ದೋಹಾ: ಸ್ವೀಡನ್‌ನಲ್ಲಿ ಖುರ್‌ಆನ್ ಸುಡಲು ಅನುಮತಿ ನೀಡಿರುವುದನ್ನು ಕತಾರ್ ಖಂಡಿಸಿದೆ. ಈ ಕ್ರಮವು ವಿಶ್ವದಾದ್ಯಂತ 200 ಮಿಲಿಯನ್ ಮುಸ್ಲಿಮರನ್ನು ಪ್ರಚೋದಿಸುತ್ತದೆ ಎಂದು ಕತಾರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ.
ಸ್ವೀಡನ್‌ನಲ್ಲಿ ಖುರ್‌ಆನ್ ಸುಟ್ಟ ಘಟನೆಗೆ ಕತಾರ್ ತೀವ್ರವಾಗಿ ಪ್ರತಿಕ್ರಿಯಿಸಿದೆ. ಧರ್ಮ,ವಿಶ್ವಾಸ ಮತ್ತು ಜಾತಿಯ ಹೆಸರಿನಲ್ಲಿ ನಡೆಯುವ ಎಲ್ಲಾ ದ್ವೇಷದ ಪ್ರಚಾರಗಳನ್ನು ಕತಾರ್ ವಿರೋಧಿಸುತ್ತದೆ.
ಪ್ರಪಂಚದಾದ್ಯಂತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸಂಘಟಿತ ಕರೆಗಳು ಮತ್ತು ಇಸ್ಲಾಮೋಫೋಬಿಕ್ ಪ್ರಚಾರಗಳು ಹೆಚ್ಚುತ್ತಿವೆ. ಇಂತಹ ಘಟನೆಗಳ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಮುಂದಾಗಬೇಕು.
ಕತಾರ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ವೀಡಿಷ್ ರಾಜಧಾನಿ ಸ್ಟಾಕ್‌ಹೋಮ್‌ನ ಮಸೀದಿಯ ಮುಂದೆ ಖುರ್‌ಆನ್ ಅನ್ನು ಸುಡುವುದನ್ನು ಹೇಯ ಮತ್ತು ಅತ್ಯಂತ ಪ್ರಚೋದನಕಾರಿ ಎಂದು ಖಂಡಿಸಿದೆ.