janadhvani

Kannada Online News Paper

ಕೊಡಗು ಎಸ್ಸೆಸ್ಸೆಫ್ ಕ್ಯಾಂಪಸ್ ಅಸ್ಸೆಂಬ್ಲಿ ಯಶಸ್ವಿ ಸಮಾಪ್ತಿ

ಮಡಿಕೇರಿ: ಸಮಾಜದಲ್ಲಿ ವಿದ್ಯಾಭ್ಯಾಸದ ಮೂಲಕ ಮಾತ್ರವೇ ಕ್ರಾಂತಿ ಸೃಷ್ಟಿಸಲು ಸಾಧ್ಯ , ಸಮಾಜದಲ್ಲಿರುವ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸುವವರಾಗಬೇಕೆಂದು ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ ಎ ಅಬ್ದುಲ್ಲಾ ಅವರು ಕರೆ ನೀಡಿದರು. ಕೊಡಗು ಜಿಲ್ಲಾ ಎಸ್ಸೆಸ್ಸೆಫ್ ಆಯೋಜಿಸಿದ್ದ ಕ್ಯಾಂಪಸ್ ಅಸೆಂಬ್ಲಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ಮಡಿಕೇರಿ ತಾಲೂಕಿನ ಕೊಟ್ಟಮುಡಿಯಲ್ಲಿ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿಯು ‘ನೈತಿಕತೆ- ಸಮಗ್ರತೆ-ಸಮರ್ಪಣೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಕಳೆದ ಜುಲೈ 03 ರಂದು ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮ ಆಯೋಜಿಸಿತ್ತು .ಕೊಡಗು ಜಿಲ್ಲಾ ಸಹಾಯಕ ಖಾಝಿ ಶಾದುಲಿ ಫೈಝಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿದ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಯಾಕೋಬ್ ಮಾಸ್ಟರ್ ಅವರು ಪ್ರಸ್ತುತ ಸನ್ನಿವೇಶದಲ್ಲಿ ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಸ್ಪರ ಅಪಾರ್ಥಗಳಿಗೆ ಈಡಾಗುತ್ತಿದ್ದು ಪ್ರಸ್ತುತ ಕಾರ್ಯಕ್ರಮವು ಅಂತಹ ಸಮಸ್ಯೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ ಎಂದರು.ಅಧ್ಯಕ್ಷೀಯ ಭಾಷಣವನ್ನು ಮಾಡಿದ ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫೀ ಸ‌ಅದಿ ಅವರು ರಾಜಕೀಯ ಲಾಭಗಳಿಗಾಗಿ , ವೈಯುಕ್ತಿಕ ದುರಾಸೆಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡಲಾಗುತ್ತಿದೆ ಇದನ್ನು ಅರಿತು ವಿದ್ಯಾರ್ಥಿಗಳು ಸಮಾಜದ ಮುಂದೆ ಮಾದರಿಯುತವಾಗಿ ಬದುಕಬೇಕು ಎಂದರು.ತರಬೇತುದಾರರಾಗಿ ಎಸ್ಸೆಸ್ಸೆಫ್‌ನ ರಾಷ್ಟ್ರೀಯ ಮಾಜಿ ಕಾರ್ಯದರ್ಶಿ ಮಜೀದ್ ಮಾಸ್ಟರ್ ಅರಿಯಲ್ಲೂರು, ಕಣ್ಣೂರು ಜಿಲ್ಲಾಧ್ಯಕ್ಷರಾದ ಅನಸ್ ಅಮಾನಿ ಪುಷ್ಪಗಿರಿ,ಕೇರಳದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ನೂರುದ್ದೀನ್, ಅಡ್ವೋಕೇಟ್ ಕುಞ್ಞಬ್ದುಲ್ಲ ತರಗತಿ ನೀಡಿದರು.ಸಮಾರಂಭದಲ್ಲಿ ಕೊಡಗು ಜಂ‌ಇಯ್ಯತುಲ್ ಉಲಮಾ ಅಧ್ಯಕ್ಷರಾದ ಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ,ಎಸ್‌ವೈಎಸ್ ಜಿಲ್ಲಾಧ್ಯಕ್ಷರಾದ ಇಲ್ಯಾಸ್ ಅಲ್ ಹೈದ್ರೂಸಿ, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ,ಮರ್ಕಝ್ ಸಂಸ್ಥೆಯ ವ್ಯವಸ್ಥಾಪಕರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,ಎಸ್ ಎಸ್ ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಹೊಸತೋಟ,ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಇದರ ಯ ಏ ಇ ರಾಷ್ಟ್ರೀಯ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲು, ಮುಜೀಬ್ ಕಡಂಗ, ಸೌದಿ ಅರೇಬಿಯಾದ ಸಿದ್ದೀಕ್ ಝುಹ್ರಿ,ಕುವೈತ್ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ,ಎಸ್‌ಎಸ್‌ಎಫ್ ರಾಜ್ಯ ನಾಯಕರಾದ ಮುಬಶ್ಶಿರ್ ಅಹ್ಸನಿ, ಅಝೀಝ್ ಸಖಾಫಿ,ಜಲೀಲ್ ಅಮೀನಿ,ಮುಜೀಬ್, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಪಿ ಡಿ ಒ ಅಬ್ದುಲ್ಲಾ ಎಂ ಎಂರವರನ್ನು ಸನ್ಮಾನಿಸಲಾಯಿತು.ಕೊಡಗು ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಸ್ವಾಗತ ಕೋರಿ ಸಹಾಯಕ ಕಾರ್ಯದರ್ಶಿ ಇಬ್ರಾಹಿಂ ಮಾಸ್ಟರ್ ವಂದಿಸಿದರು.

error: Content is protected !! Not allowed copy content from janadhvani.com