ಮಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಗುರಿಯಾಗಿಸಿ, ಸಚಿವ ಅಶ್ವಥ್ ನಾರಾಯಣ್, ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕೆಂದು ಪ್ರಚೋದಿತ ಹೇಳಿಕೆ ನೀಡಿರುವುದು ಖಂಡನಾರ್ಹ,ಅಕ್ಸ್ಯಮ್ಮ ಅಪರಾಧ ಕೂಡಾ, ರಾಜ್ಯದ ಪೊಲೀಸು ಮಹಾ ನಿರ್ದೇಶಕರು ಈ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಿಸಬೇಕಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಗ್ರಹಿಸಿದ್ದಾರೆ.
ಸಿದ್ದು ವಿರುದ್ಧ ಜಾತಿ ಪ್ರಚೋದಿತ ಹೇಳಿಕೆ ನೀಡಲಾಗಿದೆ. ಮೊದಲು ಟಿಪ್ಪು ಬಗ್ಗೆಗಿನ ಹೇಳಿಕೆ ನೀಡಿ ವೈರಿಯಂತೆ ಬಿಂಬಿಸಲಾಗಿದೆ, ನಂತರ ಟಿಪ್ಪುವಿನ ಹೆಸರಿನೊಂದಿಗೆ ಸಿದ್ದರಾಮಯ್ಯರನ್ನು ಸಮೀಕರಿಸಿ ಬಿಂಬಿಸಲಾಯಿತು, ತದ ನಂತರ ಟಿಪ್ಪುವಿನ ದಾರುಣ ಅಂತ್ಯವನ್ನು ವೈಭವೀಕರಿಸಿ, ಸಿದ್ದರಾಮಯ್ಯನವರ ರಾಜಕೀಯ ಅಂತ್ಯದೊಂದಿಗೆ ಸಮೀಕರಿಸಿ ಪ್ರಚೋದಿತ ಹೇಳಿಕೆ ನೀಡಲಾಗಿದೆ.
ಇದು ಮತೀಯ ದ್ವೇಷಿತ ಹೇಳಿಕೆ ಆಗಿದೆ. ಸಿದ್ದುವನ್ನು ಗುರಿಯಾಗಿಸಿ, ಟಿಪ್ಪುವನ್ನು ಸಮೀಕರಿಸಿ, ಮುಸ್ಲಿಮ್ ಜನಾಂಗವನ್ನು ವಿರೋಧಿಸುವ ವ್ಯವಸ್ಥಿತ ಷಡ್ಯಂತ್ರದ ಕೇಶವ ಕೃಪಾ ಪ್ರೇರಿತ ಹೇಳಿಕೆ ನೀಡಲಾಗಿದೆ. ಈ ಪ್ರಚೋದನೆ ಜನರಿಗೆ ಮನವರಿಕೆ ಆಗಲು ಅಧಿಕ ಸಮಯ ಬೇಕಾಗಿಲ್ಲ ಎಂದು ಕೆ.ಅಶ್ರಫ್(ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ