ಡಿ.ಕೆ.ಎಸ್.ಸಿ. ರಿಯಾದ್ ಝೋನ್ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 08-03-2024 ರ ಶುಕ್ರವಾರ ಜುಮಾ ನಮಾಝಿನ ಬಳಿಕ ಅಝೀಝಿಯಾದ ಇಂಡಿಯನ್ ಮಲ್ಟಿ ಕ್ಯೂಸಿನ್ ರೆಸ್ಟೋರೆಂಟ್ನಲ್ಲಿ ಡಿ ಕೆ ಎಸ್ ಸಿ ರಿಯಾದ್ ಝೋನ್ ಅಧ್ಯಕ್ಷರಾದ ಬಹು ಅಬ್ದುಲ್ ಅಝೀಝ್ ಬಜ್ಪೆ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಡಿ ಕೆ ಎಸ್ ಸಿ ರಿಯಾದ್ ಝೋನ್ ದಾಯೀ ಆದಂತಹ ಬಹು ಖಲೀಲ್ ಝುಹ್ರಿ ಉಸ್ತಾದ್ ಇವರ ದುಆದ ಮೂಲಕ ಶುಭಾರಂಭಗೊಂಡ ಸಭೆಯಲ್ಲಿ ಮಾಸ್ಟರ್ ಮುಹಮ್ಮದ್ ರಾಫಿ ಖಿರಾಅತ್ ಪಾರಾಯಣಗೈದರು. ಬಹು ಅಬ್ದುಲ್ ಹಮೀದ್ ಉಸ್ತಾದ್ ಅಲ್ಖರ್ಜ್ ರವರು ಸಭೆಯನ್ನು ಸ್ವಾಗತಿಸಿದರು. ಸಭೆಯ ಉದ್ಘಾಟಕರಾಗಿ ಆಗಮಿಸಿದ ಬಹು ಮುಸ್ತಫಾ ಸಅದಿ ಉಸ್ತಾದರು ಸಂಘಟನಾ ಚಟುವಟಿಕೆಗಳ ಮಹತ್ವವನ್ನು ತಿಳಿಸುತ್ತಾ ಸಭೆಯನ್ನು ಉದ್ಘಾಟಿಸಿದರು.
ರಿಯಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ರಹ್ಮಾನ್ ಉಚ್ಚಿಲ ವಾರ್ಷಿಕ ವರದಿ ಹಾಗೂ ರಿಯಾದ್ ಸಮಿತಿಯ ಕೋಶಾಧಿಕಾರಿ ಬಹು ಅಬ್ದುಲ್ ಅಝೀಝ್ ಕಾಟಿಪಳ್ಳ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಅಂಗೀಕಾರವನ್ನು ಪಡೆದುಕೊಂಡರು.
ರಿಯಾದ್ ಝೋನಲ್ ಅಧ್ಯಕ್ಷರಾದ ಜನಾಬ್ ಅಬ್ದುಲ್ ಅಝೀಝ್ ಬಜ್ಪೆ ರವರು ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿ ಡಿ ಕೆ ಎಸ್ ಸಿ ಯ ಮುಂದಿನ ಯೋಜನೆಯನ್ನು ಸಭೆಗೆ ತಿಳಿಸಿದರು.
ಡಿ ಕೆ ಎಸ್ ಸಿ ಸೌದಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಜನಾಬ್ ಅಬ್ದುಲ್ ಅಝೀಝ್ ಆತೂರ್ ರವರ ನೇತೃತ್ವದಲ್ಲಿ 2024-2025ರ ಸಾಲಿಗೆ ಈ ಕೆಳಗಿನಂತೆ ಸುದೃಢವಾದ ನೂತನ ಸಮಿತಿಯನ್ನು ರಚಿಸಲಾಯಿತು.
– ಗೌರವಾಧ್ಯಕ್ಷ: ಅಬ್ದುಲ್ ಅಝೀಝ್ ಬಜ್ಪೆ
– ಅಧ್ಯಕ್ಷರಾಗಿ: ಅಬ್ದುಲ್ ಅಝೀಝ್ ಕಾಟಿಪಳ್ಳ
– ಪ್ರಧಾನ ಕಾರ್ಯದರ್ಶಿ: ಹುಝೈಫ ಪೆರಾಜೆ
– ಕೋಶಾಧಿಕಾರಿ: ದಾವೂದ್ ಖಂದಕ್
ಉಪಾದ್ಯಕ್ಷರುಗಳಾಗಿ:
– ಮುಸ್ತಫ ಸಅದಿ ಉಸ್ತಾದ್
– ಅಬ್ದುಲ್ ಹಮೀದ್ ಉಸ್ತಾದ್
– ಯೂಸುಫ್ ಕಳಂಜಿಬೈಲ್
ಕಾರ್ಯದರ್ಶಿಗಳಾಗಿ: ಜುರೈಝ್ ಮೂಡುತೋಟ ಮತ್ತು ಅಬ್ದುಲ್ ರಝಾಕ್ ಪಟ್ರುಕೊಡಿ
ಸಲಹೆಗಾರರಾಗಿ: ಖಲೀಲ್ ಝುಹ್ರಿ, ಅಬ್ದುಲ್ ರಹ್ಮಾನ್ ಉಚ್ಚಿಲ, ಇಸ್ಮಾಈಲ್ ಕಣ್ಣಂಗಾರ್
ಸಂಘಟನಾ ಕಾರುಗರ್ಶಿಗಳಾಗಿ: ಶರೀಫ್ ತೋಕೂರು, ಮುಹಮ್ಮದ್ ಅಲಿ ಕೃಷ್ಣಾಪುರ, ನೌಫಲ್ ಮನಾಲ್
ಲೆಕ್ಕ ಪರಿಶೋಧಕರಾಗಿ: ದಾವೂದ್ ಹಾಜಿ ಕಜಮಾರ್
ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಹಾಜರಿದ್ದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಅಝೀಝ್ ಆತೂರ್, ಕೇಂದ್ರ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ಕಣ್ಣಂಗಾರ್ ಮತ್ತು ಇಸ್ಮಾಯಿಲ್ ಕಣ್ಣಂಗಾರ್ ರವರು ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು. ನೂತನ ಸಮೀತಿಯ ಅಧ್ಯಕ್ಷರಾಗಿ ಅಯ್ಕೆಯಾದಂತಹ ಜನಾಬ್ ಅಬ್ದುಲ್ ಅಝೀಝ್ ಕಾಟಿಪಳ್ಳ ಮಾತನಾಡಿ ಮುಂದಿನ ವರ್ಷದಲ್ಲಿ ಎಲ್ಲರ ಸಹಕಾರದೊಂದಿಗೆ ಅತ್ಯುತ್ತಮ ನಿರ್ವಹಣೆಯ ಭರವಸೆಯನಿತ್ತರು.
ರಿಯಾದ್ ಝೋನ್ ಅಧೀನದ ಎಲ್ಲಾ ಘಟಕಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ನೂತನ ಸಮಿತಿಗೆ ಶುಭಾಶಯಗಳನ್ನು ಸಲ್ಲಿಸಿದರು.
ತದನಂತರ ವಿಷನ್ 30 ಹಾಗೂ ರಮಲಾನ್ ಫಂಡ್ ಪ್ರೊಜೆಕ್ಟ್ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ಹುಝೈಫ ಪೆರಾಜೆ ಧನ್ಯವಾದಗೈದರು. ಕಫ್ಫಾರತುಲ್ ಮಜ್ಲಿಸ್ ಮತ್ತು ಮೂರು ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.