janadhvani

Kannada Online News Paper

ಸಂದರ್ಶಕ ವೀಸಾ ಪ್ರಯಾಣಿಕರಿಗೆ ಬಿಗಿ ಮಾರ್ಗಸೂಚಿ – ಹಲವಾರು ಪ್ರಯಾಣಿಕರಿಗೆ ಪ್ರವೇಶ ತಡೆ

ಕೆಲವು ಪ್ರಯಾಣಿಕರು ಹಲವಾರು ದಿನಗಳಿಂದ ದುಬೈನ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ದುಬೈ: ಸಂದರ್ಶಕ ವೀಸಾದಲ್ಲಿ ಯುಎಇಗೆ ಪ್ರಯಾಣಿಸುವವರು AED 3,000 ನಗದು, ಮಾನ್ಯವಾದ ರಿಟರ್ನ್ ಟಿಕೆಟ್ ಮತ್ತು ಎಮಿರೇಟ್‌ನಲ್ಲಿ ವಾಸಿಸುವ ರೆಸಿಡೆನ್ಸಿ ಪುರಾವೆಗಳನ್ನು ಹೊಂದಿರಬೇಕು.

ಅಧಿಕಾರಿಗಳು ಯುಎಇಯಲ್ಲಿ ಪ್ರವೇಶ ಮಾರ್ಗಸೂಚಿಗಳನ್ನು ಬಿಗಿಗೊಳಿಸಿದ್ದಾರೆ. ಇದನ್ನು ಅನುಸರಿಸಲು ವಿಫಲರಾದ ಭಾರತೀಯರು ಸಹಿತವಿರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಡೆ ಹಿಡಿಯಲಾಗಿದೆ. ಕೆಲವು ಪ್ರಯಾಣಿಕರು ಹಲವಾರು ದಿನಗಳಿಂದ ದುಬೈನ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.ಇದೀಗ ಅಗತ್ಯ ದಾಖಲೆಗಳನ್ನು ಪೂರೈಸಲು ವಿಫಲರಾದ ಪ್ರಯಾಣಿಕರನ್ನು ಭಾರತೀಯ ವಿಮಾನ ನಿಲ್ದಾಣಗಳಲ್ಲೂ ತಡೆಹಿಡಿಯಲಾಗುತ್ತಿದೆ.

ಯುಎಇಗೆ ಸಂದರ್ಶಕ ವೀಸಾದಲ್ಲಿ ಪ್ರಯಾಣಿಸುವವರು ಕನಿಷ್ಠ ಆರು ತಿಂಗಳ ಮಾನ್ಯತೆಯೊಂದಿಗೆ ಪಾಸ್‌ಪೋರ್ಟ್ ಜೊತೆಗೆ ಮಾನ್ಯ ವೀಸಾವನ್ನು ಹೊಂದಿರಬೇಕು. ಖಚಿತವಾದ ರಿಟರ್ನ್ ಟಿಕೆಟ್ ಅನ್ನು ಒಯ್ಯಬೇಕು. ದುಬೈನಲ್ಲಿ ವಾಸ್ತವ್ಯ ಅನುಕೂಲಕ್ಕಾಗಿ ಹಣ ಹೊಂದಿರುವುದನ್ನು ಖಚಿತಪಡಿಸಬೇಕು. 3000 ಯುಎಇ ದಿರ್ಹಂ ಅಥವಾ ಸಮಾನವಾದ ಮೌಲ್ಯದ ನಗದು ಇಲ್ಲವೇ ಕ್ರೆಡಿಟ್ ಕಾರ್ಡ್ ಹೊಂದಿರಬೇಕು.

ಯುಎಇಯಲ್ಲಿ ವಾಸಿಸುವ ಪುರಾವೆಗಳನ್ನು ನೀಡಬೇಕು. ಸಂಬಂಧಿಕರು ಅಥವಾ ಸ್ನೇಹಿತರೊಂದಿಗೆ ವಾಸಿಸುವುದಾದಲ್ಲಿ ಅವರ ವೀಸಾ ಕಾಪಿ, ಪಾಸ್‌ಪೋರ್ಟ್ ಕಾಪಿ, ಮಾನ್ಯವಾದ ವಿಳಾಸ ಪುರಾವೆ ಹಾಗೂ ಮೊಬೈಲ್ ಸಂಖ್ಯೆ ನೀಡಬೇಕು.

ಈ ನಿಯಮವು ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ ಆದರೆ ಈಗ ಅಧಿಕಾರಿಗಳು ಪ್ರಯಾಣಿಕರ ಅನುಕೂಲಕ್ಕಾಗಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ.

error: Content is protected !! Not allowed copy content from janadhvani.com