janadhvani

Kannada Online News Paper

ಸೌದಿ: ಝೀಬ್ರಾ ಕ್ರಾಸ್ ಹೊರತುಪಡಿಸಿ ರಸ್ತೆ ದಾಟುವವರಿಗೆ ದಂಡ

ದಮ್ಮಾಮ್ ಸೀಕೋಕ್ ಬಳಿ ರಸ್ತೆ ದಾಟಿದ್ದಕ್ಕಾಗಿ ಭಾರತೀಯರು ಸೇರಿದಂತೆ ಹಲವಾರು ಮಂದಿಗೆ ನಿನ್ನೆ ದಂಡ ವಿಧಿಸಲಾಗಿದೆ

ದಮ್ಮಾಮ್: ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಝೀಬ್ರಾ ಲೈನ್‌ಗಳನ್ನು (Zebra Cross) ಹೊರತುಪಡಿಸಿ ರಸ್ತೆ ದಾಟುವ ಪಾದಚಾರಿಗಳಿಗೆ ದಂಡ ವಿಧಿಸಲು ಆರಂಭಿಸಲಾಗಿದೆ. ಅಕ್ರಮವಾಗಿ ರಸ್ತೆ ದಾಟುವವರ ವಿರುದ್ಧ ಸೌದಿ ಸಂಚಾರ ವಿಭಾಗವು (Saudi Traffic Police) ತಪಾಸಣೆಯನ್ನು ತೀವ್ರಗೊಳಿಸಿದೆ.

ದಮ್ಮಾಮ್ ಸೀಕೋಕ್ ಬಳಿ ರಸ್ತೆ ದಾಟಿದ್ದಕ್ಕಾಗಿ ಭಾರತೀಯರು ಸೇರಿದಂತೆ ಹಲವಾರು ಮಂದಿಗೆ ನಿನ್ನೆ ದಂಡ ವಿಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪಾದಚಾರಿಗಳು ಅಪಘಾತಕ್ಕೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಇಲಾಖೆ ಕ್ರಮಕ್ಕೆ ಮುಂದಾಗಿದೆ.