ವಾಷಿಂಗ್ಟನ್: ದ್ವಿಪಕ್ಷೀಯ ಸಭೆಗಾಗಿ ಮಂಗಳವಾರ (ಫೆ.4) ಶ್ವೇತಭವನಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ವಾಷಿಂಗ್ಟನ್ ಡಿಸಿಯಲ್ಲಿ ಜಮಾಯಿಸಿದ ಜನರು ಪ್ರತಿಭಟನೆ ನಡೆಸಿದ್ದಾರೆ. ಟ್ರಂಪ್ ಒಬ್ಬ ‘ಯುದ್ಧ ಅಪರಾಧಿ’ಯನ್ನು ಶ್ವೇತಭವನಕ್ಕೆ ಆಹ್ವಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ಯಾಲೆಸ್ತೀನಿಯರು ನೆರೆಯ ದೇಶಗಳಿಗೆ ಸ್ಥಳಾಂತರಗೊಂಡ ನಂತರ, ಯುದ್ಧದಿಂದ ಜರ್ಜರಿತವಾಗಿರುವ ಗಾಝಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ‘ವಿಶ್ವದ ಜನರು’ ಅಲ್ಲಿ ವಾಸಿಸುವಂತೆ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಟ್ರಂಪ್, ತಮ್ಮ ಆಘಾತಕಾರಿ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ. ಪ್ಯಾಲೆಸ್ತೀನಿಯರು ‘ಗಾಝಾ ತೊರೆಯಲು ಮುಂದಾಗಿದ್ದಾರೆ’ ಎಂದು ಹೇಳುವ ಮೂಲಕ ಟ್ರಂಪ್ ಹೊಸ ಆತಂಕವನ್ನು ಹುಟ್ಟು ಹಾಕಿದ್ದಾರೆ. ಟ್ರಂಪ್ ಹೇಳಿಕೆ ಗಾಝಾ ಜನರಲ್ಲಿ ಜನಾಂಗೀಯ ನಿರ್ಮೂಲನೆಯ ಭಯವನ್ನು ಹುಟ್ಟು ಹಾಕಿದೆ.
ಟ್ರಂಪ್ಗೆ ಪ್ರತಿಕ್ರಿಯೆಯಾಗಿ ಹಮಾಸ್ ಹೇಳಿಕೆ ಬಿಡುಗಡೆ ಮಾಡಿದೆ. “ಟ್ರಂಪ್ ಯೋಜನೆಗಳು ಗಾಝಾದಲ್ಲಿ ಅವ್ಯವಸ್ಥೆ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುವ ಒಂದು ಪಿತೂರಿಯಾಗಿದೆ. ಗಾಝಾ ಪಟ್ಟಿಯಲ್ಲಿರುವ ನಮ್ಮ ಜನರು ಈ ಯೋಜನೆಗಳನ್ನು ಜಾರಿಗೆ ತರಲು ಬಿಡುವುದಿಲ್ಲ” ಎಂದು ಹೇಳಿದೆ.
ನೆತನ್ಯಾಹು ಅಮೆರಿಕ ಭೇಟಿಗೂ ಮುನ್ನವೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಟ್ರಂಪ್ “ಗಾಝಾ ಕದನ ವಿರಾಮ ಮುಂದುವರಿಯುವ ಗ್ಯಾರಂಟಿ ನನಗಿಲ್ಲ” ಎಂದಿದ್ದರು. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ” ಗಾಝಾ ಜನತೆಯನ್ನು ಸುತ್ತಮುತ್ತಲಿನ ಈಜಿಪ್ಟ್, ಜೋರ್ಡಾನ್, ತುರ್ಕಿ ದೇಶಗಳು ಕರೆಸಿಕೊಳ್ಳಿ” ಎಂದಿದ್ದರು.
ಕುವೈತ್ನ ಶತ ಪ್ರಯತ್ನದ ಫಲವಾಗಿ 15 ತಿಂಗಳ ಬಳಿಕ ಜನವರಿ 16, 2025ರಿಂದ ಗಾಝಾದಲ್ಲಿ ಇಸ್ರೇಲ್ ಆಕ್ರಮಣ ತಾತ್ಕಾಲಿಕ ಕೊನೆಗೊಂಡಿದೆ. ಜನರು ತಮ್ಮ ಮೂಲ ಸ್ಥಳಗಳಿಗೆ ಮರಳಿ ಛಿದ್ರವಾದ ಬದುಕನ್ನು ಮರು ರೂಪಿಸುವ ಪ್ರಯತ್ನದಲ್ಲಿದ್ದಾರೆ.
ಈ ನಡುವೆ ಗಾಝಾದಲ್ಲಿ ನಿರಂತರ ನರಮೇಧ ನಡೆಸಿದ ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ತೆರಳಿ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಟ್ರಂಪ್ ಕೂಡ ಪದೇ ಪದೇ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇವೆಲ್ಲವೂ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಗಾಝಾ ಜನತೆಯನ್ನು ಅವರ ನಾಡಿನಿಂದ ಹೊರದಬ್ಬಿ ಗಾಝಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ.
















ಇನ್ನಷ್ಟು ಸುದ್ದಿಗಳು
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ
ನಕಲಿ ವೆಬ್ಸೈಟ್ಗಳ ವಿರುದ್ಧ ಜಾಗ್ರತೆ- ಸೌದಿ ವಾಣಿಜ್ಯ ಸಚಿವಾಲಯ ಎಚ್ಚರಿಕೆ
ಹಾರ್ಮುಜ್ ಜಲಸಂಧಿ ಸಂಘರ್ಷ: ಇರಾನ್ ಮೇಲೆ ಮತ್ತೆ ಅಮೆರಿಕ ಸೇನೆ ದಾಳಿ
ಇಸ್ರೇಲ್ ಸೈನ್ಯ ಗಾಜಾದಲ್ಲಿ ನಡೆಸಿದ ನರಮೇಧ : ಎರಡು ವರ್ಷಗಳಲ್ಲಿ 20,000 ಮಕ್ಕಳ ಹತ್ಯೆ- ವಿಶ್ವಸಂಸ್ಥೆ ವರದಿ
ಮಕ್ಕಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಧೂಳಿನ ಬಿರುಗಾಳಿ ಮುಂದುವರಿಕೆ- ಹಲವು ಭಾಗಗಳಲ್ಲಿ ಮಳೆ
ಶಾಂತಿ ಮರೀಚಿಕೆ…?: ಲೆಬನಾನ್ನಲ್ಲಿ ದಾಳಿ ತೀವ್ರಗೊಳಿಸಿದ ಇಸ್ರೇಲ್- ಮತ್ತೆ ಹಾರ್ಮುಝ್ ಬಂದ್!
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ