janadhvani

Kannada Online News Paper

ಕೆಸಿಎಫ್ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ-25: ಯುಎಇ ಚಾಂಪಿಯನ್

ಸೌದಿ ಅರೇಬಿಯಾ ಎರಡನೇ ಸ್ಥಾನವನ್ನು ಹಾಗಛ ಯುಕೆ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು

ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು ಆನ್ಲೈನ್ ಮೂಲಕ ನವೆಂಬರ್ 28 ಹಾಗೂ 29 ರಂದು ಬಹಳ ಯಶಸ್ವಿಯಾಗಿ ನಡೆಯಿತು. 10 ದೇಶಗಳಿಂದ ಭಾಗವಹಿಸಿದ 135 ಸ್ಪರ್ಧಾರ್ಥಿಗಳು 4 ವೇದಿಕೆಗಳಲ್ಲಾಗಿ 20 ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು.

ಎಲ್ಲಾ ಸ್ಪರ್ಧೆಗಳ ಫಲಿತಾಂಶ ಹೊರಬಂದಾಗ 88 ಅಂಕಗಳೊಂದಿಗೆ ಯುಎಇ ರಾಷ್ಟ್ರವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. 79 ಅಂಕಗಳೊಂದಿಗೆ ಸೌದಿ ಅರೇಬಿಯಾ ಎರಡನೇ ಸ್ಥಾನವನ್ನು ಪಡೆದಾಗ 69 ಅಂಕಗಳೊಂದಿಗೆ ಯುಕೆ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಉಳಿದಂತೆ ಒಮಾನ್ 66, ಈಜಿಪ್ಟ್ 58, ಖತರ್ 45, ಬಹರೈನ್ 26, ಕುವೈತ್ 13, ಇರಾಕ್ 5 ಹಾಗೂ ಮಲೇಷಿಯಾ 1 ಅಂಕಗಳನ್ನು ಪಡೆದುಕೊಂಡಿದೆ.

ಸೀನಿಯರ್ ವಿಭಾಗದ ವೈಯುಕ್ತಿಕ ಚಾಂಪಿಯನ್ ಸ್ಥಾನವನ್ನು ಸಯ್ಯಿದ್ ಮುಹಮ್ಮದ್ ಜುನೈದ್ (ಒಮಾನ್) ಮುಹಮ್ಮದ್ ಶಹೀಮ್ (ಬಹರೈನ್) ಹಾಗೂ ಮುಹಮ್ಮದ್ ಶಾದ್ ಖಮರ್ (ಯುಕೆ) ರವರು ಪಡೆದುಕೊಂಡರು. ಜನರಲ್ ವಿಭಾಗದ ವೈಯುಕ್ತಿಕ ಚಾಂಪಿಯನ್ ಸ್ಥಾನವನ್ನು ಅಬ್ದುಲ್ ಖಾದರ್ ಮುಆಝ್ (ಸೌದಿ ಅರೇಬಿಯಾ) ರವರು ತನ್ನದಾಗಿಸಿಕೊಂಡರು.

ಪ್ರತೀ ಸ್ಪರ್ಧೆಗಳ ಫಲಿತಾಂಶವನ್ನು ತಿಳಿಯಲು ಕೆಸಿಎಫ್ ವಾಟ್ಸಾಪ್ ಚಾನಲಿಗೆ ಭೇಟಿ ನೀಡಿ

Follow the KCF Intl Council channel on WhatsApp