ಬಂಟ್ವಾಳ ನಗರ ಪೊಲೀಸ್ ಠಾಣೆ, ರೋಟರಿ ಕ್ಲಬ್ (ರಿ) ಮೊಡಂಕಾಪು ಹಾಗೂ ಎಮರ್ಜೆನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ (ರಿ) ದ ಕ ಕರ್ನಾಟಕ ಇದರ ವತಿಯಿಂದ ಮಾದಕ ದ್ರವ್ಯ ನಿರ್ಮೂಲನ ಜಾಗೃತಿ ಮತ್ತು ರ್ಯಾಲಿ ಕಾರ್ಯಕ್ರಮವು ಇಂದು 07/01/2024 ಬೆಳಿಗ್ಗೆ 10 ಗಂಟೆಗೆ ಬಿಸಿರೋಡ್ ತಾಲೂಕು ಕಚೇರಿ ಮುಂಬಾಗದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ರೋಟರಿ ಕ್ಲಬ್ ಸದಸ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ)ದ.ಕ ಕರ್ನಾಟಕ ಸದಸ್ಯರು,ಮತ್ತು ಊರ ನಾಗರೀಕರು ಉಪಸ್ಥಿತರಿದ್ದರು.