ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಮುಸ್ಲಿಂ ಜಮಾಅತ್ ದ. ಕ ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಸ ಅ ರವರ 1500 ನೇ ಜನ್ಮ ದಿನಾಚರಣೆ ಪ್ರಯುಕ್ತ ದಿನಾಂಕ 1-9-2025 ಸೋಮವಾರ ಇಲಲ್ ಹಬೀಬ್ ಮೀಲಾದ್ ರ್ಯಾಲಿ ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮಂಗಳೂರಿನಲ್ಲಿ ಆಯೋಜಿಸಲಾಗಿದೆ.
ಅಪರಾಹ್ನ 2.30 ಗಂಟೆಗೆ ಇಲಲ್ ಹಬೀಬ್ ಮೀಲಾದ್ ರ್ಯಾಲಿಯು ಪ್ರಾರಂಭವಾಗಲಿದ್ದು, ಜ್ಯೋತಿ ವೃತ್ತದಿಂದ ಪುರಭವನ ತನಕ ನಡೆಯಲಿದೆ. ಹುಸೈನ್ ಮುಈನಿ ಮಾರ್ನಾಡ್ ರಾಲಿಯಲ್ಲಿ ಸಂದೇಶ ಭಾಷಣ ನಡೆಸಲಿದ್ದಾರೆ. ಇಲಲ್ ಹಬೀಬ್ ಮೀಲಾದ್ ಸಮಿತಿಯ ಚೇರ್ ಮಾನ್ ಬಶೀರ್ ಹಾಜಿ ಬಿಸಿರೋಡು ಅಧ್ಯಕ್ಷತೆ ವಹಿಸಲಿದ್ದಾರೆ.
ದ. ಕ ಜಿಲ್ಲಾ ವೆಸ್ಟ್ ವ್ಯಾಪ್ತಿಯ
ಮಂಗಳೂರು, ಸುರತ್ಕಲ್, ಉಳ್ಳಾಲ, ದೇರಳಕಟ್ಟೆ, ಮುಡಿಪು, ಬಂಟ್ವಾಳ, ಮೂಡಬಿದಿರೆ, ತಲಪಾಡಿ ಸೇರಿದಂತೆ 8 ಝೋನ್ ಗಳ ಎಸ್ ಎಸ್ ಎಫ್, ಎಸ್ ವೈ ಎಸ್, ಮುಸ್ಲಿಂ ಜಮಾಅತ್
ಹಾಗೂ ಸುನ್ನೀ ಸಂಘಟನೆ ಗಳ ಕಾರ್ಯ ಕರ್ತರು ವಿವಿಧ ದಫ್, ಸ್ಕೌಟ್ ತಂಡಗಳೊಂದಿಗೆ ಭಾಗವಹಿಸಲಿದ್ದಾರೆ.
ಸಂಜೆ 4.30 ಕ್ಕೆ 1500 ಮಂದಿಯನ್ನು ಸೇರಿಸಿ
ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ನಡೆಯಲಿದ್ದು ಪ್ರಸಿದ್ಧ ಸೂಫೀ ಹಾಡುಗಾರರು ಭಾಗವಹಿಸಲಿದ್ದಾರೆ.
ಮಗ್ರಿಬ್ ನಮಾಝ್ ನಂತರ ಹುಬ್ಬುರ್ರಸೂಲ್ ಪ್ರಭಾಷಣ ನಡೆಯಲಿದ್ದು ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಬಹು ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ
ಬಹು ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಹುಬ್ಬುರ್ರಸೂಲ್ ಪ್ರಭಾಷಣ ನಡೆಸಲಿದ್ದಾರೆ.
ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಡಾ ಶೇಖ್ ಬಾವ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ಸಾದಾತುಗಳು ಉಲಮಾಗಳು, ಹಾಗೂ ಉಮರಾಗಳು ಭಾಗವಹಿಸಲಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದವರು.
ಹಾಫಿಳ್ ಯಾಕೂಬ್ ಸಅದಿ ನಾವೂರು
ಜನರಲ್ ಕನ್ವೀನರ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಿರ್ವಹಣಾ ಸಮಿತಿ
ಭಾಗವಹಿಸಿದವರು
ಡಾ ಶೇಖ್ ಬಾವ ಹಾಜಿ ಮಂಗಳೂರು ( ಅಧ್ಯಕ್ಷರು ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಿರ್ವಹಣಾ ಸಮಿತಿ)
ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ (ಕೋಶಾಧಿಕಾರಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಿರ್ವಹಣಾ ಸಮಿತಿ ಹಾಗೂ ಅಧ್ಯಕ್ಷರು ವಕಫ್ ಸಲಹಾ ಸಮಿತಿ ದ ಕ ಜಿಲ್ಲೆ)
ಮಹಬೂಬ್ ಸಖಾಫಿ ಕಿನ್ಯ
(ಅಧ್ಯಕ್ಷರು ಎಸ್ ವೈ ಎಸ್ ದ. ಕ ಜಿಲ್ಲೆ ವೆಸ್ಟ್)
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ (ಪ್ರಧಾನ ಕಾರ್ಯದರ್ಶಿ ಎಸ್ ವೈ ಎಸ್ ದ. ಕ ಜಿಲ್ಲೆ
ಬಶೀರ್ ಹಾಜಿ ಕುಂಬ್ರ
( ಚೇರ್ಮನ್ ಇಲಲ್ ಹಬೀಬ್ ಮೀಲಾದ್ ರಾಲಿ ಸಮಿತಿ)
ಅಝ್ಮಲ್ ಕಾವೂರು
ಪ್ರಧಾನ ಕಾರ್ಯದರ್ಶಿ ( ಇಲಲ್ ಹಬೀಬ್ ಮೀಲಾದ್ ರಾಲಿ ಸಮಿತಿ)
ಅಬ್ದುಲ್ ರಝಾಕ್ ಭಾರತ್
(ಕೋಶಾಧಿಕಾರಿ ಎಸ್ ವೈ ಎಸ್ ದ ಕ ಜಿಲ್ಲೆ)


