janadhvani

Kannada Online News Paper

ಅತ್ಯಗತ್ಯ ಸ್ಥಳಗಳಲ್ಲಿ ಮದ್ರಸ ನಿರ್ಮಾಣ: S.M.A ಹೊಸ ಕ್ರಾಂತಿಯನ್ನು ನಿರ್ಮಿಸಿದೆ- ಸಯ್ಯಿದ್ ಶಹೀದುದ್ದೀನ್ ತಂಙ್ಙಳ್

ಶಿವಮೊಗ್ಗ : ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ (ಎಸ್.ಎಂ.ಎ) ಕರ್ನಾಟಕ ರಾಜ್ಯ ಸಮಿತಿ ಇದರ ನೂತನ ಮದ್ರಸ ನಿರ್ಮಾಣ ಯೋಜನೆಯಡಿ ಶಿವಮೊಗ್ಗ ಜಿಲ್ಲೆಗೊಳಪಟ್ಟ ತೀರ್ಥಹಳ್ಳಿ ತಾಲ್ಲೂಕಿನ ಹೊಸಳ್ಳಿ ಎಂಬಲ್ಲಿ ನಿರ್ಮಾಣಗೊಂಡ ನೂತನ ಮದ್ರಸದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಬಹಳ ವಿಜೃಂಭಣೆಯಿಂದ ಜರುಗಿತು.ನೂತನ ಮದ್ರಸ ಕಟ್ಟಡದ ಉದ್ಘಾಟನೆ ಯನ್ನು ಎಸ್. ಎಂ. ಎ. ರಾಜ್ಯಾಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ಅಲ್ ಹಾದಿ ತಂಙ್ಙಳ್ ನೆರವೇರಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ತೀರ್ಥಹಳ್ಳಿ ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙ್ಙಳ್ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಯ್ಯಿದ್ ಶಹೀದುದ್ದೀನ್ ತಂಙ್ಙಳ್ ಮಾತನಾಡಿ ಎಸ್. ಎಂ. ಎ. ರಾಜ್ಯ ಸಮಿತಿಯು ಮೂರು ಹೊಸ ಮದ್ರಸಗಳನ್ನು ನಿರ್ಮಿಸುವುದರ ಮೂಲಕ. ಹೊಸ ಕ್ರಾಂತಿಯನ್ನೇ ನಿರ್ಮಾಣ ಮಾಡಿದೆ. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕಲಿಯುವ ಮೂಲಕ ನಮ್ಮ ಮಕ್ಕಳು ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಬೇಕೆಂದು ಅವರು ಸಭೀಕರಿಗೆ ಕಿವಿ ಮಾತು ಹೇಳಿದರು.

ಎಸ್. ಎಂ. ಎ. ರಾಜ್ಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಜೆ.ಎಂ.ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ.ಕಾಮಿಲ್ ಸಖಾಫಿ ಸುರಿಬೈಲ್, ಎಸ್.ಎಂ.ಎ.ಶಿವಮೊಗ್ಗ ಜಿಲ್ಲಾಧ್ಯಕ್ಷ ಕಡ್ತೂರ್ ಇಬ್ರಾಹೀಂ ಹಾಜಿ, ಎಸ್.ಎಂ.ಎ. ದ.ಕ.ವೆಸ್ಟ್ ಜಿಲ್ಲಾಧ್ಯಕ್ಷ ಅಡ್ಯಾರ್ ಪದವು ಎ. ಪಿ. ಇಸ್ಮಾಯೀಲ್, ರಾಜ್ಯ ಉಪಾಧ್ಯಕ್ಷರುಗಳಾದ ಎ.ಕೆ.ಅಹ್ಮದ್,ಮುಹಮ್ಮದ್ ಹನೀಫ್ ಬೆಜ್ಜವಳ್ಳಿ , ರಾಜ್ಯ ಕಾರ್ಯದರ್ಶಿ ಎನ್.ಎಸ್.ಉಮರ್ ಮಾಸ್ಟರ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಎಸ್. ಎಂ. ಎ. ರಾಜ್ಯ ಕ್ಷೇಮ ವಿಭಾಗ ಕಾರ್ಯದರ್ಶಿ ಕೆ.ಎ.‌ ಅಶ್ರಫ್ ಸಖಾಫಿ ಮೂಡಡ್ಕ ಸ್ವಾಗತಿಸಿ ಕೊನೆಯಲ್ಲಿ ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯರ್ ವಂದಿಸಿದರು.