ಮಂಗಳೂರು: ಅಹ್ಲುಸುನ್ನತಿ ವಲ್ ಜಮಾಅತಿನ ಆದರ್ಶದಡಿ ಕಾರ್ಯಾಚರಣೆ ನಡೆಸುತ್ತಿರುವ ಅಲ್ ಹಸನ್ ಅಕಾಡೆಮಿ ಅಡ್ಯಾರ್ ನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ನ್ಯೂಬೀ ಕುರ್ ಆನಿಕ್ ಪ್ರಿಸ್ಕೂಲ್ ಸೋಮವಾರ ಬೆಳಿಗ್ಗೆ 10 ಘಂಟೆಗೆ ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ ದುಆಃ ನೆರವೇರಿಸಿ ಪುಠಾಣಿಗಳಿಗೆ ಜೇನು ಹಂಚುವ ಮೂಲಕ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ತಂಙಳ್ ನ್ಯೂಬೀ ಪ್ರೀಸ್ಕೂಲ್ ಮನೆಮಾತಾಗಿದೆ.ಕನ್ನಡ ಮಣ್ಣಿನ ಮಕ್ಕಳಿಗೆ ಸೂಕ್ತವಾದ ಮತ್ತು ಆಧುನಿಕವಾದ ಕೋರ್ಸ್ ಆಗಿದ್ದು ಮಂಗಳೂರಿಗರು ನೆಚ್ಚಿಕೊಂಡಿದ್ದಾರೆ ಎನ್ನುವುದಕ್ಕೆ ಅಲ್ ಹಸನ್ ಅಕಾಡೆಮಿಯಲ್ಲಿ ಸೇರಿರುವ ಜನರೇ ಸಾಕ್ಷಿ ನೀವೆಲ್ಲಾ ಭಾಗ್ಯವಂತರು ಇದನ್ನು ಇನ್ನಷ್ಟು ಜನರಿಗೂ ತಲುಪಿಸಿ ಉಪಯೋಗಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ವಹಿಸಿದ್ದು ಸವಿಸ್ತಾರವಾಗಿ ಮನಮುಟ್ಟುವಂತೆ ಪ್ರೀಸ್ಕೂಲ್ ಬಗ್ಗೆ ಮಾತಾಡಿ ಆವೇಶಗೊಳಿಸಿದರು
ಕಾರ್ಯಕ್ರಮದಲ್ಲಿ ಮಂಗಳೂರು ಪೋಲೀಸ್ ಲೇನ್ ಮಸೀದಿಯ ಖತೀಬರಾದ ಹಿರಿಯ ವಿದ್ವಾಂಸ ಅಬುಲ್ ವಫ ಖಾಸಿಂ ಮುಸ್ಲಿಯಾರ್ ಶುಭಹಾರೈಸಿದರು.
ಅಡ್ಯಾರ್ ಪದವು ಮಸೀದಿಯ ಖತೀಬರಾದ ಮುಹಮ್ಮದ್ ಸಖಾಫಿ ಪೂಡಲ್ ಜೆಪ್ಪು ರೀಜನಲ್ ಎಸ್.ಎಂ.ಎ ಪ್ರಧಾನ ಕಾರ್ಯದರ್ಶಿ ಸತ್ತಾರ್ ಸಖಾಫಿ ಅಡ್ಯಾರ್ ಪದವು,
ಆರಿಫ್ ಮದನಿ ಬೊಳ್ಳಾಯಿ, ಅಬ್ಬಾಸ್ ಝುಹ್ರಿ ಅಸೈ, ರಫೀಕ್ ಮದನಿ ಪಾಣೆಮಂಗಳೂರು,
ಅಡ್ಯಾರ್ ಬೀರ್ಪುಗುಡ್ಡೆ, ಜಮಾಅತ್ ಅಧ್ಯಕ್ಷ ಅಬ್ದುಲ್ ಕರೀಂ ಹಾಜಿ ಉದ್ಯಮಿಗಳಾದ ಹೈಸಮ್ ಶಾಕಿರ್ ಹಾಜಿ ಕಣ್ಣೂರು,ಮೋನು ಹಾಜಿ ಬೀರ್ಪುಗುಡ್ಡೆ, ನ್ಯೂಬೀ ಕೋ ಆರ್ಡಿನೇಟರ್ ನೌಫಲ್ ಮನ್ಶರ್ ಎಸ್ ವೈ ಎಸ್ ಮಂಗಳೂರು ಸೆಂಟರ್ ಅಧ್ಯಕ್ಷರಾದ ಝುಬೈರ್ ಕಣ್ಣೂರು ಯುವ ಉದ್ಯಮಿಗಳಾದ ಕಲಂದರ್ ಮಂಗಳೂರು, ಇಕ್ಬಾಲ್ ವಳವೂರು, ಸುರತ್ಕಲ್ ಬ್ಲಾಕ್ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಅಪ್ಪು ಅಶ್ರಫ್ ಸಮದ್ ವಳವೂರು ಆದಂ ತುಂಬೆ,ಜನಾಬ್ ಅನ್ಸಾರ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ರಹಿಮಾನ್ ಸಖಾಫಿ ಬಾಕ್ರಬೈಲ್ ಸ್ವಾಗತಿಸಿ ವಂದಿಸಿದರು.
ವರದಿ :ಇಮ್ರಾನ್ ಹರೇಕಳ