ಸುಳ್ಯ; ರಿಫಾಯಿಯ್ಯಾ ಜುಮಾ ಮಸ್ಜಿದ್ ಎಣ್ಮೂರು-ಮುಚ್ಚಿಲ ದಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ಇದರ 16ನೇ ವಾರ್ಷಿಕ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಇದೇ ಬರುವ ಜನವರಿ 30 ಮಂಗಳವಾರದಂದು ಮುಚ್ಚಿಲ ಮಸೀದಿಯ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು, ಅಸ್ಸಯ್ಯದ್ ಇಬ್ನು ಮೌಲಾ ತಂಙಳ್ ಅಲ್ ಬುಖಾರಿ ಚೇಲಕ್ಕಾಡ್ ಕೇರಳ, ಅಸ್ಸಯ್ಯದ್ ಮಾಡಾವು ತಂಙಳ್, ಅಸ್ಸಯ್ಯದ್ ಕುಂಞಿಕೋಯ ತಂಙಳ್ ಸುಳ್ಯ, ಅಬೂ ಹನ್ನತ್ ಮುಹಮ್ಮದ್ ಸಖಾಫಿ ಸುರಿಬೈಲ್, ಮುಹಮ್ಮದ್ ಶರೀಫ್ ಹಿಮಮಿ ಕಕ್ಕಿಂಜೆ ಮೊದಲಾದವರು ಭಾಗವಹಿಸಲಿದ್ದಾರೆ.
ಮುಖ್ಯ ಪ್ರಭಾಷಣಗಾರರಾಗಿ ನೌಫಲ್ ಸಖಾಫಿ ಅಲ್ ಹಿಕಮಿ ಕಳಸ ರವರು ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.