janadhvani

Kannada Online News Paper

ಮೊಂಟೆಪದವು:(ಜನಧ್ವನಿ ವಾರ್ತೆ) ಮರಿಕ್ಕಳ ಜುಮಾ ಮಸ್ಜಿದ್ ಇದರ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ನಡೆದ 3 ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮದ ಸಮಾರೋಪವು ಮರಿಕ್ಕಳ ಜಮಾಅತ್ ಖಾಝಿ ಶೈಖುನಾ ಬೇಕಲ್ ಉಸ್ತಾದರ ಅಧ್ಯಕ್ಷತೆಯಲ್ಲಿ ಮರಿಕ್ಕಳ ಮಸ್ಜಿದ್ ವಠಾರದಲ್ಲಿ ನಡೆಯಿತು.


ಸಯ್ಯದ್ ಝೈನುಲ್ ಆಬಿದ್ ಜಮಲುಲೈಲ್ ತಂಙಳ್ ಕಾಜೂರು ಸ್ವಲಾತ್ ಮಜ್ಲಿಸ್ ಹಾಗೂ ದುವಾ ಮಜ್ಲಿಸ್ ಗೆ ನೇತೃತ್ವವನ್ನು ನೀಡಿದರು. ಕಾರ್ಯಕ್ರಮದಲ್ಲಿ ಮರಿಕ್ಕಳ ಮಸ್ಜಿದ್ ಖತೀಬ್
ಅಬ್ಬಾಸ ಕಾಫಿ ಮಡಿಕೇರಿ, ಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ, ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಮುಲಾರ್ ಪಟ್ಣ, ಮುಅಲ್ಲಿಂ ರಮಳಾನ್ ಮದನಿ ಕಂಬಳಬೆಟ್ಟು ,ಮರಿಕ್ಕಳ ಜಮಾಅತ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಲ್,ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದ ಹಿತ್ತಿಲು ,ಕೋಶಾಧಿಕಾರಿ ಹನೀಫ್ ಚಂದ ಹಿತ್ತಿಲು ಉಪಸ್ಥಿತರಿದ್ದರು .
ಮರಿಕ್ಕಳ ಖತೀಬ್ ಅಬ್ಬಾಸ್ ಸಖಾಫಿ ಸ್ವಾಗತಿಸಿದರು. ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ವಂದಿಸಿದರು.