ಮಂಗಳೂರು ತಾಲೂಕಿನ ಸುರತ್ಕಲ್, ಕಾಟಿಪಳ್ಳ ಮಿಸ್ಬಾಹ್ ನಾಲೆಜ್ ಫೌಂಡೇಶನ್ (ರಿ) ಸಮೂಹ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಹಾಜಿ ಬಿ ಎಂ ಹೈದರ್ ಅಲಿ ಅವರನ್ನು ಆರಿಸಲಾಗಿದೆ
ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಾಜಿ ಬಿ. ಎಂ. ಮುಂತಾಝ್ ಅಲಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಆಯ್ಕೆ ನಡೆಸಲಾಗಿದೆ.
ಮುಂದಿನ ಸೋಮವಾರ (ಅಕ್ಟೋಬರ್ 28) ಮುಂತಾಝ್ ಅಲಿ ಹೆಸರಲ್ಲಿ ಸಂಸ್ಥೆಯಲ್ಲಿ ವಿಪುಲವಾದ ಪ್ರಾರ್ಥನಾ ಸಂಗಮ ಏರ್ಪಡಿಸಲು ಮತ್ತು ಅವರ ಸ್ಮರಣಾರ್ಥ “ಹಾಜಿ ಬಿ ಎಂ ಮುಂತಾಝ್ ಅಲಿ ಆಡಿಟೋರಿಯಂ” ಲೋಕಾರ್ಪಣೆ ಮಾಡಲು ನಿರ್ಧಾರಿಸಲಾಗಿದ್ದು ಅವರ ಸಮಗ್ರ ಸ್ಮರಣ ಸಂಚಿಕೆ ಪ್ರಕಟಿಸಲು ಯೋಜನೆ ಹಾಕಲಾಗಿದೆ.
ಈ ಕುರಿತು ಕಾಟಿಪಳ್ಳ ಮಿಸ್ಬಾಹ್ ಸಭಾಂಗಣದಲ್ಲಿ ಸೇರಿದ ವಿಶೇಷ ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮೌಲಾನಾ ಅಬೂಸುಫ್ಯಾನ್ ಮದನಿ ಅಧ್ಯಕ್ಷತೆ ವಹಿಸಿದರು. ವಿಧಾನ ಪರಿಷತ್ ಸದಸ್ಯ ಹಾಜಿ ಬಿ ಎಂ ಫಾರೂಕ್ ಫಿಝಾ ಉದ್ಘಾಟನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಡಾ ಎಮ್ಮೆಸ್ಸೆಂ. ಝೖನೀ ಕಾಮಿಲ್ ಸಂಸ್ಮರಣ ಭಾಷಣ ಮಾಡಿದರು.
ಉಪಾಧ್ಯಕ್ಷ ಮುಹಮ್ಮದ್ ಹಾರಿಸ್,ಟ್ರಸ್ಟಿಗಳಾದ
ಮಾಜಿ ಶಾಸಕ ಹಾಜಿ ಬಿ.ಎ. ಮೊಯಿದಿನ್ ಬಾವಾ,ಬಿ.ಎಂ. ಹೈದರ್ ಅಲಿ,ಮುಹಮ್ಮದ್ ಶರೀಫ್ ಖುಷಿ, ಅಬ್ದುಲ್ ಹಕೀಮ್ ಫಾಲ್ಕನ್,ಇಸ್ಮಾಯಿಲ್ ಅಹ್ಮದ್ ಹೆಚ್ ಎನ್ ಜಿಸಿ, ಮುಹಮ್ಮದ್ ಮುಬೀನ್ ಕೃಷ್ಣಾಪುರ, ಅಬ್ದುಲ್ ಹಮೀದ್ ಅಷ್ಕಾಫ್, ಅಹ್ಮದ್ ಶುಐಬ್,ಟಿ. ಎಚ್.ಮಹಬೂಬ್ ಮುಂತಾದವರು ಪಾಲ್ಗೊಂಡರು.
ಕರೆಸ್ಪಾಂಡೆಂಟ್ ಬಿ.ಎ.ನಝೀರ್ ಕೃಷ್ಣಾಪುರ ಸ್ವಾಗತಿಸಿ ಸಹ ಕಾರ್ಯದರ್ಶಿ ಬಾವಾ ಫಖ್ರುದ್ದೀನ್ ಧನ್ಯವಾದ ಸಲ್ಲಿಸಿದರು.