ಬಂಟ್ವಾಳ: ಹನಫಿ ಸುನ್ನಿಗಳಿಗಾಗಿ ಯಾರನ್ನೂ ಖಾಝಿಯಾಗಿ ನೇಮಕ ಮಾಡಿಲ್ಲ, ಖಾಝಿ ಸಂಬಂಧಿತ ಯಾವುದೇ ರೀತಿಯ ಗುಮಾನಿಗಳಿಗೆ ಹನಫಿ ಸುನ್ನಿಗಳು ಬೆಲೆಕೊಡಬಾರದು. ಯಾರಾದರೂ ಹೇಳಿಕೆ ಕೊಟ್ಟಿದ್ದರೆ ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ನ ರಾಜ್ಯಾಧ್ಯಕ್ಷ ಕಾವಳಕಟ್ಟೆ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ರವರು ಹೇಳಿದ್ದಾರೆ.
ಅವರು ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ನ ಕಾವಳಕಟ್ಟೆ ಅಲ್ ಖಾದಿಸಾ ವಿದ್ಯಾಸಂಸ್ಥೆ ಯಲ್ಲಿ ನಡೆದ ಬೃಹತ್ ಅಮ್ಜದಿ ಸಂಗಮವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಇತ್ತೀಚೆಗೆ ಹನಫಿಗಳಿಗಾಗಿ ಓರ್ವ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ ಮಂಗಳೂರಿನ ಮುಖಂಡರೊಬ್ಬರು ಹನಫಿಗಳ ಖಾಝಿ ಎಂಬುದಾಗಿ ಹೇಳಿಕೆ ನೀಡಿದ್ದರು, ಇದರ ವಿರುದ್ಧ ಕಾವಳಕಟ್ಟೆ ಹಝ್ರತ್ ರವರು ಪ್ರತಿಕ್ರಿಯೆ ನೀಡಿದ್ದಾರೆ. ಅಂತಹ ವೈಯಕ್ತಿಕ ನಿಲುವಿಗೆ ಹನಫಿ ಸುನ್ನಿಗಳು ಬೆಲೆ ಕಲ್ಪಿಸುವುದಿಲ್ಲ ಎಂದು ಹಝ್ರತ್ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎ. ಕೆ. ರಝಾ ಅಮ್ಜದಿ ಉಪ್ಪಿನಂಗಡಿ ವಹಿಸಿದ್ದರು. ಅಮ್ಜದೀಸ್ ನ ರಾಜ್ಯ ನಿರ್ದೇಶಕ ಯೂಸುಫ್ ರಝಾ ಅಮ್ಜದಿ ದಾವಣಗೆರೆ, ಡಾ. ಹನೀಫ್ ಅಮ್ಜದಿ ಬೆಳ್ಳಾರೆ ಪ್ರಾಸ್ತಾವಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಅಝೀಝ್ ಅಮ್ಜದಿ, ನಝೀರ್ ಅಮ್ಜದಿ ಮಾಣಿ, ಬಿಲಾಲ್ ಅಮ್ಜದಿ ಬೆಳಗಾವಿ, ರಫೀಕ್ ಅಮ್ಜದಿ ಮಾವಿನಕಟ್ಟೆ, ಇರ್ಷಾದ್ ಅಮ್ಜದಿ ಮಠ, ಅಬ್ದುಲ್ ಖಾದರ್ ಅಮ್ಜದಿ ಗೋವಿಂದೂರು, ಆಸಿಫ್ ಅಮ್ಜದಿ , ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ, ಅಶ್ರಫ್ ಅಮ್ಜದಿ ಮಲಾರ್ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯಅಮ್ಜದೀಸ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಹಾಫಿಝ್ ಮುಈನ್ ರಝಾ ಅಮ್ಜದಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.