✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ
ಅದು 2005 ರ ಸಮಯ: ಮೂವರು ಗೆಳೆಯರು ಪತ್ರಿಕೆಯೊಂದಕ್ಕೆ ಜನ್ಮ ನೀಡಲು ಒಗ್ಗೂಡಿದ್ದರು. ಈ ಮೂವರ ಸಾಹಸ ಕಂಡ ಹಲವರು ಈ ಪತ್ರಿಕೆಯು ಹತ್ತರಲ್ಲಿ ಹನ್ನೊಂದು ಎಂದು ಷರಾ ಬರೆದರು. ತಾರುಣ್ಯದ ಆವೇಶದ ಹುಚ್ಚು ಉರುಮಾಲ್ ಪತ್ರಿಕೆಯನ್ನು ಹುಟ್ಟು ಹಾಕಿತು. ಸಯ್ಯಿದ್ ಖುರ್ರತುಸ್ಸಾದಾತ್ ತಂಙಳ್ ರವರ ಪುಣ್ಯ ಹಸ್ತದಿಂದ ಉರುಮಾಲ್ ಪತ್ರಿಕೆ ಬಿಡುಗಡೆ ಗೊಂಡಿತು.ಪತ್ರಿಕೆಗೆ ಜನ್ಮ ನೀಡಿದ ಎಂ ಎಂ ಸಖಾಫಿ,MEM ಶರೀಫ್, ಶರಫ್ರಾಝ್ ನವಾಝ್ ರವರ ತಂಡ ಪತ್ರಿಕೆಯ ಬೆಳವಣಿಗಾಗಿ ಊರೂರು ಸುತ್ತಿದರು. ಪತ್ರಿಕೆಗಾಗಿ ಊಟ, ನಿದ್ರೆ ಬಿಟ್ಟು ದುಡಿದರು. ಅವರು ಸುತ್ತಾಟ ನಡೆಸದ ಊರುಗಳಿಲ್ಲ. ಪತ್ರಿಕೆ ತಲುಪದ ಮನೆಗಳಿಲ್ಲ. ಆರ್ಥಿಕ ಹೊರೆಯ ಕಾರಣ ಪತ್ರಿಕೆ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಾಗದೆ ಬಾಗಿಲು ಮುಚ್ಚಿತು.ಮುಸ್ಲಿಂ ಸಮಾಜದಲ್ಲಿ ಪತ್ರಿಕೆಗಳಿಗೆ ಭವಿಷ್ಯವಿಲ್ಲ. ಹಲವಾರು ಮುಸ್ಲಿಂ ಧಾರ್ಮಿಕ ಪತ್ರಿಕೆ ಗಳು ಬೆಳಗಿ ಅಸ್ತಂಗತವಾಗಿದೆ. ಉರುಮಾಲ್ ಕೂಡ ಅದೇ ಸಾಲಿನಲ್ಲಿ ಸೇರಿತ್ತು. ಆದರೆ, ಶರಫ್ರಾಝ್, ಉರುಮಾಲ್ ಹೊಣೆ ಹೊತ್ತು ಕೊಂಡ.ಉರುಮಾಲ್ ಮತ್ತೆ ಬೆಳಕು ಕಂಡಿತು.ಬ್ಲಾಕ್ ಅಂಡ್ ವೈಟ್ ಪತ್ರಿಕೆ ಗಳು ಹೊರ ಬರುವುದೇ ಕಷ್ಟ ಸಾಧ್ಯ ಎಂದು ನಂಬಿದ್ದ ಕಾಲದಲ್ಲಿ ಎಲ್ಲಾ ಪುಟಗಳನ್ನು ಕಲರ್ ಮಯ ಮಾಡಿಬಿಟ್ಟ. ಉರುಮಾಲ್‌ನ ಎಲ್ಲಾ ಪುಟಗಳು ಕಲರ್ ಆದಾಗ ಇದು ಮುಂದುವರಿಯಬಹುದೇ ? ಎಂದು ಅನೇಕರು ಪ್ರಶ್ನಿಸಿದ್ದರು. ಆ ಪ್ರಶ್ನೆಗಳ ಮೇಲೆಯೇ ಉರುಮಾಲ್ ಇಪ್ಪತ್ತು ವರ್ಷ ದಾಟಿ ನಿಂತಿದೆ.ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ,ಕೊಡಗು,ಶಿವಮೊಗ್ಗ, ಹಾಸನ,ಚಿಕ್ಕಮಗಳೂರು ಸಹಿತ ಇತರ ಜಿಲ್ಲೆಗಳಿಗೆ ಪತ್ರಿಕೆ ವ್ಯಾಪಿಸಿದೆ. ಸಾಹಸದ ಹೆಜ್ಜೆ ಗಳ ಮೂಲಕ ಶರಫ್ರಾಝ್ ಪತ್ರಿಕೆಗೆ ಜೀವ ತುಂಬಿದ. ಇಂದು ಪತ್ರಿಕೆ ಇಪ್ಪತ್ತು ವರ್ಷಗಳು ಪೂರ್ತಿಗೊಳಿಸಿದ ಸಂಭ್ರಮದಲ್ಲಿದೆ. ಈ ಸಡಗರವನ್ನು ಸಾಮೂಹಿಕ ವಿವಾಹ ಮತ್ತು ಸಮಾಜಮುಖಿ ಕಾರ್ಯಕ್ರಗಳ ಮೂಲಕ ಬಹಳ ಅರ್ಥ ಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ.
ಉರುಮಾಲ್ ಕೇವಲ ಬರಹಕ್ಕೆ ಸೀಮಿತವಾಗದೆ ಸಮಾಜ ಸೇವೆಯ ಮೂಲಕ ಮನೆಮಾತಾದ ಪತ್ರಿಕೆ. ಅದರ ವ್ಯವಸ್ಥಾಪಕ ಶರಫ್ರಾಝ್ ನವಾಝ್ ಕಳೆದ ಹದಿನೈದು ವರ್ಷಗಳಿಂದ ಸಾಮೂಹಿಕ ವಿವಾಹ, ವಿದ್ಯಾರ್ಥಿ ವೇತನ, ಶಾಲೆ, ಮದ್ರಸ ಮಕ್ಕಳಿಗೆ ವಿವಿಧ ಸ್ಪರ್ಧೆ ಗಳು, ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಸನ್ಮಾನ, ರಕ್ತದಾನ ಶಿಬಿರ, ಮೆಡಿಕಲ್ ಕ್ಯಾಂಪ್ ಸಹಿತ ವಿವಿಧ ರೀತಿಯ ಸಮಾಜ ಸೇವೆಗಳನ್ನು ಉರುಮಾಲ್ ಮೂಲಕ ಆಯೋಜಿಸುತ್ತಾ ಬಂದವನು. ಇದೀಗ ಪತ್ರಿಕೆಯ ಇಪ್ಪತ್ತನೇ ವಾರ್ಷಿಕ ಪ್ರಯುಕ್ತ ಹತ್ತು ಬಡ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ, ಮೆಡಿಕಲ್ ಕ್ಯಾಂಪ್, ವಿದ್ಯಾರ್ಥಿ ವೇತನ, ವೀಲ್ಚ್ಯಾರ್, ಟೈಲರಿಂಗ್ ಮಿಷನ್, ರಾಜ್ಯ ಮಟ್ಟದ ಕ್ವಿಝ್ ಸ್ಪರ್ಧೆ ಸಂಘಟಿಸಲಾಗಿದೆ. ಪತ್ರಿಕೆಯ ಮೂಲಕ ಜನಸೇವೆಗಳನ್ನು ಮಾಡಲು ಸಾಧ್ಯವಿದೆ ಎಂದು ತೋರಿಸಿ ಕೊಟ್ಟು ಮಾದರಿಯಾದವನು ಶರಫ್ರಾಝ್ ನವಾಝ್. ಹಾಗಂತ ಆತ ಆಗರ್ಭ ಶ್ರೀಮಂತನಲ್ಲ. ಆತನ ಮನಸ್ಸು ಶ್ರೀಮಂತಿಕೆಯಿಂದ ತುಂಬಿದೆ. ಹಾಗಾಗಿ ಸದಾ ಬಡವರಿಗಾಗಿ ಮಿಡಿಯುತ್ತದೆ. ಬಡ ಜನರಿಗಾಗಿ ಮನ ತುಡಿಯುವ ಹೃದಯವಂತ ನಾಯಕ.
ಶರಫ್ರಾಝ್ ನವಾಝ್ ಸದಾ ಜನೋಪಕಾರಿ ಯಾದ ಯೋಜನೆ ಗಳನ್ನು ಮಾಡುತ್ತಿದ್ದರೂ ಯಾವತ್ತೂ ಪ್ರಚಾರ ಬಯಸಿದವನಲ್ಲ. ಸಾಧಾರಣ ರಾಜಕಾರಣಿ ಗಳು ತಮ್ಮ ಸೇವೆಯ ಮೂಲಕ ಪ್ರಚಾರ ಬಯಸಿ ಜನರೆಡೆಯಲ್ಲಿ ಗುರುತಿಸಿಕೊಳ್ಳಲು ಇಚ್ಚಿಸುತ್ತಾರೆ. ಶರಫ್ರಾಝ್ ಅದಕ್ಕೆ ತದ್ವಿರುದ್ಧ. ಗ್ರಾಮ ಪಂಚಾಯತ್ ಸದಸ್ಯನಾಗಿ, ರಾಜ್ಯ ಮಟ್ಟದಲ್ಲಿ ಯೂತ್ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡ ಆತ ತನ್ನ ಸೇವೆಗಳನ್ನು ರಾಜಕೀಯಕ್ಕೆ ಬಳಸಿದವನಲ್ಲ. ಒಂದು ವಿವಾಹ ನಡೆಸುವುದು ಕಷ್ಟಕರ ವಾದ ಕಾಲದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಾಲ್ಕುದು ಸಾಮೂಹಿಕ ವಿವಾಹ ಆಯೋಜಿಸಿದ ಶರಫ್ರಾಝ್ ರಂತಹ ಸಮಾಜಮುಖಿ ರಾಜಕಾರಣಿಗಳು ಈ ಸಮಾಜಕ್ಕೆ ಅಗತ್ಯ ವಿದೆ ಯಲ್ಲವೇ…? ಲಾಕ್‌ಡಾನ್ ಸಮಯದಲ್ಲಿ ಎಲ್ಲರೂ ಮನೆ ಯೊಳಗೆ ಬಂಧಿಯಾಗಿದ್ದರೆ ಶರಫ್ರಾಝ್ ಹಗಲು ರಾತ್ರಿ ಎನ್ನದೆ ಜನರಿಗಾಗಿ ಓಡಾಡುತ್ತಿದ್ದನು. ದುಡಿಯಲು ಬಂದು ನಿರಾಶ್ರಿತರಾದವರಿಗೆ ಊರಿಗೆ ಮರಳುವ ವ್ಯವಸ್ಥೆ, ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ, ಆರ್ಥಿಕ ಗಟ್ಟಿ ಇಲ್ಲದವರಿಗೆ ಆಹಾರ ಕಿಟ್ ಹೀಗೆ ಒಂದಲ್ಲ..ಎರಡಲ್ಲ… ನೂರಾರು ಸೇವೆಗಳನ್ನು ಮಾಡಿದವನು. ಜನಸೇವೆ ಮಾಡಲು ಮನಸ್ಸಿದ್ದರೆ ಅದನ್ನು ಸಾಧಿಸಬಹುದು ಎಂಬುದಕ್ಕೆ ಶರಫ್ರಾಝ್ ಉದಾಹರಣೆ ಯಾಗಿದ್ದಾನೆ.
ಉರ್‌ಮಾಲ್ ಪತ್ರಿಕೆಯ ಇಪ್ಪತ್ತನೇಯ ವಾರ್ಷಿಕ ಪ್ರಯುಕ್ತ ಐದು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 21 ರಂದು ಮಂಗಳಪೇಟೆಯ ಜಂಕ್ಷನ್ ನಲ್ಲಿ ಮಂಗಳಪೇಟೆ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ನಡೆಯಲಿದೆ. ಇದೊಂದು ಐತಿಹಾಸಿಕ ಉತ್ಸವವಾಗಿದೆ. ಶರಫ್ರಾಝ್ ನವಾಝ್ ರವರ ಕ್ರಾಂತಿಕಾರಿ ಹೆಜ್ಜೆ ಗಳು ಇನ್ನಷ್ಟು ಬಲಿಷ್ಠ ವಾಗಲಿ. ಬಡ ಜನರಿಗಾಗಿ ಸದಾ ತೆರೆಯುವ ಶರಫ್ರಾಝ್ ನವಾಝ್‌ನ ಹಸ್ತಗಳು ಸಮೃದ್ಧಿಯ ಸಾಗರವಾಗಲಿ. ನಿಸ್ವಾರ್ಥ ಸೇವೆಗಳನ್ನು ಅಲ್ಲಾಹನು ಸ್ವೀಕರಿಸಲಿ.







