ಕೋಝಿಕ್ಕೋಡ್: ಜಾಮಿಅ ಮರ್ಕಝ್ ಖತ್ಮುಲ್ ಬುಖಾರಿ, ಸನದ್ ದಾನ ಆಧ್ಯಾತ್ಮಿಕ ಸಮ್ಮೇಳನವು ಶನಿವಾರ (ಫೆಬ್ರವರಿ 3,2024) ಸಮಾರೋಪಗೊಳ್ಳಲಿದೆ. ಅಂದು ಖತ್ಮುಲ್ ಬುಖಾರಿ, ದಿಕ್ರ್ ಹಲ್ಕಾ, ಸಖಾಫಿ ಶೂರಾ ಕೌನ್ಸಿಲ್, ಉಲಮಾ ಸಂಗಮ, ಗ್ಲೋಬಲ್ ಶೃಂಗಸಭೆ ಮತ್ತು ಸ್ಥಾನ ವಸ್ತ್ರಗಳ ವಿತರಣೆ ನಡೆಯಲಿದೆ.
ಜಾಮಿಅ ಮರ್ಕಝ್ ಸಂಸ್ಥಾಪಕ ಕುಲಪತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಆರು ದಶಕಗಳ ಸುದೀರ್ಘ ಧಾರ್ಮಿಕ ಬೋಧನಾ ಇತಿಹಾಸದಲ್ಲಿ ಅವರಿಗೆ ಜಾಗತಿಕ ಖ್ಯಾತಿಯನ್ನು ತಂದುಕೊಟ್ಟ ವಿಚಾರವಾಗಿದೆ, ಪವಿತ್ರ ಖುರಾನ್ ನಂತರ ಇಸ್ಲಾಂನ ಅತ್ಯಂತ ಅಧಿಕೃತ ಗ್ರಂಥವಾದ ಸಹೀಹ್ ಅಲ್-ಬುಖಾರಿಯ ಅಧ್ಯಾಪನೆ.
ವಿದೇಶದಿಂದ ಅನೇಕ ವಿದ್ವಾಂಸರು, ವಿಶ್ವವಿದ್ಯಾನಿಲಯ ಮುಖ್ಯಸ್ಥರು ಮತ್ತು ಶೈಕ್ಷಣಿಕ ಪ್ರತಿನಿಧಿಗಳು ಪ್ರತಿ ವರ್ಷ ಜಾಮಿಯಾ ಮರ್ಕಝ್ಗೆ ಅದರ ಸಮಾರೋಪ ತರಗತಿಯಾದ ಖತ್ಕುಲ್ ಬುಖಾರಿಗೆ ಹಾಜರಾಗಲು ಆಗಮಿಸುತ್ತಾರೆ.
ಜನವರಿ 29ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡ ಈ ವರ್ಷದ ಖತ್ಮುಲ್ ಬುಖಾರಿ ಮತ್ತು ಸನದ್ ದಾನ ಸಮ್ಮೇಳನದ ಕಾರ್ಯಕಲಾಪಗಳು ಶನಿವಾರ ಬೆಳಗ್ಗೆ 6.30ಕ್ಕೆ ದಸ್ತರ್ ಬಂದಿಯೊಂದಿಗೆ ಆರಂಭವಾಗಲಿವೆ. ಜಾಮಿಯಾ ಮರ್ಕಝ್ ಮುಖ್ಯ ಕ್ಯಾಂಪಸ್ನ ಕನ್ವೆನ್ಸನ್ ಸೆಂಟರ್ನಲ್ಲಿ ದಸ್ತರ್ ಬಂದಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಸಖಾಫಿ ಶೂರಾ ಕೌನ್ಸಿಲ್ ಹಾಗೂ 10 ಗಂಟೆಗೆ ಸಖಾಫಿ ಸಂಗಮ ನಡೆಯಲಿದೆ. ಜಾಮಿಯಾ ಮರ್ಕಝ್ನಲ್ಲಿ ಪದವಿ ಪಡೆದ ಸುಮಾರು 10,000 ಸಕಾಫಿಗಳು ಸಂಗಮದಲ್ಲಿ ಭಾಗವಹಿಸಲಿದ್ದಾರೆ.
ಸ್ವಾಗತ ಸಮಿತಿ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ಜಮಲುಲೈಲಿ ಪ್ರಾರ್ಥನೆ ನಡೆಸುವರು. ಸಖಾಫಿ ಶೂರಾ ಪ್ರಧಾನ ಸಂಚಾಲಕ ಕುಂಞ ಮುಹಮ್ಮದ್ ಸಖಾಫಿ ಪರವೂರು ಸ್ವಾಗತಿಸಲಿದ್ದಾರೆ. ಮರ್ಕಝ್ ಉಪಾಧ್ಯಕ್ಷ ಕೆ.ಕೆ.ಆಹ್ಮದ್ ಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾದ ಕಾರ್ಯದರ್ಶಿ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಮೂರು ಅಧಿವೇಶನಗಳಲ್ಲಿ ವಿವಿಧ ವಿದ್ವಾಂಸರಿಂದ ತರಗತಿಗಳು ನಡೆಯಲಿವೆ. ಮೊದಲ ಅಧಿವೇಶನದಲ್ಲಿ ಎಸ್ವೈಎಸ್ ಉಪಾಧ್ಯಕ್ಷ ರಹ್ಮತುಲ್ಲಾ ಸಖಾಫಿ ಎಳಮರಮ್ ಆದರ್ಶ ವಿಷಯದ ಕುರಿತು, ಎರಡನೇ ಅಧಿವೇಶನದಲ್ಲಿ ಮರ್ಕಝ್ ಮಹಾ ನಿರ್ದೇಶಕ ಸಿ.ಮುಹಮ್ಮದ್ ಫೈಝಿ ಮೊಹಲ್ಲಾ ಸಬಲೀಕರಣ ಮತ್ತು ಸಖಾಫಿಗಳ ಕಾರ್ಯ ಯೋಜನೆಗಳ ಕುರಿತು ಜಾಮಿಯಾ ಮರ್ಕಝ್ ಡೈರೆಕ್ಟರ್ ಹಾಗೂ ಎಸ್ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ಹಕೀಂ ಅಝ್ಹರಿ ಅವರು ಬೋಧನೆ ನಡೆಸಲಿದ್ದಾರೆ.
ಸಖಾಫಿ ಶೂರಾ ಅಧ್ಯಕ್ಷ ಶಾಫಿ ಸಖಾಫಿ ಮುಂಡಂಬ್ರ ಗುರುವರ್ಯರ ಸಂಸ್ಕರಣೆ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಸಿ.ಮುಹಮ್ಮದ್ ಫೈಝಿ ಅವರ ಮಹಲ್ ಸಬಲೀಕರಣ ಎಂಬ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ನಂತರ 11.30ಕ್ಕೆ ಈ ವರ್ಷ ಸನದ್ ಪಡೆಯುವ 38ನೇ ಸಖಾಫಿ ಬ್ಯಾಚ್ ನ 479 ಯುವ ವಿದ್ವಾಂಸರಿಗೆ ಸ್ಥಾನ ವಸ್ತ್ರ ವಿತರಣೆ ನಡೆಯಲಿದೆ.
ಮಧ್ಯಾಹ್ನ 2ರಿಂದ ವಿಶ್ವವಿಖ್ಯಾತ ಖತ್ಮುಲ್ ಬುಖಾರಿ ಸಮಾವೇಶ ನಡೆಯಲಿದೆ. ಮರ್ಕಝ್ ಅಧ್ಯಕ್ಷ ಸಯ್ಯಿದ್ ಅಲಿ ಬಾಫಕಿ ತಂಙಳ್ ಪ್ರಾರ್ಥನೆ ನಡೆಸುವರು. ಕುಲ್ಲಿಯ್ಯ ಉಸೂಲಿದ್ದೀನ್ ಡೀನ್ ಅಬ್ದುಲ್ಲಾ ಸಖಾಫಿ ಮಲಯಮ್ಮ ಸ್ವಾಗತಿಸುವರು. ಎ ಪಿ.ಎಂ. ಫೈಝಿ ವಿಲ್ಯಾಪಳ್ಳಿ ಅಧ್ಯಕ್ಷತೆ ವಹಿಸುವರು. ಜಾಮಿಯಾ ಮರ್ಕಝ್ ಪ್ರೊ ಚಾನ್ಸಲರ್ ಡಾ.ಹುಸೈನ್ ಸಖಾಫಿ ಚುಳ್ಳಿಕೋಡ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಖತ್ಮುಲ್ ಬುಖಾರಿ ಕಾರ್ಯಕ್ರಮಕ್ಕೆ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ.
ಪ್ರಧಾನ ವೇದಿಕೆಯಲ್ಲಿ ಸಂಜೆ 5 ಗಂಟೆಗೆ ಆಧ್ಯಾತ್ಮಿಕ ಸಂಗಮ ಆರಂಭವಾಗಲಿದೆ. ಸಯ್ಯಿದ್ ಇಂಬಿಚ್ಚಿಕೋಯ ತಂಙಳ್ ಪ್ರಾರ್ಥನೆ ನಡೆಸಿಕೊಡಲಿದ್ದು, ಸಯ್ಯಿದ್ ಮುಹಮ್ಮದ್ ತುರಾಬ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಪ್ರಧಾನ ವೇದಿಕೆಯಲ್ಲಿ ಸಂಜೆ 7ರಿಂದ ಸನದ್ ದಾನ ಮಹಾ ಸಮ್ಮೇಳನ ಆರಂಭವಾಗಲಿದೆ. ಸಯ್ಯಿದ್ ಕೆ.ಎಸ್.ಅಟ್ಟಕೋಯ ತಂಙಳ್ ಕುಂಬೋಲ್ ಪ್ರಾರ್ಥನೆಯನ್ನು ನಡೆಸಿಕೊಡಲಿದ್ದಾರೆ. ಸಿ.ಪಿ.ಉಬೈದುಲ್ಲಾ ಸಖಾಫಿ ಸ್ವಾಗತಿಸುವರು. ಮರ್ಕಝ್ ಅಧ್ಯಕ್ಷ ಸಯ್ಯಿದ್ ಅಲಿ ಬಾಫಕಿಯವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷ ಇ ಸುಲೈಮಾನ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಸನದ್ ದಾನ ವಿತರಣೆ ನಡೆಯಲಿದೆ.
ಮರ್ಕಝ್ ಮಹಾನಿರ್ದೇಶಕ ಸಿ ಮುಹಮ್ಮದ್ ಫೈಝಿ ಸಂದೇಶ ಉಪನ್ಯಾಸ ನೀಡಲಿದ್ದಾರೆ. ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಸನದ್ ದಾನ ಉಪನ್ಯಾಸ ನೀಡಲಿದ್ದಾರೆ. ಸಮಸ್ತದ 100 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಘೋಷಿಸಲಾದ ಕಾರ್ಯಕ್ರಮಗಳಿಗೆ ಸಮ್ಮೇಳನದಲ್ಲಿ ಚಾಲನೆ ನೀಡಲಾಗುವುದು. ರಾಜಸ್ಥಾನ ಮುಪ್ತಿ ಆಲಂ ಹಝ್ರತ್ ಅಲ್ಲಾಮ ಶೇರ್ ಮುಹಮ್ಮದ್ ಖಾನ್ ಸಾಹಿಬ್ ಜೋಧಪುರ, ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ, ಸಯ್ಯಿದ್ ತ್ವಾಹಾ ತಂಙಳ್ ಸಖಾಫಿ, ಫಿರ್ದೌಸ್ ಸಖಾಫಿ ಕಡವತ್ತೂರು ಮತ್ತು ಜನಾಬ್ ನೌಶಾದ್ ಆಲಂ ಮಿಸ್ಟಾಹಿ ಮಾತನಾಡಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡವರು
1. PP ಅಹ್ಮದ್ ಸಖಾಫಿ ಕಾಶಿಪಟ್ನ, ಅಧ್ಯಕ್ಷರು ಕರ್ನಾಟಕ ಸಖಾಫಿ ಕೌನ್ಸಿಲ್ ರಾಜ್ಯ ಸಮಿತಿ
2.KK ಮುಹ್ಯುದ್ದೀನ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸಖಾಫಿ ಕೌನ್ಸಿಲ್ ರಾಜ್ಯ ಸಮಿತಿ
3.ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು, ಕಾರ್ಯದರ್ಶಿ ಕರ್ನಾಟಕ ಸಖಾಫಿ ಕೌನ್ಸಿಲ್ ರಾಜ್ಯ ಸಮಿತಿ
4.ಮುಸ್ತಫಾ ಸಖಾಫಿ ಬೇಂಗಿಲ, ಕಾರ್ಯ ದರ್ಶಿ ಸಖಾಫಿ ಕೌನ್ಸಿಲ್ ರಾಜ್ಯ ಸಮಿತಿ.
5.ಮಹೂಬ್ ಸಖಾಫಿ ಕಿನ್ಯ, ಪ್ರಧಾನ ಕಾರ್ಯದರ್ಶಿ ಸಖಾಫಿ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ.