ಮಂಗಳೂರು: ವಕ್ಫ್ ಆಸ್ತಿಯನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕೆಂದು ಯತ್ನಾಳ್ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ. ವಕ್ಫ್ ಆಸ್ತಿ ಮುಸ್ಲಿಮರು ಈ ದೇಶಕ್ಕೆ ಈಗಾಗಲೇ ನೀಡಿದ ಆಸ್ತಿ ಆಗಿದೆ. ಮುಸ್ಲಿಮರು ತಮ್ಮ ಆರಾಧನೆ, ಶಿಕ್ಷಣ, ಆರೋಗ್ಯ ಇತ್ಯಾದಿಗಾಗಿ ಇತರರ ಅವಲಂಬನೆಯನ್ನು ಹೊಂದಿಲ್ಲ, ಹೊಂದುವುದೂ ಇಲ್ಲ ಎಂದು ಯತ್ನಾಳ್ ಅವರ ದ್ವೇಷ ಭಾಷಣಕ್ಕೆ ಕೆ.ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.
ವಕ್ಫ್ ಆಸ್ತಿ ಯತ್ನಾಳ್ ಹಿರಿಯರ ಆಸ್ತಿ ಏನು ಅಲ್ಲ. ತನ್ನ ಕೊಳಕು ಬಾಯಿಂದ ಸಮಾಜದಲ್ಲಿ ದ್ವೇಷ ಭಾಷಣವನ್ನು ಉದುರಿ ಸಮಾಜದ ಶಾಂತಿ ಮತ್ತು ಸ್ವಾಸ್ತವನ್ನು ವ್ಯತ್ಯಯ ಗೊಳಿಸುವ ಯತ್ನಾಳ್ ರಂತವರಿಂದ ಈ ದೇಶದ ಸಂಪತ್ತನ್ನು ನಿರ್ವಹಿಸುವ ಗತಿಗೇಡಿ ತನದ ಸಲಹೆಯ ಅಗತ್ಯವೂ ಇಲ್ಲ.
ವಕ್ಫ್ ಆಸ್ತಿಯ ಒಂದಿಂಚು ಸ್ಥಳವನ್ನು ಕೂಡಾ ಅದರ ಉದ್ದೇಶದ ಹೊರತಾದ ಕಾರ್ಯಕ್ಕೆ ಬಳಸುವಂತಿಲ್ಲ ಎಂಬುದನ್ನು ಯತ್ನಾಳ್ ಅರಿಯಲಿ. ಈ ದೇಶಕ್ಕೆ ಮುಸ್ಲಿಮರು ಸಮರ್ಪಿಸಿದ ಅಷ್ಟೂ ಸ್ಮಾರಕಗಳನ್ನು ಯತ್ನಾಳ್ ಒಮ್ಮೆ ವೀಕ್ಷಿಸಿ ಬರಲಿ, ಈ ದೇಶದ ಸಂವಿಧಾನವನ್ನು ಒಮ್ಮೆ ಓದಿ ನೋಡಲಿ, ಅಷ್ಟೂ ಸಾಧ್ಯವಾಗದಿದ್ದರೆ ತನ್ನ ದ್ವೇಷ ಭಾಷಣವನ್ನು ನಿಲ್ಲಿಸಿ ವಚನ ಸಾಹಿತ್ಯದ ಕೆಲವು ಪ್ರತಿಗಳನ್ನದರೂ ಸಾರ್ವಜನಿಕವಾಗಿ ಹಂಚಲಿ, ಅಷ್ಟಾದರೂ ಯತ್ನಾಳ್ ಈ ನಾಡಿಗೆ ಕೊಡುಗೆಯನ್ನು ನೀಡುವ ಮನಸ್ಸು ಮಾಡಿ ಧನ್ಯರಾಗಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.