ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ದೇಶದ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮವು KCF ಕುವೈತ್ ರಾಷ್ಟ್ರೀಯ ಅಧ್ಯಕ್ಷ ಹುಸೈನ್ ಎರ್ಮಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ಅಧ್ಯಕ್ಷರಾದ ಬಹು ಸಾವುಲ್ ಹಮೀದ್ ಸಅದಿ ಝುಹುರಿ ಉಸ್ತಾದ್ ರವರು ದುಃಅ ನೆರೆವೇರಿಸಿದರು. ನಂತರ ಇಹ್ಸಾನ್ ಅಧ್ಯಕ್ಷ ಬಹು. ಉಮರುಲ್ ಫಾರೂಕ್ ಸಖಾಫಿ ಸ್ವಾಗತ ಕೋರಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಮಾತನಾಡಿದರು.
ಸಂಘಟನಾ ವಿಭಾಗ ಅಧ್ಯಕ್ಷರಾದ ಬಹು ಉಮರ್ ಝುಹುರಿ ಉಸ್ತಾದ್ ರವರು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಉದ್ಘಾಟನೆ ಗೈದು ಮಾತನಾಡಿದರು. ಅದೇ ರೀತಿ ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು ಹುಸೈನ್ ಎರ್ಮಡ್ ಉಸ್ತಾದರು ಅಧ್ಯಕ್ಷ ಭಾಷಣಗೈದು,ವೇದಿಕೆಯಲ್ಲಿ ರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗದ ಕಾರ್ಯದರ್ಶಿಜನಾಬ್ ಅಬ್ದುಲ್ ಮಲಿಕ್ ಸೂರಿಂಜೆ ಹಾಜರಿದ್ದು ಆಶಂಸ ಭಾಷಣ ವನ್ನು ರಾಷ್ಟ್ರೀಯ ಸಮಿತಿಯ ಪಬ್ಲಿಕೇಶನ್ ವಿಭಾಗದ ಕಾರ್ಯದರ್ಶಿ ಜನಾಬ್ ಇಬ್ರಾಹಿಂ ವೇಣೂರು ರಾಷ್ಟ್ರೀಯ ಸಮಿತಿ ಸದಸ್ಯರಾದ ಜನಾಬ್ ಸಂಸುಂದ್ದಿನ್ ಬೆಜ್ಜವಳ್ಳಿ, ಸೌತ್ ಝೋನ್ ಕಾರ್ಯದರ್ಶಿ ಜನಾಬ್ ಮುನೀರ್ ಕಾರ್ಕಳ ಮಾತನಾಡಿದರು.


ವೇದಿಕೆಯಲ್ಲಿ ಸೌತ್ ಝೋನ್ ಅಧ್ಯಕ್ಷ ಜನಾಬ್ sm ಉಮರಬ್ಬ ಪಬ್ಲಿಕೇಶನ್ ನೇತಾರರು ಜನಾಬ್ ಸಿರಾಜ್ ಕೃಷ್ಣಾಪುರ ಫಹಾಹಿಲ್ ಸೆಕ್ಟರ್ ಕಾರ್ಯದರ್ಶಿ ಜನಾಬ್ ಹಮೀದ್ ಮೂಳೂರು ಮೆಹಬೂಲ ಸೆಕ್ಟರ್ ಅಧ್ಯಕ್ಷ ಜನಾಬ್ ಸಂಸುಂದ್ದಿನ್ ಕುಂದಾಪುರ ಸೌತ್ ಝೋನ್ ಪಬ್ಲಿಕೇಶನ್ ಕೊರ್ಡಿನೆಟರ್ ಜನಾಬ್ ಅನ್ವರ್ ಬಜ್ಪೆ ಹಾಗೂ ರಾಷ್ಟ್ರೀಯ ಸಮಿತಿ ಝೋನ್ ಸೆಕ್ಟರ್ ಸದಸ್ಯರು ಪಾಲ್ಗೊಂಡಿದ್ದರು.ಕೊನೆಯಲ್ಲಿ ಬಹು ಹುಸೈನ್ ಎರ್ಮಡ್ ಉಸ್ತಾದರ ದುವಾ ದೊಂದಿಗೆ ಮತ್ತು ರಾಷ್ಟ್ರ ಗೀತೆ ಹಾಡಿ, ಜನಾಬ್ ಸಂಸುಂದ್ದಿನ್ ಬೆಜ್ಜವಳ್ಳಿ ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಈದ್ ಸಂಭ್ರಮದ ಮೇಲೆ ಯುದ್ಧದ ಛಾಯೆ: ಕುವೈತ್ ಗ್ರ್ಯಾಂಡ್ ಮಸೀದಿಯಲ್ಲಿ ಈದ್ ಪ್ರಾರ್ಥನೆ ರದ್ದು
ಈದ್ ನಂತರ ಸರ್ಕಾರಿ ಕಚೇರಿ ಅವಧಿ ಕಡಿತ- ಶೇ. 30ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ
ಕುಟುಂಬ ಸಂದರ್ಶಕ ವೀಸಾದಲ್ಲಿರುವ ಭಾರತೀಯರ ಮಾಹಿತಿ ಸಂಗ್ರಹಕ್ಕೆ ರಾಯಭಾರ ಕಚೇರಿ ಕ್ರಮ
ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ
ಕುವೈತ್ ಮೇಲೆ ಕ್ಷಿಪಣಿ ದಾಳಿ- ಅಮೆರಿಕಾ ಸೇನಾ ವಿಮಾನಗಳು ಪತನ
ವಲಸಿಗರಿಗೆ ಶುಭ ಸುದ್ದಿ: ‘ಸಹಲ್’ ಅಪ್ಲಿಕೇಶನ್ ನಲ್ಲಿ ಪಾಸ್ಪೋರ್ಟ್ ವಿವರಗಳನ್ನು ನವೀಕರಿಸಲು ಸೌಲಭ್ಯ
ಕುವೈತ್ನಲ್ಲಿ ಚಾಲನಾ ಪರವಾನಗಿ ಕಾರ್ಯವಿಧಾನಗಳು ಮತ್ತಷ್ಟು ಕಠಿಣ
ಯಾತ್ರಿಕರ ಗಮನಕ್ಕೆ: ವಿದೇಶದಿಂದ ಔಷಧಿ ಸಾಗಿಸುವುದಕ್ಕೆ ನಿಯಂತ್ರಣ
ಇಸ್ರಾಅ್ ಮತ್ತು ಮಿ’ರಾಜ್ ಪ್ರಯುಕ್ತ ಜನವರಿ 18 ರಂದು ಸಾರ್ವಜನಿಕ ರಜೆ
ಬ್ಯಾಂಕ್ ಸಾಲ: ಮರುಪಾವತಿಸದ ವಲಸಿಗರು ವಿಮಾನ ನಿಲ್ದಾಣದಲ್ಲಿ ಬಂಧನ