ಯುಎಇ: ದೇಶದ ಉದ್ಯೋಗ ವೀಸಾ ನಿಯಮಗಳಲ್ಲಿ ಬದಲಾವಣೆಯನ್ನು ಯುಎಇ ತಂದಿದೆ. ಇತ್ತೀಚೆಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಘೋಷಿಸಿದೆ. ದೇಶದ ಖಾಸಗಿ ಉದ್ಯೋಗ, ಪ್ರವಾಸೋಧ್ಯಮ,ಶಿಕ್ಷಣ ವಲಯಗಳಿಗೆ ಶಕ್ತಿ ನೀಡುವ ನಿರ್ಧಾರವನ್ನು ಯುಎಇ ಜಾರಿಗೆ ತರುತ್ತಿದೆ.
ಪ್ರಸ್ತುತ, ವಸತಿ ವೀಸಾಗಾಗಿ 3,000 ದಿರ್ಹಂಗಳನ್ನು ವಲಸೆ ವಿಭಾಗದಲ್ಲಿ ಹೂಡಿಕೆ ಮಾಡುವುದು ಕಡ್ಡಾಯವಾಗಿತ್ತು.ವೀಸಾಗಳನ್ನು ರದ್ದು ಪಡಿಸಿದಾಗ ಆ ಮೊತ್ತವನ್ನು ಮರಳಿಸುವ ರೀತಿಯಲ್ಲಿ ಕ್ರಮೀಕರಿಸಲಾಗಿತ್ತು, ಆದರೆ ಹೊಸ ನಿರ್ಧಾರದಿಂದಾಗಿ ಇನ್ನು ಮುಂದೆ ಹಣ ಮುಂಗಡವಾಗಿ ಪಾವತಿಸಬೇಕಾಗಿಲ್ಲ.ಈಗಾಗಲೇ ಪಡೆಯಲಾದ ಹದಿನಾಲ್ಕು ಬಿಲಿಯನ್ ಯುಎಇ ದಿರ್ಹಮ್‌ಗಳನ್ನು ಉದ್ಯೋಗದಾತರಿಗೆ ಮರಳಿಸಲಾಗುವುದು.
ಬದಲಾಗಿ ಪ್ರತೀ ಕಾರ್ಮಿಕರು ಅರವತ್ತು ದಿರ್ಹಮ್ ಗಳು ಪ್ರತಿ ವಾರ್ಷಿಕವಾಗಿ ಪಾವತಿಸಿ ರಕ್ಷಣಾ ಯೋಜನೆಯಲ್ಲಿ ಸದಸ್ಯರಾಗಬಹುದು.
ವೀಸಾ ಅವಧಿ ಮುಗಿದ ನಂತರ ಮರಳದೆ ಅಕ್ರಮವಾಗಿ ದೇಶದಲ್ಲಿದ್ದವರಿಗೆ ಎರಡು ವರ್ಷಗಳ ಕಾಲ ಯು.ಎ.ಇ.ಗೆ ಬರಲು ನಿಷೇಧ ಹೇರಲಾಗಿತ್ತು. ಇದು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ.ಬದಲಿಗೆ, ಅವರು ಕೂಡ ದಂಡ ಪಾವತಿಸಿ ಹೊಸ ವೀಸಾದಲ್ಲಿ ಯುಎಇಗೆ ಹಿಂದಿರುಗಲು ಸಾಧ್ಯವಾಗುತ್ತದೆ.
ಯುಎಇ ವಿಮಾನ ನಿಲ್ದಾಣಗಳ ಮೂಲಕ ಇತರ ರಾಷ್ಟ್ರಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಟ್ರಾನ್ಸಿಟ್ ವೀಸಾಗಳನ್ನು 48 ಗಂಟೆಗಳಿಗಾಗಿ ಒದಗಿಸಲಾಗುತ್ತದೆ.ಈ ವೀಸಾ 96 ಗಂಟೆಗಳ ಕಾಲವಾಗಿದ್ದರೆ ಕೇವಲ 50 ದಿರ್ಹಂ ಪಾವತಿಸಿದರೆ ಸಾಕು. ಈಗ ಈ ವಿಸಾಗೆ ಮುನ್ನೂರು ದಿರ್ಹಮ್ಗಳು ಪಾವತಿಸಬೇಕಾಗಿದೆ.
ಉದ್ಯೋಗ ವಿಸಾದ ಕಾಲಾವಧಿ ನಂತರ ಕೆಲಸದಲ್ಲಿ ಮುಂದುವರಿಯುವ ಉದ್ದೇಶ ಇರುವವರಿಗೆ ಆರು ತಿಂಗಳ ತಾತ್ಕಾಲಿಕ ವಿಸಾ ಅನುಮತಿಸಲಾಗುವುದು.
ರಾಷ್ಟ್ರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಬರುವವರಿಗೆ ಎರಡು ವರ್ಷಗಳ ವಿದ್ಯಾರ್ಥಿ ವೀಸಾ ನೀಡಲು ಕ್ಯಾಬಿನೆಟ್ ನಿರ್ಧರಿಸಿದೆ.
ಕಾಲಾವಧಿ ನಂತರ ಮತ್ತೊಂದು ವೀಸಾಕ್ಕೆ ಬದಲಾವಣೆಗಾಗಿ ದೇಶ ತೊರೆಯಬೇಕಾದ ಅಗತ್ಯವಿಲ್ಲ ಯುಎಇಯಲ್ಲೇ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ದುಬೈ ಆಡಳಿತಾಧಿಕಾರಿ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ನೇತೃತ್ವದಲ್ಲಿ ಅಬುಧಾಬಿಯಲ್ಲಿ ಸೇರಿದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉದ್ಯೋಗ ವೀಸಾಗಳಿಗೆ ಭದ್ರತಾ ಠೇವಣಿ ಅಗತ್ಯವಿರುವುದಿಲ್ಲ.