ಸುಳ್ಯ: ಬೆಳ್ಳಾರೆಯ ಕಳಂಜದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಮಸೂದ್ ರವರ ಮನೆಗೆ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿ ಯವರು ಭೇಟಿ ನೀಡಿದರು.
ಮಸೂದ್ ಹತ್ಯೆಯಾದ ಮರುದಿನವೇ ವಕ್ಫ್ ಅಧ್ಯಕ್ಷರು ಕಾನೂನು ಸಚಿವರನ್ನು ಭೇಟಿಯಾಗಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದರು. ಗೃಹ ಸಚಿವರೊಂದಿಗೂ ಫೋನ್ ಮೂಲಕ ಮಾತನಾಡಿ ಕಠಿಣ ಕ್ರಮಕ್ಕೆ ಮನವಿ ಮಾಡಿದ್ದರು. ಇದನ್ನು ಮಸೂದ್ ಮನೆಯವರಿಗೆ ತಿಳಿಸುವುದರೊಂದಿಗೆ, ಮುಂದೆಯೂ ಕಾನೂನಾತ್ಮಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂಧರ್ಭದಲ್ಲಿ ಬೆಳ್ಳಾರೆಯ ಎಲ್ಲಾ ನಾಗರಿಕರು ಶಾಂತಿಯನ್ನು ಕಾಪಾಡಿ ಕಾನೂನು ಕ್ರಮಕ್ಕೆ ಆಗ್ರಹಿಸಿದಕ್ಕಾಗಿ ಪ್ರತ್ಯೇಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮೊಗರ್ಪಣೆ, ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರಾದ ಮುಹಮ್ಮದ್ ಕಳಂಜ, ಹಸನ್ ಸಖಾಫಿ ಬೆಳ್ಳಾರೆ, ಜಮಾಅತಿನ ಅಧ್ಯಕ್ಷರಾದ ಶಾಫಿ ಚೆನ್ನಾರು, ಹಮೀದ್ ಆಲ್ಫಾ ಬೆಳ್ಳಾರೆ, ಅಝೀಝ್ ಕಳಂಜ ಸಹಿತ ಊರಿನ ಹಲವರು ಉಪಸ್ಥಿತರಿದ್ದರು.