ಮಕ್ಕಾ : ಉತ್ತರ ಕರ್ನಾಟಕದ ಬಡ ಮುಗ್ಧ ಮನುಷ್ಯರಿಗೆ ಆಶಾಕಿರಣವಾಗಿ ಬೆಳೆದಿರುವ ಮಸ್ದರ್ ಎಜ್ಯು ಆಂಡ್ ಚಾರಿಟಿ ಇದರ ಮಕ್ಕತುಲ್ ಮುಕರ್ರಮಾ ಸಮಿತಿ ರಚನೆ ಏಷ್ಯನ್ ಆಡಿಟೋರಿಯಂನಲ್ಲಿ ನಡೆಯಿತು.
ಕುಬನೂರು ಹನೀಫ್ ಅಮಾನಿ ಮಕ್ಕಾ ಸಭೆಯನ್ನು ಉದ್ಘಾಟಿಸಿದರು. ಮೌಲಾನಾ ಅಬೂ ಸುಫ್ಯಾನ್ ಮದನಿ ಶುಭ ಹಾರೈಸಿದರು. ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ವಿವರಣೆ ನೀಡಿದರು. ಬಳಿಕ ಮಕ್ಕತುಲ್ ಮುಕರ್ರಮಾ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ಜನಾಬ್ ಅಬ್ದುಲ್ ಹಮೀದ್ ಉಳ್ಳಾಲ ಅಧ್ಯಕ್ಷರಾಗಿಯೂ ಕಲಂದರ್ ಶಾಫಿ ಅಸೈಗೋಳಿ ಪ್ರಧಾನ ಕಾರ್ಯದರ್ಶಿಯಾಗಿಯೂ ಫಾರೂಕ್ ಹನೀಫಿ ಕೋಶಾಧಿಕಾರಿಯಾಗಿ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಮೂಸ ಹಾಜಿ ಕಿನ್ಯ, ಅಬ್ದುರ್ರಝಾಕ್ ಮುಸ್ಲಿಯಾರ್ ರಂತಡ್ಕ ಕಾರ್ಯದರ್ಶಿಗಳಾಗಿ ಅಬ್ದುಲ್ ಮಜೀದ್ ಹನೀಫಿ, ಹಾರಿಸ್ ಬೋವು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.