ದರ್ಗಾ ಶರೀಫ್ ತುರ್ಕಳಿಕೆ‌ ಇಲ್ಲಿ‌ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತೀ ಆಚರಿಸಿಕೊಂಡು ಬರುತ್ತಿರುವ ಮಖಾಂ‌ ಉರೂಸ್ ಕಾರ್ಯಕ್ರಮ ಖಾಝಿ ಸುಲ್ತಾನುಲ್ ಉಲಮಾ ಶೈಖುನಾ AP ಉಸ್ತಾದರ ನಿರ್ದೇಶನದಂತೆ 2025 ಡಿಸೆಂಬರ್ 31 ರಿಂದ 2026 ಜನವರಿ 4 ರ ವರೆಗೆ ದರ್ಗಾ ಕ್ಯಾಂಪಸ್ ನಲ್ಲಿ ಅತಿ ವಿಜೃಂಭಣೆಯಿಂದ ನಡೆಯಲಿದೆ.

ಉದ್ಘಾಟನಾ ಸಮಾರಂಭ, ಸ್ವಲಾತ್ ಮಜ್ಲಿಸ್‌, ಜಲಾಲಿಯ್ಯಾ ಮಜ್ಲಿಸ್, ಧಾರ್ಮಿಕ ಉಪಾನ್ಯಾಸ, ಕೂಟು ಪ್ರಾರ್ಥನೆ, ಖತಮುಲ್ ಕುರ್ಆನ್ ಹಾಗೂ ಸಮಾರೋಪ ಸಮಾರಂಭ‌ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾದಾತ್ ತಂಙಳ್, ಮಲ್ಜ‌ಅ್ ತಂಙಳ್
ಮಸ್’ವೂದ್ ತಂಙಳ್ ಕೂರತ್, ಹಂಝ ತಂಙಳ್ ಕರ್ಪಾಡಿ, ಶೈಖುನಾ ಪೆರ್ನೆ ಉಸ್ತಾದ್‌‌,ಸುರಿಬೈಲು ಸಖಾಫಿ‌, ತೋಕೆ ಉಸ್ತಾದ್, ಮೌಲಾನ ಶಾಫಿ ಸಹದಿ, ಅನಸ್ ಸಿದ್ದೀಖಿ, ಇರ್ಶಾದ್ ಸಖಾಫಿ ಮಲಪ್ಪುರಂ, ಜುನೈದ್ ಸಖಾಫಿ ಮುದರ್ರಿಸ್ ತುರ್ಕಳಿಕೆ ಸೇರಿದಂತೆ ಪ್ರಮುಖ ಸಯ್ಯಿದರು, ಉಲಮಾಗಳು,‌ಉಮರಾ ನಾಯಕರು ಸಂಘಟನಾ ನಾಯಕರು, ‌ಇನ್ನಿತರ ಧಾರ್ಮಿಕ,ರಾಜಕೀಯ ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ.

ಜಮಾಅತ್ ಅಧ್ಯಕ್ಷರು ಅಯ್ಯೂಬ್ TDS ಅಧ್ಯಕ್ಷತೆ ವಹಿಸಲಿದ್ದಾರೆ. ಜನವರಿ 4ರಂದು ನಡೆಯುವ ಸಮಾರೋಪ ಸಮಾರಂಭದ ದಿನ ಸಾವಿರಾರು ಜನ ಭಾಗವಹಿಸಲಿದ್ದಾರೆ.
ಎಂದು ಜಮಾಅತ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.