ರಿಯಾದ್: ಇಂದು (ಏ.1-2022) ರಂಜಾನ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ, ಹಿಜರಿ 1443, ರಂಜಾನ್ನ ಮೊದಲ ದಿನವು ಏಪ್ರಿಲ್ 2, ಶನಿವಾರ ಆಗಿರುತ್ತದೆ ಎಂದು ಸೌದಿ ಅರೇಬಿಯಾದ ಚಂದ್ರನ ವೀಕ್ಷಣಾ ಸಮಿತಿ ಶುಕ್ರವಾರ ಸಂಜೆ ಘೋಷಿಸಿದೆ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ರಂಜಾನ್ ತಿಂಗಳ ಆರಂಭವನ್ನು ಶಅಬಾನ್ನ 29 ನೇ ದಿನದಂದು ರಾತ್ರಿ ಚಂದ್ರ ದರ್ಶನದ ಆಧಾರದಲ್ಲಿ ನಿರ್ಣಯಿಸಲಾಗುತ್ತದೆ.
ಏ.2 ರಂದು ರಂಜಾನ್ ಮೊದಲ ದಿನವಾಗಲಿದ್ದು,ಈ ತಿಂಗಳನ್ನು ಮುಸ್ಲಿಮ್ ಸಮಾಜವು ಬಹಳ ಗೌರವ ಮತ್ತು ಭಕ್ತಿಯಿಂದ ಕಾಣುತ್ತದೆ. ಈ ತಿಂಗಳ ಹಗಲಿನಲ್ಲಿ ಕಡ್ಡಾಯ ವೃತವನ್ನು ಹಿಡಿದು ಹೆಚ್ಚೆಚ್ಚು ಪುಣ್ಯ ಕರ್ಮಗಳಲ್ಲಿ ತಮ್ಮನ್ನು ತೊಡಗಿಸುತ್ತಾರೆ. ರಾತ್ರಿಯಲ್ಲಿ ರಂಜಾನ್ನ ಪ್ರತ್ಯೇಕ ಪ್ರಾರ್ಥನೆಯಾದ ತರಾವೀಹ್ ನಲ್ಲೂ ಇತರ ಪ್ರಾರ್ಥನೆಗಳಲ್ಲೂ ಭಾಗಿಯಾಗುತ್ತಾರೆ.
ಇಸ್ಲಾಮ್ ಎಂಬ ಶಾಂತಿಯ ಸಂಕೇತವಾಗಿರುವ ಧರ್ಮದ ಅನುಯಾಯಿಗಳಾದ ಮುಸಲ್ಮಾನರು ಸದಾ ಶಾಂತಿಯನ್ನೇ ಬಯಸುವವರೂ, ಯಾವುದೇ ಜಾತಿ ಧರ್ಮವನ್ನು ನೋಡದೇ, ಇತರರೊಂದಿಗೆ ದಯೆಯನ್ನು ತೋರುವವರೂ,ಸಹಾಯ ಹಸ್ತವನನ್ನು ಚಾಚುವವರೂ ಆಗಿರುತ್ತಾರೆ.ಅದು ಅಲ್ಲಾಹನ ಮತ್ತು ಪ್ರವಾದಿ ಪೈಗಂಬರರ ಸಂದೇಶವಾಗಿರುತ್ತದೆ. ರಂಜಾನ್ ತಿಂಗಳಿನಲ್ಲಿ ನಡೆಸುವ ಪ್ರತಿಯೊಂದು ಪುಣ್ಯ ಕಾರ್ಯಗಳಿಗೆ 70 ಪಟ್ಪು ಹೆಚ್ಚು ಪ್ರತಿಫಲ ದೊರೆಯುತ್ತಿದೆ.
ರಂಜಾನ್ ಸಾಮಾನ್ಯವಾಗಿ 29 ಅಥವಾ 30 ದಿನಗಳಿರಲಿದೆ. ರಂಜಾನ್ನ 29 ನೇ ದಿನ ಶವ್ವಾಲ್ ತಿಂಗಳ ಚಂದ್ರ ದರ್ಶನವು ಇದರ ಅವಧಿಯನ್ನು ನಿರ್ಧರಿಸುತ್ತದೆ.ಅಂದು ಚಂದ್ರ ದರ್ಶನವಾದಲ್ಲಿ ಮರುದಿನ ಈದುಲ್ ಫಿತರ್ ಆಚರಿಸಲಾಗುತ್ತಿದೆ. ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದಿದ್ದಲ್ಲಿ ರಂಜಾನ್ 30 ದಿನ ಪೂರ್ತೀಕರಿಸಿ ಮರುದಿನ ಈದ್ ಆಚರಿಸಲಾಗುತ್ತದೆ.
ಗಲ್ಫ್ ದೇಶಗಳಾದ ಯುಎಇ, ಬಹ್ರೇನ್, ಕುವೈತ್, ಖತಾರ್ ನಲ್ಲೂ ಏ.2 ರಂದು ರಂಜಾನ್ ಆರಂಭವಾಗಲಿದೆ.ಒಮಾನ್ ನಲ್ಲಿ ಏ.2ರಂದು ಶಅಬಾನ್ 30 ಪೂರ್ತೀಕರಿಸಿ ಏ.3 ರಂದು ರಂಜಾನ್ ಪ್ರಥಮ ದಿನವಾಗಿರುತ್ತದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ