ಲೋಕಸಭಾ ಚುನಾವಣೆ ಯ ಎರಡನೇ ಹಂತ ದ ಮತದಾನ ಮುಕ್ತಾಯವಾದ ಬೆನ್ನಿಗೆ ಚಿತ್ರ ವಿಚಿತ್ರ ಹೆಸರಿನ ವೋಟರ್ ಸ್ಲಿಪ್ ಗಳು ವೈರಲ್ ಆಗುತ್ತಿದೆ. ಹಲವು ಮತದಾರರಿಗೆ ವಿತರಿಸಲಾಗಿರುವ ವೋಟರ್ ಸ್ಲಿಪ್ ಗಳಲ್ಲಿನ ಮುದ್ರಣದೋಷ ವು ಸೋಷಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದ್ದು, ಈ ಆಧುನಿಕ ತಂತ್ರಜ್ಞಾನ ಯುಗದಲ್ಲೂ ಕ್ರಾಸ್ ಚೆಕ್ ಇಲ್ಲದೆ, ದೃಡೀಕರಿಸದೇ ತಪ್ಪು ತಪ್ಪಾಗಿ ಮುದ್ರಿಸಿ ವಿತರಿಸಿರುವ ವ್ಯವಸ್ಥೆಯನ್ನು ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.
ವ
ೈರಲ್ ಆಗುತ್ತಿರುವ ವೋಟರ್ ಸ್ಲಿಪ್ ಗಳ ಪೈಕಿ ಅತ್ಯಂತ ಹೆಚ್ಚು ಅಪಹಾಸ್ಯಕ್ಕೀಡಾದುದು; ಬೆಳ್ತಂಗಡಿ ತಾಲೂಕಿನ ಮತದಾರನೊಬ್ಬನ ಹೆಸರು ; ‘ಅಲ್ಲಿ ಅಪಾಯ’ ಎಂದು ನಮೂದಾಗಿರುವ ಸ್ಲಿಪ್.
ವೈರಲ್ ಆಗಿರುವ ಸ್ಲಿಪ್ ಗಳಲ್ಲಿ ‘ಮುಹಮ್ಮದ್ ರಾಷ್ಟ್ರ’ ಹೆಸರಿನ ಸ್ಲಿಪ್ ಕೂಡ ಒಂದು. ಕೆಲವಂತೂ ತೀರಾ ಅಸಹ್ಯವಾಗಿ ಮುದ್ರಣಗೊಂಡಿದೆ.
ಇವುಗಳೆಲ್ಲ ನಿಜವಾಗಿಯೂ ಸ್ಲಿಪ್ ನಲ್ಲಿನ ಮುದ್ರಣ ದೋಷವೇ ಅಥವಾ ಕಿಡಿಗೇಡಿಗಳು ಯಾರೋ ಫೇಕ್ ಮಾಡಿ ಹರಾಡುತ್ತಿದ್ದಾರೆಯೇ ಎಂದು ಸಂಬಂಧಪಟ್ಟ ಇಲಾಖೆಯು ಸ್ಪಷ್ಟಿಕರಣ ನೀಡಬೇಕು ಎಂದು ಸೋಷಿಯಲ್ ಮೀಡಿಯಾ ಗಳಲ್ಲಿ ಆಗ್ರಹ ವ್ಯಾಪಕವಾಗಿದೆ.