ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಈ ಇಂದಿನ ವರ್ಷಗಳಲ್ಲಿ ಶನಿವಾರದ ತರಗತಿಯು ರಾಜ್ಯದ್ಯಂತ್ಯ ಬೆಳಿಗ್ಗೆ 8:50ಕ್ಕೆ ಆರಂಭವಾಗುತ್ತಿತ್ತು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶನಿವಾರದ ತರಗತಿಗಳನ್ನು ಬೆಳಿಗ್ಗೆ 7:50ಕ್ಕೆ ಆರಂಭಿಸಬೇಕೆಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಸೂಚಿಸಲಾಗಿದೆ.
ಇದು ಅವೈಜ್ಞಾನಿಕ ಕ್ರಮವಾಗಿದ್ದು ಶಿಕ್ಷಣ ಇಲಾಖೆಯ ಆದೇಶವನ್ನು ಈ ಕೂಡಲೇ ಹಿಂಪಡೆದು ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸಲಿ ಎಂದು ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ SM ನೆಲ್ಯಾಡಿ ಒತ್ತಾಯಿಸಿದ್ದಾರೆ .
ಈ ಸಂಬಂಧ ಹೇಳಿಕೆ ನೀಡಿರುವ ಅವರು ಸದ್ಯ ಬೆಳಗಿನ ಜಾವ ಚಳಿ ಮತ್ತು ಅಲ್ಲಲ್ಲಿ ಮಳೆ ಕಾಣಿಸಿಕೊಳ್ಳುವುದರಿಂದ ಬೆಳಗಿನ ಜಾವ7 50ಕೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಸಮಸ್ಯೆಯಾಗುತ್ತದೆ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಂಚರಿಸುವುದು ಕೂಡ ಕಷ್ಟ ಈ ಹಿನ್ನೆಲೆಯಲ್ಲಿ ಇಲಾಖೆಯು ಈ ಆದೇಶವನ್ನು ಪುನರ್ ಪರಿಶೀಲನೆ ಮಾಡಿ ಹಿಂ ಪಡೆಯಬೇಕು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಕೆಲವು ಕಡೆ ಬೆಳಗಿನ ಜಾವದಲ್ಲಿ ಸಾರಿಗೆ ವ್ಯವಸ್ಥೆ ತೊಂದರೆಯಾಗುತ್ತದೆ ರೈತಾಪಿ ಕುಟುಂಬದಿಂದ ಬರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಈ ಅವಧಿಯಲ್ಲಿ ಹಾಲಿನ ಡೈರಿಗಳಿಗೆ ತೆರಳಿ ಹಾಲು ಹಾಕುವ ಕಾರ್ಯದಲ್ಲಿ ಕುಟುಂಬಕ್ಕೆ ನೆರವಾಗುವುದರಿಂದ ಆ ದಿನದ ಹಾಜರಾತಿಯಲ್ಲಿ ವಿಳಂಬ ಅಥವಾ ಗೈರು ಹಾಜರಾಗುವ ಸಾಧ್ಯತೆ ಹೆಚ್ಚಾಗಿದೆ ಸಲಾತ್ಮಕ ವೇಳಾಪಟ್ಟಿಯಲ್ಲಿ ಶನಿವಾರದಂದು ಬೆಳಗಿನ ಮೂರು ಅವಧಿಗಳ ನಂತರ 10 ಗಂಟೆಯಿಂದ 10:40 ರವರೆಗೆ ಭೋಜನವಿರಾಮ ನೀಡಲಾಗಿದೆ.
40 ನಿಮಿಷಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಊಟ ನೀಡಿ ಉಳಿದ ಎರಡು ಅವಧಿಗಳಿಗೆಪಾಠ ಮಾಡಲು. ಕೂರಿಸುವುದು ತುಸು ಸಮಸ್ಯೆ ಆಗುತ್ತದೆ ಶೈಕ್ಷಣಿಕ ಮಾರ್ಗದರ್ಶಿ ಯಲ್ಲಿ ನೀಡಿರುವ ವೇಳಾಪಟ್ಟಿಯ ಸಲಾತ್ಮಕವಾಗಿದ್ದು ಆಯಾಯ ಜಿಲ್ಲಾ ಪಂಚಾಯತ್ ನಿರ್ಧರಿಸುವ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾದ ವೇಳಾಪಟ್ಟಿಯು ಅಂತಿಮವಾಗಿರುತ್ತದೆ ಆದರೂ ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರು ಈ ಬಗೆಗೆ ಗೊಂದಲಕ್ಕೆ ಒಳಗಾಗಿದ್ದು ಕೆಲವು ಶಾಲೆಗಳು ಎಂದಿನಂತೆ 8:50 ರಿಂದ ಆರಂಭವಾಗುತ್ತಿದ್ದರೆ ಇನ್ನೂ ಕೆಲವು ಶಾಲೆಗಳು 7 50 ರಿಂದ ನಡೆಯಲ್ಪಡುತ್ತಿದ್ದು ಶನಿವಾರದ ವೇಳಾಪಟ್ಟಿಯನ್ನ ರಾಜ್ಯಾದ್ಯಂತ ಏಕಪ್ರಕಾರವಾಗಿ ಪಾಲಿಸುತ್ತಿಲ್ಲ.
ಈ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ಹಿಂದೆ ಜಾರಿಯಲ್ಲಿದ್ದ ವೇಳಾಪಟ್ಟಿಯನ್ನೇ ಅನುಸರಿಸುವಂತೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿರುತ್ತಾರೆ.
ಮನವಿಯ ಪ್ರತಿಯನ್ನು ಶಿಕ್ಷಣಾಯುಕ್ತರಿಗೆ ಮತ್ತು ಶಿಕ್ಷಣ ಸಚಿವರಿಗೆ ನೀಡಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಇವರಿಗೆ ತಲೆ ಸರಿ ಇಲ್ಲವೇ?
ಯಾವ ಜಿಲ್ಕೆಗಳಲ್ಲಿ ಸಮಯ ಬದಲಾವಣೆ ಆಗಿದೆ?
ಈ ಸುಳ್ಳು ಸುಳ್ಳು ನ್ಯೂಸ್ ಕೊಡುವ ಇಂಥವರ ಬಗ್ಗೆ ಈ ನ್ಯೂಸ್ ಮಾಡುವವರಿಗೆ ಆದರೂ ದಾಖಲೆ ಪರಿಶೀಲನೆ ಮಾಡಲು ಸಾಧ್ಯ ಇಲ್ಲವೇ?