janadhvani

Kannada Online News Paper

ಸೌದಿ ದೊರೆ ಸಲ್ಮಾನ್ ಘೋಷಿಸಿದ ಕ್ಷಮಾದಾನ- 4,358 ಕೈದಿಗಳಿಗೆ ಬಿಡುಗಡೆ ಭಾಗ್ಯ

ಘೋರ ಅಪರಾಧಿಗಳನ್ನು ಹೊರತುಪಡಿಸಿ, ಸೌದಿ ಅರೇಬಿಯಾದಾದ್ಯಂತ ಜೈಲುಗಳಲ್ಲಿರುವ ಕೈದಿಗಳಿಗೆ ದೊರೆ ಕ್ಷಮಾದಾನವನ್ನು ಘೋಷಿಸಿದ್ದರು.

ರಿಯಾದ್: ಕಳೆದ ವರ್ಷ ಸೌದಿ ರಾಜ ಸಲ್ಮಾನ್ ಘೋಷಿಸಿದ ಕ್ಷಮಾದಾನದಿಂದ ಮಕ್ಕಾ ಪ್ರಾಂತ್ಯದ 4,358 ಕೈದಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಮಕ್ಕಾ ಗವರ್ನರೇಟ್ ಪ್ರಕಟಿಸಿದೆ. ವಿವಿಧ ಪ್ರಕರಣಗಳಿಂದ ಜೈಲುಗಳಲ್ಲಿದ್ದ ಹಲವಾರು ದೇಶಗಳ ಜನರನ್ನು ಬಿಡುಗಡೆ ಮಾಡಲು ಮತ್ತು ಅವರು ಜೀವನಕ್ಕೆ ಮರಳಲು ದೊರೆಯ ಕರುಣೆಯು ಕಾರಣವಾಯಿತು.

ಘೋರ ಅಪರಾಧಿಗಳನ್ನು ಹೊರತುಪಡಿಸಿ, ಸೌದಿ ಅರೇಬಿಯಾದಾದ್ಯಂತ ಜೈಲುಗಳಲ್ಲಿರುವ ಕೈದಿಗಳಿಗೆ ದೊರೆ ಕ್ಷಮಾದಾನವನ್ನು ಘೋಷಿಸಿದ್ದರು. ಮಕ್ಕಾ ಪ್ರಾಂತ್ಯದಲ್ಲಿ 11.1 ಕೋಟಿ ಚದರ ಮೀಟರ್‌ನ ಅಕ್ರಮ ಒತ್ತುವರಿಯನ್ನು ಕಳೆದ ವರ್ಷ ತೆರವು ಮಾಡಿ ಮರುಪಡೆಯಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಗವರ್ನರೇಟ್ ಹೇಳಿದರು.

ಪ್ರಾಂತ್ಯಕ್ಕೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಹಲವಾರು ಪ್ರಯತ್ನಗಳನ್ನು ಸಹ ತಡೆಹಿಡಿಯಲಾಯಿತು. ಒಂದು ವರ್ಷದ ಅವಧಿಯಲ್ಲಿ ಆರು ಟನ್ ಡ್ರಗ್ಸ್ ಅನ್ನು ಭದ್ರತಾ ಇಲಾಖೆಗಳು ವಶಪಡಿಸಿಕೊಂಡಿವೆ. ನಾಗರಿಕ ಇಲಾಖೆಗೆ ಸಂಬಂಧಿಸಿದ ನಾಗರಿಕರ 3,426 ಪ್ರಕರಣಗಳನ್ನು ಪರಿಹರಿಸಲಾಗಿದೆ ಮತ್ತು 36,000 ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸಲಾಗಿದೆ. ಈ ಪ್ರಾಂತ್ಯದಲ್ಲಿ 5,940 ಕಾರ್ಮಿಕ ಪ್ರಕರಣಗಳನ್ನು ಪರಿಹರಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

error: Content is protected !! Not allowed copy content from janadhvani.com