ಕಾವೂರು: SSF ಕಾವೂರು ಸೆಕ್ಟರ್ ವತಿಯಿಂದ ಜೂ.28ರಂದು ಮಾಸಿಕ ಸಭೆ, ಸೆಕ್ಟರ್ ವ್ಯಾಪ್ತಿಯಲ್ಲಿ ನಡೆದ SSLC “ಕಾನ್ಫಿಡೆಂನ್ಸ್ ಟೆಸ್ಟ್ ನಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಾರಿಯತ್ ಸ್ವಲಾತ್ ಮಜ್ಲಿಸ್, ಅಗಲಿದ ನಾಯಕರಿಗೆ, ಕಾರ್ಯಕರ್ತರಿಗೆ ತಹ್ಲೀಲ್ ಸಮರ್ಪಣೆ ಯು ಕಾವೂರಿನ ಕೆ.ಎಚ್ ಬಾವ ಕಾಂಪೌಂಡ್ ನಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಮುಹಮ್ಮದ್ ಅಝ್ಮಲ್ ಶಾಂತಿನಗರ (ಅಧ್ಯಕ್ಷರು SSF ಕಾವೂರು ಸೆಕ್ಟರ್ ) ವಹಿಸಿದ್ದರು , SYS ಕಾವೂರು ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಕಾವೂರು ಪ್ರತಿಭಾ ಪುರಸ್ಕಾರ ವನ್ನುದ್ದೇಶಿಸಿ ಮಾತನಾಡಿದರು.ನಂತರ SYS SSF ಕಾವೂರು ನಾಯಕರಿಂದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೊನೆಯಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಸೀಫ್ ಪಂಜಿಮೊಗರು ವಂದಿಸಿದರು.