ಬಹರೈನ್: “ನಾವು ಭಾರತೀಯರು” ಎಂಬ ಘೋಷಣೆಯೊಂದಿಗೆ ಎಸ್ ಎಸ್ ಎಫ್ ವಿಧ್ಯಾರ್ಥಿ ಯುವ ಸಂಘಟನೆಯ ಐವತ್ತರ ಸಂಭ್ರಮ ಮುಂಬೈಯಲ್ಲಿ ನಡೆಯುತ್ತಿರುವುದು ಬಹುದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. ದೇಶದ ಇಪ್ಪತ್ತೈದು ರಾಜ್ಯಗಳ ವಿಧ್ಯಾರ್ಥಿ ಯುವ ಜನತೆಯ ಸಾನಿಧ್ಯದೊಂದಿಗೆ ಗೋಲ್ಡನ್ ಫಿಫ್ಟಿ ಕಾನ್ಫರೆನ್ಸ್ ಐತಿಹಾಸಿಕ ಗೊಳ್ಳಲಿದೆ ಎಂದು ಹಾಫಿಝ್ ಸುಫ್ಯಾನ್ ಸಖಾಫಿ ಉಸ್ತಾದರು ಹೇಳಿದರು.
ನವಂಬರ್ 24,25,26 ದಿನಗಳಲ್ಲಿ ಮುಂಬೈಯ ಮಹಾನಗರದಲ್ಲಿ ನಡೆಯುವ ಎಸ್ ಎಸ್ ಎಫ್ ಇಂಡಿಯಾ ಗೋಲ್ಡನ್ ಫಿಫ್ಟಿ ಸಮ್ಮೇಳನದ ಪ್ರಚರಣಾರ್ಥ ಬಹರೈನ್ KCF, ICF , RSC ಯ ನೇತೃತ್ವದಲ್ಲಿ ಅದ್ದೂರಿಯಾಗಿ ಮನಾಮ ಕೆಎಂಸಿಸಿ ಆಡಿಟೋರಿಯಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಸಮಕಾಲೀನ ಭಾರತೀಯ ಮುಸ್ಲಿಮರ ಅತ್ಯಂತ ದೊಡ್ಡ ಬೇಡಿಕೆಯನ್ನು ಈಡೇರಿಸುವಲ್ಲಿ ಎಸ್ ಎಸ್ ಎಫ್ ಯಶಸ್ವಿಯಾಗಿ ಹೆಜ್ಜೆ ಇಟ್ಟಿದೆ. ದೇಶದಾದ್ಯಂತ ಶೈಕ್ಷಣಿಕ ಚಳುವಳಿಯಲ್ಲಿ ಮಾದರೀ ಸೇವೆ ಸಲ್ಲಿಸುತ್ತಿರುವ ಸಂಘಟನೆಯ ನಾಯಕರು ಉತ್ತರ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಿದ್ದಾರೆ. ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶೈಕ್ಷಣಿಕ ಸಾಮಾಜಿಕ ಸಂಘಟಿತ ಚಳುವಳಿ ದೇಶಕ್ಕೆ ಮಾದರಿಯಾಗಿದ್ದು ಭಾರತೀಯ ಮುಸ್ಲಿಮರಿಗೆ ಹೊಸ ದಿಕ್ಕನ್ನು ತೋರಿಸಿ ಕೊಡುತ್ತಿದೆ ಎಂದು ಅವರು ಹೇಳಿದರು.
ಐಸಿಎಫ್ ಬಹರೈನ್ ರಾಷ್ಟ್ರೀಯ ನಾಯಕರಾದ ಝೈನುದ್ದೀನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಸಿಎಫ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಅಬ್ದುಲ್ ಹಕೀಂ ಸಖಾಫಿ ಉಸ್ತಾದರು ದುಆ ಗೈದರು. ಸುಫೈರ್ ಸಖಾಫಿ ವಯನಾಡ್ ಹಾಗೂ ಸಂಗಡಿಗರು ಬುರ್ದಾ ಆಲಾಪಿಸಿದರು. ಅಬೂಬಕರ್ ಲತೀಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಹಮ್ಮದ್ ಜಾಫರ್ ಕೋಯ ಬಾಫಖಿ ಸ್ವಾದಿಖ್ ತಂಙಲ್ ರವರ ನೇತೃತ್ವ ವಹಿಸಿದ್ದರು.
ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಆರ್ ಎಸ್ ಸಿ ಚೇರ್ಮಾನ್ ಮುನೀರ್ ಸಖಾಫಿ, ಅಬ್ದುಲ್ ರಹೀಂ ಸಖಾಫಿ ಮರವೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಅಸ್ಸಖಾಫ್ ತಂಙಲ್ ಆದೂರು, ಕೆಸಿಎಫ್ ಐಸಿ ಫೈನಾನ್ಸಿಯಲ್ ಕಂಟ್ರೋಲರ್ ಅಲೀ ಮುಸ್ಲಿಯಾರ್ ಕೊಡಗು, ಕೆಎಂಜೆ ಕೋಝಿಕೋಡ್ ಪ್ರಧಾನ ಕಾರ್ಯದರ್ಶಿ ಅಫ್ಝಲ್ ಕೋಲಾರಿ, ಐಸಿಎಫ್ ಪ್ರಧಾನ ಕಾರ್ಯದರ್ಶಿ ಎಂ ಸಿ ಅಬ್ದುಲ್ ಕರೀಂ ಹಾಜಿ, ಪಿ.ಪಿ.ಕೆ. ಅಬೂಬಕರ್ ಹಾಜಿ, ಸುಲೈಮಾನ್ ಹಾಜಿ, ಇಬ್ರಾಹೀಂ ಸಅದಿ ಉಸ್ತಾದ್, ಅಹ್ಮದ್ ಮೌಲವಿ, ಮಮ್ಮುಟ್ಟಿ ಉಸ್ತಾದ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಸ್ಸಯ್ಯಿದ್ ಮುಹಮ್ಮದ್ ತುರಾಬ್ ಅಸ್ಸಖಾಫ್ ತಂಙಲ್ ಭಕ್ತಿ ನಿರ್ಭರವಾಗಿ ದುಆ ನೆರವೇರಿಸಿದರು.
ಆರ್ ಎಸ್ ಸಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಂಗರ ಸ್ವಾಗತಿಸಿ, ಕೆಸಿಎಫ್ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಶರೀಫ್ ಕಕ್ಕೆಪದವು ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ಕಾರ್ಯದರ್ಶಿ ಮನ್ಸೂರ್ ಬೆಳ್ಮ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದರು.
KCF, ICF, RSC ಕೇರಳ ಹಾಗೂ ಕರ್ನಾಟಕದ ಪ್ರಸಿದ್ಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಡೆಸಿದಂತಹಾ ಪ್ರಪ್ರಥಮ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಬಹಳ ಯಶಸ್ವಿಯಾಗಿ ನಡೆಯಿತು. ಕೆಸಿಎಫ್ ರಾಷ್ಟ್ರೀಯ ಸಮಿತಿ, ಝೋನ್, ಸೆಕ್ಟರುಗಳ ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.