janadhvani

Kannada Online News Paper

ಕುದುರೆಗುಂಡಿ: ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ಪೀಪಲ್ ಕಾನ್ಫರೆನ್ಸ್ ಯಶಸ್ವಿ

ಸಂವಿಧಾನದ ಆಶಯವನ್ನು ಸಂವಿಧಾನದ ಪೀಠಿಕೆಯ ಮಹತ್ವವನ್ನು ದೇಶದ ಮೂಲೆ ಮೂಲೆಗಳಲ್ಲಿ ಪಸರಿಸುವುದು ಹಾಗೂ ಗಾಂಜಾ,ಮಧ್ಯಮುಕ್ತ ಭಾರತವನ್ನಾಗಿಸುವುದೇ ಎಸ್ಸೆಸ್ಸೆಫ್ ನ ಮುಖ್ಯ ಆಶಯ

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ತನ್ನ ಐವತ್ತನೇ ವರ್ಷದ ಸಂಭ್ರಮಾಚರಣೆಯನ್ನು ನಾವು ಭಾರತೀಯರು ಎಂಬ ಧ್ಯೇಯದೊಂದಿಗೆ ಸೆಪ್ಟೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಪ್ರಚಾರ ಭಾಗವಾಗಿ ಕುದುರೆಗುಂಡಿ ಪಟ್ಟಣದಲ್ಲಿ ಎಸ್ಸೆಸ್ಸೆಫ್ ಕುದುರೆಗುಂಡಿ ಯೂನಿಟ್ ಮಟ್ಟದ ಪೀಪಲ್ ಕಾನ್ಫರೆನ್ಸ್ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಕುದುರೆಗುಂಡಿ ಯೂನಿಟ್ ಅಧ್ಯಕ್ಷರು ಶರೀಫ್ ಅವರು ನೆರವೇರಿಸಿದರು. ಸ್ವಾಗತ ಭಾಷಣವನ್ನು ಶರ್ಫುದ್ದೀನ್ ನೆರವೇರಿಸಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಿಕಟಪೂರ್ವ ಸದಸ್ಯರು ಸಫ್ವಾನ್ ಸಖಾಫಿ ಶಾಂತಿಪುರ ಅವರು ಮಾತನಾಡಿ ನಾವೆಲ್ಲರೂ ಭಾರತೀಯರು ಎಂಬ ಧ್ಯೇಯವು ದೇಶದಾದ್ಯಂತ ಮೊಳಗಲಿ, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರ್ಪಡೆಗೊಳಿಸಬೇಕು, ಸಂವಿಧಾನದ ಆಶಯವನ್ನು ಸಂವಿಧಾನದ ಪೀಠಿಕೆಯ ಮಹತ್ವವನ್ನು ದೇಶದ ಮೂಲೆ ಮೂಲೆಗಳಲ್ಲಿ ಪಸರಿಸುವುದು ಹಾಗೂ ಗಾಂಜಾ,ಮಧ್ಯಮುಕ್ತ ಭಾರತವನ್ನಾಗಿಸುವುದೇ ಎಸ್ಸೆಸ್ಸೆಫ್ ನ ಮುಖ್ಯ ಆಶಯವೆಂದು ತಿಳಿಸಿದರು.

ಬಿಂತ್ರವಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಹೇಮಂತ್ ಕುಮಾರ್ ಮಾತನಾಡಿ ಎಸ್ಸೆಸ್ಸೆಫ್ ಬಹಳಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ನಮ್ಮ ಪಟ್ಟಣದಲ್ಲಿ ನಡೆಸಿಕೊಂಡು ಬಂದಿದೆ,ಸಮಿತಿಯವರಿಗೆ ಎಲ್ಲಾ ರೀತಿಯ ಶುಭಾಶಯ ಕೋರಿದರು.

ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಪ್ರವೀಣ್ ಶೆಟ್ಟಿ ಅವರು ಎಸ್ಸೆಸ್ಸೆಫ್ ಸಂಘಟನೆಗೆ ಎಲ್ಲಾ ವಿಧದ ಶುಭಕಾಮನೆಗಳನ್ನು ಅರ್ಪಿಸಿದರು‌. ಊರಿನ ಹಿರಿಯ ಮುಖಂಡರ ಮೂಲಕ ಊರಿನ ಯುವಕರ ಕೈ ಚಳಕದಿಂದ ಮೂಡಿ ಬಂದ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಕುದುರೆಗುಂಡಿ ಬದ್ರೀಯ್ಯಾ ಜುಮ್ಮಾ ಮಸೀದಿಯ ಅಧ್ಯಕ್ಷರು ಫಕೀರಬ್ಬ, ಕುದುರೆಗುಂಡಿ ಸುನ್ನೀ ಯುವಜನ ಸಂಘ ಅಧ್ಯಕ್ಷರು ಅಬೂಬಕ್ಕರ್, SYS ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಶರೀಫ್, ಊರಿನ ಮುಖಂಡರು ನಾಗೇಶ್ ನಾಯ್ಕ್, ಊರಿನ ಹಿರಿಯ ನಾಯಕರು ಅಹಮದ್ ಬಾಷ, ಅಬ್ದುಲ್ ರೆಹಮಾನ್, ರಜಬ್, ಮೂಸಬ್ಬ, ಕೆ ಎಸ್ ಮುಹಮ್ಮದ್, ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲೆ ಕೋಶಾಧಿಕಾರಿ ಶಮೀಮ್, ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಸಲೀಮ್ ಹಾಗೂ ಕಾರ್ಯಕ್ರಮದ ಕೇಂದ್ರ ಬಿಂದುವಾದ ಎಸ್ಸೆಸ್ಸೆಫ್ ಕುದುರೆಗುಂಡಿ ಯೂನಿಟ್ ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಯನ್ನು ಎಸ್ಸೆಸ್ಸೆಫ್ ಕುದುರೆಗುಂಡಿ ಯೂನಿಟ್ ಪ್ರಧಾನ ಕಾರ್ಯದರ್ಶಿ ರಮೀಝ್ ಅವರು ನೆರವೇರಿಸಿ ಆಗಮಿಸಿದ ಎಲ್ಲಾ ನಾಯಕರಿಗೂ, ಹಿರಿಯರಿಗೂ, ಕೊಪ್ಪ ಪೋಲೀಸ್ ಠಾಣಾ ಸಿಬ್ಬಂದಿವರ್ಗದವರಿಗೂ, ಗ್ರಾಮಸ್ಥರಿಗೂ, ವಂದನೆಗಳನ್ನು ಅರ್ಪಿಸಿದರು.

error: Content is protected !! Not allowed copy content from janadhvani.com