ಮಂಗಳೂರು: ಇತ್ತೀಚೆಗೆ ಕೊಚ್ಚಿಯ ಕಳಮಶೇರಿಯಲ್ಲಿ ನಡೆದ ಸ್ಫೋಟ ಘಟನೆಯ ಸುದ್ದಿಯನ್ನು, ತಲೆಗೆ ಟೋಪಿ ಹಾಕಿದ ವ್ಯಕ್ತಿಯ ಫೋಟೋ ಪ್ರದರ್ಶಿಸಿ ಮತ್ತು ಇತರ ಸುಳ್ಳು ಸುದ್ದಿಯನ್ನು ಪ್ರಕಟಿಸಿ,ಮುಸ್ಲಿಮ್ ವಿದ್ವೇಶವನ್ನು ಮೆರೆದ ಪವರ್ ಟಿವಿ ನ್ಯೂಸ್ ಬ್ಲಾಗ್ ನ ಪುವರ್ ತನವೆಂಬ ಸಣ್ಣತನವನ್ನು ಜನರು ಅರಿಯಬೇಕಿದೆ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಯಾವುದಾದರೂ ಘಟನೆ ನಡೆದರೆ ತಮ್ಮ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಬಿಚ್ಚಿ ಅದನ್ನು ಶತಾಯ ಗತಾಯ ಮುಸ್ಲಿಮ್ ಸಮುದಾಯದ ವಿರುದ್ಧ ಎತ್ತಿಕಟ್ಟುವ ಪವರ್ ನಂತಹ ಸುಳ್ಳು ಸುದ್ದಿ ಬಾಕರರ ಇಂತಹ ಸುದ್ದಿಗಳಿಂದ ಓದುಗರು ಮತ್ತು ವೀಕ್ಷಕರು ಒಂದು ಸಮುದಾಯದ ಜನರನ್ನು ತಪ್ಪು ಭಾವನೆಯಿಂದ ಸೃಷ್ಟಿಸಲು ಕಾರಣವಾಗುವುದು ಮಾದ್ಯಮ ರಂಗ ಸೃಷ್ಟಿಸಿದ ಒಂದು ಮಹಾ ದುರಂತವೇ ಸರಿ,ಜನರು ಇದನ್ನು ಅರಿಯಬೇಕಿದೆ.
ಘಟನೆಯ ತನಿಖೆಯ ವಿವರವನ್ನು ಪೊಲೀಸರು ಬಹಿರಂಗ ಪಡಿಸುವ ಪೂರ್ವದಲ್ಲಿಯೇ ತಮ್ಮ ಬಿಟ್ಟಿ ತೀರ್ಪು ನೀಡಿ ಸಾರ್ವಜನಿಕರ ಮತ್ತು ಮುಗ್ದರ ಮನಸ್ಸಿನಲ್ಲಿ ಒಂದು ಸಮುದಾಯವನ್ನು ಆರೋಪಿತ ಸ್ಥಾನಕ್ಕೆ ತಂದು ನಿಲ್ಲಿಸುವ ಇಂತಹ ಬೇಜವಾಬ್ದಾರಿ ಪತ್ರಿಕೋದ್ಯಮಕ್ಕೆ ಈ ದೇಶದಲ್ಲಿ ನಡೆದ ಅದೆಷ್ಟೋ ಅನ್ಯಾಯ ಅಕ್ರಮಗಳು ಸುದ್ದಿಯಾಗದೆ ಇದ್ದುದ್ದು ವಿಪರ್ಯಾಸ. ಪವರ್ ಟಿವಿ ಯಂತಹ ಪುಂಗಿ ಮಾಧ್ಯಮವನ್ನು ಜನರು ತಿರಸ್ಕರಿಸಬೇಕಿದೆ. ಸುಳ್ಳು ಸುದ್ದಿ ಪ್ರಕಟಿಸಿದ ಮಾದ್ಯಮದ ಮೇಲೆ ವಾರ್ತಾ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕೆ.ಅಶ್ರಫ್(ಮಾಜಿ ಮೇಯರ್) ಆಗ್ರಹಿಸಿದ್ದಾರೆ.