ಮಂಗಳೂರು: ಮುಸ್ಲಿಮ್ ಐಕ್ಯತಾ ವೇದಿಕೆ ಸುರತ್ಕಲ್ ವಲಯ ನಿಯೋಗವು ಸುರತ್ಕಲ್ ವೃತ್ತಕ್ಕೆ ವಿವಾದಿತ ಯಾವುದೇ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡದಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ದ.ಕ.ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ನಿಯೋಗವು, ಸುರತ್ಕಲ್ ವೃತ್ತಕ್ಕೆ ವಿವಾದಿತ ಯಾವುದೇ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡದೆ, ತುಳುನಾಡಿನ ದಂತಕತೆ ನಾಯಕರಾದ ಕೋಟಿ ಚೆನ್ನಯ ಅಥವಾ ನವಮಂಗಳೂರು ನಿರ್ಮಾತೃ ಯು.ಶ್ರೀನಿವಾಸ ಮಲ್ಯ ಅಥವಾ ಕಾರ್ಮಿಕ ನಾಯಕ ಎಂ.ಲೋಕಯ್ಯ ಶೆಟ್ಟಿ ರವರ ಪೈಕಿ ಒಬ್ಬರ ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡಬೇಕೆಂದು ಆಗ್ರಹಿಸಿದೆ.
ಮುಸ್ಲಿಮ್ ಐಕ್ಯತಾ ವೇದಿಕೆ ಸುರತ್ಕಲ್ ಇದರ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ನಿಯೋಗದಲ್ಲಿ ಉಪಾಧ್ಯಕ್ಷರಾದ ಅಬ್ದುಲ್ ಜಲೀಲ್ ಅದ್ದು, ಕಾರ್ಯದರ್ಶಿ ಕೆ.ಷರೀಫ್,ಸದಸ್ಯರಾದ ಅಝೀಝ್ ಉಪಸ್ಥಿತರಿದ್ದರು.