janadhvani

Kannada Online News Paper

ಚರಿತ್ರೆಯ ಮುಸ್ಲಿಮರು ಭಾರತಕ್ಕೆ ನೀಡಿದ ಕೊಡುಗೆಯ ಪ್ರತಿಫಲ ಹಾಲಿ ಮುಸ್ಲಿಮರು ಇನ್ನೂ ಬಯಸಿಲ್ಲ

ಮೋದಿಯವರು ತಮ್ಮ ನಿರ್ಗಮನ ವೇಳೆಯಲ್ಲಿಯಾದರೂ ರಾಜಧರ್ಮದ ಕಿಂಚಿತ್ ತತ್ವವನ್ನಾದರೂ ಪಾಲಿಸಲಿ

ಮಂಗಳೂರು: ನರೇಂದ್ರ ಮೋದಿ ಯವರು ತಮ್ಮ ಪಕ್ಷದ ಸೋಲಿನ ಹತಾಶೆಯಿಂದ ದೇಶದ ಸಂಪತ್ತನ್ನು ಮರು ಹಂಚಿಕೆಯ ಪ್ರಸ್ತಾಪ ಮಾಡಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ದೂರುತ್ತಿದ್ದಾರೆ ಮತ್ತು ಆ ಮೂಲಕ ದ್ವೇಷ ಹರಡಲು ಪ್ರಯತ್ನಿಸಿರುವುದು ವಿಷಾದಕರ.

ಈ ದೇಶಕ್ಕಾಗಿ ಚರಿತ್ರೆಯ ಮುಸ್ಲಿಮರು,ಆಡಳಿತಗಾರರು ಅವರ ಸರ್ವಸ್ವವನ್ನೂ ಕೊಡುಗೆ ನೀಡಿ ಈ ದೇಶವನ್ನು ನಿರ್ಮಾಣ ಮಾಡಿದ್ದಾರೆ. ಮೊಗಲರು, ಸುಲ್ತಾನರು, ಕಬೀರರು, ಸೂಫಿಗಳು ಸಂತರು ಈ ದೇಶಕ್ಕೆ ಅರ್ಪಿಸಿದ ಕೊಡುಗೆಗಳನ್ನು ಮೋದಿಯವರು ಅರಿಯ ಬೇಕು ಎಂದು ಕೆ. ಅಶ್ರಫ್ ಅವರು ಪ್ರತಿಕ್ರಿಯಿಸಿದ್ದಾರೆ.

ಕೆಂಪು ಕೋಟೆ, ತಾಜ್ ಮಹಲ್, ಗೋಲ್ ಗುಂಬಜ್,ಮಿನಾರ್ ಗಳಂತಹ ವಾಸ್ತು ಶಿಲ್ಪ, ಮೊಗಲ್, ಟಿಪ್ಪು ಸುಲ್ತಾನ್ ಆಡಳಿತ, ಈ ದೇಶದ ರಕ್ಷಣೆಗೆ ಮತ್ತು ಸ್ವಾತಂತ್ರ್ಯಕ್ಕಾಗಿ ನೀಡಿದ ಬಲಿದಾನ, ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಂ ಅಜಾದ್ ರವರು ಈ ದೇಶಕ್ಕೆ ನೀಡಿದ ಶಿಕ್ಷಣ ದಂತಹ ಕೊಡುಗೆಯ ಪ್ರತಿಪಲದ ಅನುಪಾತದ ಪ್ರಯೋಜನ ಇನ್ನೂ ಹಾಲಿ ಭಾರತದ ಮುಸ್ಲಿಮರು ಬಯಸಿಲ್ಲ.

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಿಟ್ಟ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ಮುಸ್ಲಿಮರು ಇಂದು ಮೀಸಲಾತಿಯ ಪ್ರಯೋಜನ ಅಪೇಕ್ಷಿಸಿದ್ದನ್ನು ಮೋದಿಯವರು ಕೋಮು ಮನಸ್ಥಿತಿಯಿಂದ ಅಳೆದರೆ ಅದು ಅವರ ಅಜ್ಞಾನ ಮತ್ತು ಕೀಳುಮಟ್ಟದ ರಾಜಕೀಯವನ್ನು ಬಿಂಬಿಸಿದೇ ಹೊರತು ಬೇರೇನೂ ಅಲ್ಲ.

ಮೋದಿಯವರು ಮುಸ್ಲಿಮರನ್ನು ಅಧಿಕ ಮಕ್ಕಳಿರುವವರು ಎಂದು ಸಂಭೋದಿಸಿದರೆ, ಅಂತಹ ಮಕ್ಕಳನ್ನು ಈ ದೇಶದ ರಕ್ಷಣೆಗಾಗಿ ಮೀಸಲಿಡಲಿದ್ದೇವೆ. ಮೋದಿಯವರು ತಮ್ಮ ರಾಜ್ಯದಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮಹಾತ್ಮ ಗಾಂದಿ,ವಲ್ಲಭಭಾಯಿ ಪಟೇಲ್ ಹೊರತಾದ ಇತರರ ಹೆಸರನ್ನು ಹುಡುಕುವ ಧೈರ್ಯವನ್ನಾದರೂ ಮಾಡಲಿ. ಮೋದಿಯವರು ತಮ್ಮ ನಿರ್ಗಮನ ವೇಳೆಯಲ್ಲಿಯಾದರೂ ರಾಜಧರ್ಮದ ಕಿಂಚಿತ್ ತತ್ವವನ್ನಾದರೂ ಪಾಲಿಸಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್,
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com