ಬೆಳ್ತಂಗಡಿ:ಮದುವೆಯ ಹೆಸರಿನಲ್ಲಿ ಇಂದು ಹಲವಾರು ಅನಾಚಾರಗಳು ನಡೆಯುತ್ತಿದ್ದು, ಮದುವೆಯನ್ನು ಹೆಚ್ಚು ಭಾರಗೊಳಿಸುವುದರೊಂದಿಗೆ, ಅನಿಸ್ಲಾಮಿಕತೆಗಳಿಂದ ಮದುವೆಯ ಬರಕತ್ತನ್ನು ನೀಗಿಸಲಾಗುತ್ತಿದೆ. ಇದಕ್ಕೊಂದು ಕಡಿವಾಣ ಹಾಕಬೇಕೆಂದುಕೊಂಡು SჄS ಕರ್ನಾಟಕ ರಾಜ್ಯ ಸಮಿತಿಯು ‘ಮಾದರಿ ಮದುವೆ: ಶತದಿನ ಅಭಿಯಾನ’ವನ್ನು ಹಮ್ಮಿಗೊಂಡಿದೆ.
ಆ ಪ್ರಯುಕ್ತ ಎಸ್.ವ್ಯೆ.ಎಸ್ ಬೆಳ್ತಂಗಡಿ ಝೋನ್ ಜಮಾಅತ್ ಪ್ರತಿನಿಧಿಗಳ ಸಂಗಮ ದಿನಾಂಕ 12.12.2025 ಶುಕ್ರವಾರ 3ಗಂಟೆಗೆ ಝೋನ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಆಲoದಿಲ ರವರ ಅಧ್ಯಕ್ಷತೆ ಯಲ್ಲಿ ಗುರುವಾಯನಕೆರೆ ಮಸೀದಿ ಹಾಲ್ ನಲ್ಲಿ ನಡೆಯಲಿರುವುದು.
ಅಸ್ಸಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಗಳ್ ಉಜಿರೆ ಕಾರ್ಯಕ್ರಮದ ದುಆ ನೇತ್ರತ್ವವನ್ನು ನೀಡಲಿದ್ದಾರೆ. ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಬಾ-ಅಲವಿ ಸಾದಾತ್ ತಂಗಳ್ ಕುಪ್ಪೆಟ್ಟಿ ಉದ್ಘಾಟನೆ ಯೊಂದಿಗೆ ಚಾಲನೆ ನೀಡಲಿದ್ದಾರೆ. ಮತ್ತು
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ MSM ಅಬ್ದುಲ್ ರಶೀದ್ ಝ್ಯೆನಿ ಕಾಮಿಲ್ ಸಖಾಫಿ ಮಾದರಿ ಮದುವೆ ಬಗ್ಗೆ ವಿಷಯ ಮಂಡಿಸಲಿದ್ದಾರೆ.
ಬೆಳ್ತಂಗಡಿ ಝೋನ್ ವ್ಯಾಪ್ತಿಯ 60 ಮೊಹಲ್ಲಾ ಗಳಿಂದ ಖತೀಬರು, ಜಮಾಅತ್ ಪ್ರತಿನಿದಿಗಳು ಸೇರಿ ಸುಮಾರು 350ರಷ್ಟು ನಾಯಕರುಗಳು ಭಾಗವಹಿಸಲಿದ್ದಾರೆ. ಎಂದು ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ