ಮೇ.16 :ಭಾರತೀಯ ರೂಪಾಯಿ ಮೌಲ್ಯವು ಕುಸಿಯುತ್ತಿದ್ದು,ಮಂಗಳವಾರ ದಿನವಿಡೀ ರೂಪಾಯಿ ಮೌಲ್ಯ ಏರಿಳಿತ ಕಂಡಿದೆ.ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 67.52ಕ್ಕೆ ಅಂತ್ಯವಾಗಿದ್ದರೆ ಮಂಗಳವಾರ 68.11ಕ್ಕೆ ಅಂತ್ಯವಾಗಿದೆ.ಇದು ಜನವರಿ 2017ರಿಂದೀಚೆಗೆ ಕಂಡ ಗರಿಷ್ಠ ಕುಸಿತವಾಗಿದೆ.
ರೂಪಾಯಿ ಮೌಲ್ಯ ಕುಸಿತ ಕಾಣಲು ಕರ್ನಾಟಕ ಚುನಾವಣೆ ಒಂದು ಕಾರಣವಾದರೆ, ಏರುತ್ತಿರುವ ತೈಲ ಬೆಲೆ, ಹೆಚ್ಚುತ್ತಿರುವ ತೈಲ ಆಮದು ಬಿಲ್ ಕೂಡ ಕಾರಣವೆಂದು ಎಚ್‍ಎಸ್‍ಬಿಸಿ ವರದಿ ತಿಳಿಸಿದೆ.ಈ ವರ್ಷದ ಆರಂಭದಿಂದ ಡಾಲರ್ ಎದುರು ರೂಪಾಯಿ ಮೌಲ್ಯ 6.22ರಷ್ಟು ಕುಸಿದಿದೆ. ಕಳೆದ ವರ್ಷ ಈ ಕುಸಿತ ಶೇ 6 ಆಗಿತ್ತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಪ್ರಮುಖ ಗಲ್ಫ್ ಕರೆನ್ಸಿಗಳ ವಿನಿಮಯ ಈ ರೀತಿ ಇದೆ
ಯುಎಇ ದಿರ್ಹಮ್: 18.4676, ಕತಾರ್ ರಿಯಾಲ್:18.4378, ಕುವೈಟ್ ದಿನಾರ್: 223.898, ಸೌದಿ ರಿಯಾಲ್:18.0854 ಬಹರೈನ್ ದಿನಾರ್:178.895, ಒಮಾನ್ ರಿಯಾಲ್: 175.848