janadhvani

Kannada Online News Paper

ಧರ್ಮನಿಷ್ಠೆಯ ಕಾರ್ಯಾಚರಣೆಯಿಂದ ಮಾತ್ರ ಯಶಸ್ಸು ಸಾಧ್ಯ- ಕೂಟಂಬಾರ ದಾರಿಮಿ ಉಸ್ತಾದ್

ಭಕ್ತಿ ಮತ್ತು ನಿಷ್ಠೆ ಪ್ರತಿಯೋರ್ವ ಸುನ್ನೀ ಕಾರ್ಯಕರ್ತನ ಮುಖಚರ್ಯೆಯಾಗಿದ್ದು ಅವುಗಳಿದ್ದರೆ ಮಾತ್ರ ಯಶಸ್ಸು ಸಾಧ್ಯವೆಂದು ಕೇರಳ ಮುಸ್ಲಿಂ ಜಮಾಅತ್ ನಾಯಕ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಉಸ್ತಾದ್ ಕಾರ್ಯಕರ್ತರಿಗೆ ಉಪದೇಶ ನೀಡಿದರು. ದ.ಕ. ವೆಸ್ಟ್ ಜಿಲ್ಲೆ ಪಾಣೆಮಂಗಳೂರಿನ ಸಾಗರ್ ಹಾಲ್ ನಲ್ಲಿ ಆಯೋಜಿಸಿದ್ದ ‘ಲೀಡ್ ಕ್ರಾಫ್ಟ್’ ಕಾರ್ಯಕರ್ತರ ಸಮಾವೇಶದಲ್ಲಿ ಕೂಟಂಬಾರ ದಾರಿಮಿ ಉಸ್ತಾದರು ಮುಖ್ಯ ಭಾಷಣ ಮಾಡಿದರು.

ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದರ ದುಆ ಆಶೀರ್ವಚನದೊಂದಿಗೆ ಆರಂಭವಾದ ಈ ಸಮಾವೇಶವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರ.ಕಾರ್ಯದರ್ಶಿ ಅಬೂಸುಫಿಯಾನ್ ಮದನಿ ಉದ್ಘಾಟಿಸಿದರು. ಎಸ್.ಪಿ. ಹಂಝ ಸಖಾಫಿ, ಜಿ.ಎಂ.ಎಂ.ಸಖಾಫಿ, ಉಜಿರೆ ಮಲ್ಜಅ್ ತಂಙಳ್ ಮುಂತಾದವರು ಮಾತಾಡಿದರು. ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯ ಕೋಶಾಧಿಕಾರಿ ಅಬ್ದುರ್ರಝಾಕ್ ಮದನಿ ವಳವೂರು,ಪಡ್ಡಂತಡ್ಕ ತಂಗಳ್,ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಕಾರ್ಯದರ್ಶಿ ಹಮೀದ್ ಬಜ್ಪೆ, ರಾಜ್ಯ ನಾಯಕ ಸಾದಿಕ್ ಮಾಸ್ಟರ್, ಜಿಲ್ಲಾ ಉಪಾಧ್ಯಕ್ಷ ಪಟ್ಟೋರಿ ಉಸ್ಮಾನ್ ಸಅದಿ,ಬಶೀರ್ ಪಂಜಿಮೊಗರು, ಕೋಶಾಧಿಕಾರಿ ಬಶೀರ್ ಹಾಜಿ ಕುಂಬ್ರ,ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಕಿನ್ಯ,ದಅ್ವಾ ಕಾರ್ಯದರ್ಶಿ ಮುಹಮ್ಮದ್ ಮದನಿ ಸಾಮನಿಗೆ,ಇಸಾಬಾ ಕಾರ್ಯದರ್ಶಿ ಇಸ್ಮಾಯಿಲ್ ಕೆಸಿ ರೋಡ್,ಆಂತರಿಕ ವ್ಯವಹಾರ ಕಾರ್ಯದರ್ಶಿ ಇಸ್ಮಾಯೀಲ್ ಅಗ್ರಹಾರ,
ಜಿಲ್ಲಾ ನಾಯಕರಾದ ಸಿದ್ದೀಖ್ ಸಖಾಫಿ ಮೂಳೂರು,ಎಸ್ ಕೆ ಖಾದಿರ್ ಹಾಜಿ,ಅಬ್ದುಲ್ ಖಾದಿರ್ ಕಾವೂರು,ಮುಹ್ಯಿದ್ದೀನ್ ಅಲ್ ಸಫರ್,ಬಾವ ಫಕ್ರುದ್ದೀನ್,ಬಶೀರ್ ಗಾಣೆಮಾರ್, ದ.ಕ.ಈಸ್ಟ್ ಜಿಲ್ಲಾ ಕಾರ್ಯದರ್ಶಿ ಯೂಸುಫ್ ಸಯೀದ್, ಮಜೂರ್ ಸಅದಿ,ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್,SMA ನಾಯಕ ಹಮೀದ್ ಹಾಜಿ, ಕಾಸಿಂ ಹಾಜಿ ಪುತ್ತೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಆತ್ಮಕಥೆ ‘ವಿಶ್ವಾಸಪೂರ್ವಂ’ ಇದರ ಕನ್ನಡ ಆವೃತ್ತಿ ‘ಪ್ರೀತಿಯಿಂದ’ ಪುಸ್ತಕದ ಮುಖಪುಟ ಬಿಡುಗಡೆ ಗೊಳಿಸಲಾಯಿತು. ಪುಸ್ತಕದ ಪ್ರೀ ಪಬ್ಲಿಕೇಶನ್ ಬುಕಿಂಗ್ ಕೂಡ ಇದೇ ಸಂದರ್ಭದಲ್ಲಿ ಆರಂಭಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಹನೀಫ್ ಹಾಜಿ ಬಜ್ಪೆ ವಹಿಸಿದರು. ಜಿಲ್ಲಾ ಪ್ರ.ಕಾರ್ಯದರ್ಶಿ ಖತರ್ ರಹೀಮ್ ಸಅದಿ ಸ್ವಾಗತಿಸಿದರು.