ಮಂಗಳೂರು: ವಖ್ಫ್ ಆಸ್ತಿ ಅಂದರೆ ಅದು ಮುಸ್ಲಿಮ್ ಹಿರಿಯರು ದೇವನಿಗಾಗಿ ಅರ್ಪಿಸಿದ ಆಸ್ತಿಯಾಗಿದೆ ಹೊರತು ಯತ್ನಾಳ್ ಹಿರಿಯರ ಆಸ್ತಿಯಲ್ಲ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ರಿಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ರವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಹಾಡಿ ಹೊಗಳುವ ಭರದಲ್ಲಿ ಕೇಂದ್ರ ಸರ್ಕಾರದ ಅಷ್ಟೂ ವರ್ಷಗಳ ವೈಫಲ್ಯವನ್ನು ಮರೆಮಾಚುವ ಉದ್ದೇಶದಿಂದ ಮತ್ತು ರಾಜ್ಯದಲ್ಲಿ ಕೋಮು ವಿದ್ವೇಶವನ್ನು ಮುಂದುವರಿಸುವ ಭಾಗವಾಗಿ ಪ್ರಧಾನ ಮಂತ್ರಿ ಮೋದಿಗೆ ತಾನು ಪತ್ರ ಬರೆದು ವಕ್ಫ್ ಕಾಯ್ದೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದ್ದೇನೆಂದು ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ವಖ್ಫ್ ಆಸ್ತಿಗಳು ಈ ದೇಶದಲ್ಲಿ ಜೀವಿಸಿ, ಗತಿಸಿ ಹೋದ ಮುಸ್ಲಿಮರು ಮತ್ತು ಹಾಲಿ ಭಾರತದ ಪ್ರಜೆಗಳಾದ ಮುಸ್ಲಿಮರ ಕೊಡುಗೆಯಾಗಿದೆ. ಪ್ರಸ್ತುತ ಅಷ್ಟೂ ವಕ್ಫ್ ಆಸ್ತಿಗಳನ್ನು ಮುಸ್ಲಿಮ್ ಸಂಸ್ಥೆಗಳು ನಿರ್ವಹಿಸಿ ಜನರ ಧಾರ್ಮಿಕ ಸವಲತ್ತುಗಳನ್ನು ಪೂರೈಸುತ್ತಿದೆ.
ಯತ್ನಾಳ್, ವಕ್ಫ್ ಆಸ್ತಿ ರದ್ದತಿಯಿಂದ ಸರಕಾರಕ್ಕೆ ಕರ್ಚು ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ. ವಕ್ಫ್ ಸಂಸ್ಥೆಯೇ ಸರಕಾರದ ಅಧೀನದಲ್ಲಿರುವಾಗ ವಕ್ಫ್ ರದ್ದತಿ ಪ್ರಸ್ತಾಪ ಯಾಕೆ ಎಂದು ಯತ್ನಾಳ್ ಹೇಳಬೇಕು. ವಕ್ಫ್ ರದ್ದತಿ ಕೋರಲು ವಕ್ಫ್ ಆಸ್ತಿಗಳು ಯತ್ನಾಳ್ ಹಿರಿಯರ ಆಸ್ತಿ ಏನು ಅಲ್ಲ. ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರ ಚಿಂತನೆಯಿಂದ ಮರೆ ಮಾಚಲು ಯತ್ನಾಳ್ ಕೇಶವಕೃಪ ಸಲಹೆಯಂತೆ ಹೇಳಿಕೆ ನೀಡಿ ಜನರನ್ನು ಮುಸ್ಲಿಮ್ ವಿದ್ವೇಶದ ಕಡೆಗೆ ವಾಲಿಸುವ ಪ್ರಯತ್ನದ ಭಾಗವಾಗಿದೆ ಈ ಹೇಳಿಕೆ. ಯತ್ನಾಳ್ ವಾಸ್ತವ ಸತ್ಯ ಅರಿತು ವಕ್ಫ್ ಆಸ್ತಿಯು ಜನರ ಸೌಹಾರ್ದತೆಗೆ ಪೂರಕವಾಗಿ ಅಸ್ತಿತ್ವದಲ್ಲಿ ಇದೆ ಎಂಬುದನ್ನು ತಿಳಿಯಬೇಕು ಎಂದು ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್