ಕುವೈಟ್ :ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ 2023 ರ ಫೆಬ್ರವರಿ ತಿಂಗಳಲ್ಲಿ ನಡೆಸುವಂತಹ ಕೆಸಿಎಫ್ ಫೌಂಡೇಶನ್ ಡೇ (KCF FOUNDATION DAY) ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಡಿ.9 ರಂದು ಅಲ್ ವಝನ್ ಹಾಲ್ ನಲ್ಲಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಡ್ ಉಸ್ತಾದರ ಅಧ್ಯಕ್ಷತೆ ಯಲ್ಲಿ ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರು, ಸೌತ್ ಝೋನ್ ಮತ್ತು ನಾರ್ತ್ ಝೋನ್ ಮತ್ತು ಝೋನ್ ಗೆ ಒಳಪಟ್ಟ, ಫಾಹೀಲ್, ಮಹಬುಲ, ಫರ್ವನಿಯ, ಸಾಲ್ಮಿಯ, ಸಿಟಿ ಮತ್ತು ಜಹರ ಈ 6 ಸೆಕ್ಟರ್ ಗಳನ್ನೊಳಗೊಂಡ ಸದಸ್ಯರ ಸಮ್ಮುಖದಲ್ಲಿ, ಮತ್ತು ತಮ್ಮ ಸೂಚನೆ ಅನುಮೋದನೆ ಯೊಂದಿಗೆ 2023ಫೆಬ್ರವರಿ ತಿಂಗಳಲ್ಲಿ ನಡೆಯುವ kcf ಫೌಂಡೇಶನ್ ಡೇ ಕಾರ್ಯಕ್ರಮದ ಸ್ವಾಗತ ಸಮಿತಿಯ ಈ ಕೆಳಗಿನ ನಾಯಕರನ್ನು ಆಯ್ಕೆ ಮಾಡಲಾಯಿತು.

ಛೇರ್ಮನ್ ಆಗಿ ಬಹು ಉಮರ್ ಝುಹುರಿ, ಕನ್ವಿನರ್ ಆಗಿ ಜನಾಬ್ ಯಾಕೂಬ್ ಕಾರ್ಕಳ, ಫೈನಾನ್ಸ್ ಕಂಟ್ರೋಲರ್ ಆಗಿ ಜನಾಬ್ ಇಬ್ರಾಹಿಂ ವೇಣೂರು ಇವರನ್ನು ಆಯ್ಕೆ ಮಾಡಲಾಗಿದೆ ಮತ್ತು KCF dayಯ ಕಾರ್ಯಕ್ರಮದ ಯಶಸ್ವಿ ಗಾಗಿ ಐ ಟೀಂ (I TEAM) ಸದಸ್ಯರಿಗೆ ಸಂಪೂರ್ಣ ಜವಾಬ್ದಾರಿಯನ್ನು ಕೊಡಲಾಗಿದೆ, ಪೋಸ್ಟರ್ ನ ಜವಾಬ್ದಾರಿಯನ್ನು ಪ್ರಕಾಶನ ಮತ್ತು ಪ್ರಚಾರ ವಿಭಾಗ ನಡೆಸಲಿದೆ.

2023 ರ ಕ್ಯಾಲಂಡರನ್ನು ಜನಾಬ್ ಮೂಸ ಇಬ್ರಾಹಿಂ, ಉಮರ್ ಝುಹುರಿ ಸಾಹುಲ್ ಹಮೀದ್ ಸಹದಿ ಝುಹುರಿ ಅಬ್ದುಲ್ ಮಲಿಕ್,ಅಬ್ದುಲ್ ಲತೀಫ್ ಬಂಟ್ವಾಳ, ತೌಫೀಕ್ ಕಾರ್ಕಳ, ಸಮೀರ್ ಇಂಜಿನಿಯರ್ ಮುಸ್ತಫಾ ಉಳ್ಳಾಲ,ಅಝೀಝ್ ತಿಂಗಳಾಡಿ ಹಾಗೂ ರಾಷ್ಟ್ರೀಯ, ಝೋನ್, ಸೆಕ್ಟರ್ ನಾಯಕರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.
ಕೆಸಿಎಫ್ ಡೇ ಪ್ರತಿಭೋತ್ಸವ ಕಾರ್ಯ ನಿರ್ವಾಹಕರಾಗಿ ಶಿಕ್ಷಣ ಅಧ್ಯಕ್ಷರು ಬಹುಮಾನ್ಯ ಬಾದುಷಾ ಸಖಾಫಿ ಉಸ್ತಾದರನ್ನು ಆಯ್ಕೆ ಮಾಡಲಾಯಿತು.
ವರದಿ: ಇಬ್ರಾಹಿಂ ವೇಣೂರು
(ಪ್ರಕಾಶನ ಮತ್ತು ಪ್ರಚಾರ ವಿಭಾಗ)
















ಇನ್ನಷ್ಟು ಸುದ್ದಿಗಳು
ಈದ್ ಸಂಭ್ರಮದ ಮೇಲೆ ಯುದ್ಧದ ಛಾಯೆ: ಕುವೈತ್ ಗ್ರ್ಯಾಂಡ್ ಮಸೀದಿಯಲ್ಲಿ ಈದ್ ಪ್ರಾರ್ಥನೆ ರದ್ದು
ಈದ್ ನಂತರ ಸರ್ಕಾರಿ ಕಚೇರಿ ಅವಧಿ ಕಡಿತ- ಶೇ. 30ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ
ಕುಟುಂಬ ಸಂದರ್ಶಕ ವೀಸಾದಲ್ಲಿರುವ ಭಾರತೀಯರ ಮಾಹಿತಿ ಸಂಗ್ರಹಕ್ಕೆ ರಾಯಭಾರ ಕಚೇರಿ ಕ್ರಮ
ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ
ಕುವೈತ್ ಮೇಲೆ ಕ್ಷಿಪಣಿ ದಾಳಿ- ಅಮೆರಿಕಾ ಸೇನಾ ವಿಮಾನಗಳು ಪತನ
ವಲಸಿಗರಿಗೆ ಶುಭ ಸುದ್ದಿ: ‘ಸಹಲ್’ ಅಪ್ಲಿಕೇಶನ್ ನಲ್ಲಿ ಪಾಸ್ಪೋರ್ಟ್ ವಿವರಗಳನ್ನು ನವೀಕರಿಸಲು ಸೌಲಭ್ಯ
ಕುವೈತ್ನಲ್ಲಿ ಚಾಲನಾ ಪರವಾನಗಿ ಕಾರ್ಯವಿಧಾನಗಳು ಮತ್ತಷ್ಟು ಕಠಿಣ
ಯಾತ್ರಿಕರ ಗಮನಕ್ಕೆ: ವಿದೇಶದಿಂದ ಔಷಧಿ ಸಾಗಿಸುವುದಕ್ಕೆ ನಿಯಂತ್ರಣ
ಇಸ್ರಾಅ್ ಮತ್ತು ಮಿ’ರಾಜ್ ಪ್ರಯುಕ್ತ ಜನವರಿ 18 ರಂದು ಸಾರ್ವಜನಿಕ ರಜೆ
ಬ್ಯಾಂಕ್ ಸಾಲ: ಮರುಪಾವತಿಸದ ವಲಸಿಗರು ವಿಮಾನ ನಿಲ್ದಾಣದಲ್ಲಿ ಬಂಧನ