ಮುಂಬೈ: ಬೇಸಿಗೆಯ ಬೇಗೆಯಿಂದ ತತ್ತರಿಸಿ ಹೋದ ಮುಂಬೈ ಎಂಬ ಮಾಯಾ ನಗರಿಗೆ ಮುಂಗಾರು ಮಳೆ ನೆಮ್ಮದಿಯನ್ನು ಕರುಣಿಸಿದೆ.
ಶನಿವಾರ ಬೆಳಿಗ್ಗೆಯಿಂದ ಮುಂಬೈಯ ಹಲವು
ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ.ಹವಾಮಾನ ಇಲಾಖೆ ಜೂನ್ ಮೊದಲ ವಾರದಂದು ಮಳೆಯಾಗುವ ಮುನ್ಸೂಚನೆ ನೀಡಿದೆಯಾದರೂ ವಾಣಿಜ್ಯ ನಗರ ಮುಂಬೈ ಬಿರು ಬಿಸಿಲಿಗೆ ತತ್ತರಿಸಿ ಹೋಗಿತ್ತು.
ಮುಂಗಾರು ಮಳೆಯ ಆಗಮನದಿಂದ ಮುಂಬೈ ಜನರು ಸಂತಸದಿಂದ ನೆಮ್ಮದಿಯನ್ನು ಕಂಡರು.
ಮುಂಬೈನ ಹಲವು ಕಡೆಗಳಲ್ಲಿ ಬಾರೀ ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
ಮುಂಬೈ ಮಹಾನಗರ ಪಾಲಿಕೆ ತನ್ನ ಎಲ್ಲಾ ಸಿಬಂದಿಗಳಿಗೆ ಸೂಕ್ತ ರೀತಿಯಲ್ಲಿ ಜನರಿಗೆ ಸ್ಪಂದಿಸುವಂತೆ ಮತ್ತು ಹವಾಮಾನ ಸ್ಥಿತಿ ಗತಿಯ ಬಗ್ಗೆ ವರದಿ ನೀಡಲು ಕೋರಿದೆ.
ಅಗ್ನಿಶಾಮಕ ದಳ ಹಾಗೂ ವಿದ್ಯುತ್ ನಿಗಮಕ್ಕೆ ಎಚ್ಚರಿಕೆಯನ್ನು ನೀಡಲಾಗಿದೆ. ಈ ಮೂಲಕ ಮುಂಬೈ ಬಾರೀ ಮಳೆಯನ್ನು ಎದುರಿಸಲು ಸಿದ್ಧತೆಯನ್ನು ಮಾಡ ತೊಡಗಿದೆ.
ವರದಿ : ಮುಹಮ್ಮದ್ ಉಳ್ಳಾಲ್ (ಮುಂಬೈ ಅಂದೇರಿ)