janadhvani

Kannada Online News Paper

SSF ಮೆಜೆಸ್ಟಿಕ್ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಪ್ರೌಢ ಸಮಾಪ್ತಿ

ಬೆಂಗಳೂರು:- ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆಯ ಮೆಜೆಸ್ಟಿಕ್ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಗಂಗೊಂಡನಹಳ್ಳಿ ಮೀರಾಜುಲ್ ಮುಮಿನೀನ್ ಮದರಸ ಹಾಲ್ ನಲ್ಲಿ 03/11/2024 ಭಾನುವಾರ ಬಹಳ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವು ಧ್ವಜಾರೋಹಣ ದೊಂದಿಗೆ ಚಾಲನೆಗೊಂಡು ಬಳಿಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಯ್ಯದ್ ಕುoಞಕೋಯ ತಂಗಳರು ದುಆ ಆಶೀರ್ವಚನಕ್ಕೆ ನೇತೃತ್ವ ನೀಡಿದರೆ ,ಸ್ಥಳೀಯ ಖತೀಬ್ ಮೌಲಾನ ಅರ್ಶದ್ ರಝ ಹಜ್ರತ್ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಜಿಲ್ಲಾ ಐಟಿ ಕಾರ್ಯದರ್ಶಿ ನೌಫಲ್ ಅಡೋರ ಮತ್ತು ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಶಂಸುದ್ದೀನ್ ಗಾಂಜಾಲ್ ಉಪಸ್ಥಿತರಿದ್ದರು.

ಪ್ರಸ್ತುತ ಕಾರ್ಯಕ್ರಮದಲ್ಲಿ 8 ಯೂನಿಟ್ ಗಳಿಂದ ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು, ನಾಲ್ಕು ವೇದಿಕೆಗಳಲ್ಲಿ ನೂರರಷ್ಟು ಸ್ಪರ್ಧೆಗಳು ನಡೆಯಿತು. ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಸಂಜೆ ಸಾಹಿತ್ಯೋತ್ಸವ ಸಮಿತಿ ಚೆಯರ್ಮಾನ್ ಇರ್ಷಾದ್ ಖಾದ್ರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ಜರುಗಿತು, ಪ್ರಸ್ತುತ ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯೋತ್ಸವದ ಚೇರ್ಮ್ಯಾನ್ ಫಾರೂಕ್ ಅಮಾನಿ ಉದ್ಘಾಟಿಸಿದರು, SSF ಜಿಲ್ಲಾ ಅಧ್ಯಕ್ಷರಾದ ಲತೀಫ್ ನಈಮಿ ಕಾರ್ಯದರ್ಶಿ ಸಬೀಬ್ ,ಜಿಲ್ಲಾ ಸಾಹಿತ್ಯೋತ್ಸವ ಕನ್ವಿನರ್ ಅಲ್ತಾಫ್. ಮೌಲಾನ ಅರ್ಶದ್ ರಝ ಹಜ್ರತ್ ಸ್ಥಳೀಯ ಖತೀಬ್ ಪ್ರಾಸ್ತಾವಿಕವಾಗಿ ಮಾತನಾಡಿದರು , . ಡಿವಿಷನ್ ಮಟ್ಟದಲ್ಲಿ ಚಾಂಪಿಯನ್ ಆಗಿ ಅಝದ್ ನಗರ ಮತ್ತು ರನ್ನರ್ ಅಪ್ ಆಗಿ ಕಂಬಿಪುರ ಯೂನಿಟ್ಗಳು ಆಯ್ಕೆಗೊಂಡವು .

ವೇದಿಕಯಲ್ಲಿದ್ದ ಮುಖ್ಯ ಅತಿಥಿಗಳು ವಿಜೇತ ಯೂನಿಟ್ ಗೆ ಚಾಂಪಿಯನ್ ಟ್ರೋಫಿ ನೀಡಿದರು .
ಮೆಜೆಸ್ಟಿಕ್ ಡಿವಿಷನ್ ಸಾಹಿತ್ಯೋತ್ಸವ ಕನ್ವಿನರ್ ಜೈನುದ್ದೀನ್ ಅನ್ವರಿ ಸ್ವಾಗತಿಸಿ ಸಲ್ಮಾನ್ ನಿಝಮಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com