janadhvani

Kannada Online News Paper

‘ಸೌದಿಯಾ’ ಸಂಸ್ಥೆಯಿಂದ ಜಿದ್ದಾ ವಿಮಾನ ನಿಲ್ದಾಣದಿಂದ ಮಕ್ಕಾಕೆ ವಿದ್ಯುತ್ ವಿಮಾನ- ಒಪ್ಪಂದಕ್ಕೆ ಸಹಿ

ಸೌದಿ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ನಿರ್ದೇಶಕ ಅಬ್ದುಲ್ಲಾ ಅಲ್-ಶಹ್ರಾನಿ ಅವರು ಸೇವೆಗಾಗಿ 100 ಜರ್ಮನ್ ಎಲೆಕ್ಟ್ರಿಕ್ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಜಿದ್ದಾ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದ್ಯುತ್ ವಿಮಾನದ ಮೂಲಕ ಮಕ್ಕಾಕ್ಕೆ ಹಾರಬಹುದು. ವಿಮಾನಗಳು ಜಿದ್ದಾ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣದಿಂದ ಮಕ್ಕಾ ಹೋಟೆಲ್ ಏರ್‌ಸ್ಟ್ರಿಪ್‌ಗಳಿಗೆ ಹಾರಾಟ ನಡೆಸಲಿದೆ. ಸೌದಿ ವಿಮಾನಯಾನ ಸಂಸ್ಥೆ ‘ಸೌದಿಯಾ’ ಈ ಕುರಿತು ಪ್ರಕಟಣೆ ಹೊರಡಿಸಿದೆ.

ಸೌದಿ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ನಿರ್ದೇಶಕ ಅಬ್ದುಲ್ಲಾ ಅಲ್-ಶಹ್ರಾನಿ ಅವರು ಸೇವೆಗಾಗಿ 100 ಜರ್ಮನ್ ಎಲೆಕ್ಟ್ರಿಕ್ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ನಾಲ್ಕರಿಂದ ಆರು ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನವು ಗರಿಷ್ಠ 200 ಕಿ.ಮೀ ದೂರದವರೆಗೆ ಚಲಿಸುತ್ತದೆ ಎಂದು ಅಲ್-ಶಹ್ರಾನಿ ಹೇಳಿದರು.

ಮೊದಲ ಹಂತದ ವಿಮಾನಗಳ ಸೇವೆಗಳ ನಂತರ, ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಮತ್ತು ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ದೇಶದ ಇತರ ಭಾಗಗಳಿಗೂ ಸೇವೆಯನ್ನು ಪರಿಗಣಿಸಲಾಗುವುದು ಎಂದು ಶಹ್ರಾನಿ ಹೇಳಿದರು.

error: Content is protected !! Not allowed copy content from janadhvani.com