ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್‌ನ ಇನ್ನೋವೇಶನ್ ಶಾಖೆಯಗಿರುವ ‘Samsung Next’ ಇಸ್ರೇಲ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮುಚ್ಚಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಸ್ರೇಲ್‌ನ ಆರ್ಥಿಕತೆಯು ಮಂದಗತಿಯನ್ನು ಅನುಭವಿಸುತ್ತಿರುವುದರಿಂದ ಅಲ್ಲಿನ ಬ್ರಾಂಚನ್ನು ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ.
ಕಂಪನಿಯು ತನ್ನ ಪ್ರಾದೇಶಿಕ ಟೆಕ್ ಹಬ್ ಟೆಲ್ ಅವಿವ್‌ನಲ್ಲಿ ಕಾರ್ಯಾಚರಣೆಯನ್ನು ಮುಚ್ಚುತ್ತಿದೆ ಎಂದು ಈಗಾಗಲೇ ಉದ್ಯೋಗಿಗಳಿಗೆ ಸೂಚಿಸಿದೆ. ಅನಿರೀಕ್ಷಿತ ಸನ್ನಿವೇಶದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಇಸ್ರೇಲ್‌ನಿಂದ ಹೊರಬರಲು ಸ್ಯಾಮ್ ಸಾಂಗ್ ನಿರ್ಧರಿಸಿರುವುದು ಇಸ್ರೇಲ್ ನ ಹದಗೆಟ್ಟ ಆರ್ಥಿಕ ಸ್ಥಿತಿ ಯ ಪ್ರತೀಕ ಎನ್ನಲಾಗಿದೆ.