janadhvani

Kannada Online News Paper

ಬಜೆಟ್ -2022: ಅಗ್ಗ ಮತ್ತು ದುಬಾರಿಯಾಗುವ ವಸ್ತುಗಳು ಯಾವುವು?

ನವದೆಹಲಿ,ಫೆ.1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದ 2022 ನೇ ಸಾಲಿನ ಬಜೆಟ್ ನ್ನು ಮಂಡನೆ ಮಾಡಿದ್ದಾರೆ. ಈ ಮೂಲಕ ಸತತ 4ನೇ ಬಾರಿ ಬಜೆಟ್ ಮಂಡಿಸುತ್ತಿರುವ ಖ್ಯಾತಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಭಾಜನರಾಗಿದ್ದಾರೆ. ಏಪ್ರಿಲ್ 1, 2022ರಿಂದ ಪ್ರಾರಂಭ ಆಗುವ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

ಅಗ್ಗದ ಮತ್ತು ದುಬಾರಿಯಾಗುವ ವಸ್ತುಗಳ ಪಟ್ಟಿ ಇಲ್ಲಿದೆ:

ಬೆಲೆ ಇಳಿಕೆ:

  • ಬಟ್ಟೆ
  • ಎಲೆಕ್ಟ್ರಾನಿಕ್ ವಸ್ತುಗಳು
  • ಆಭರಣ ವಸ್ತುಗಳು
  • ಕೈಗಡಿಯಾರಗಳು
  • ಚರ್ಮದ ವಸ್ತುಗಳು
  • ಕೃಷಿ ಉಪಕರಣಗಳು
  • ರತ್ನದ ಕಲ್ಲುಗಳು ಮತ್ತು ವಜ್ರಗಳು
  • ತದ್ರೂಪಿ ಅಥವಾ ಅನುಕರಣೆ ಆಭರಣ
  • ಮೊಬೈಲ್ ಫೋನ್‌ಗಳು
  • ಮೊಬೈಲ್ ಫೋನ್ ಚಾರ್ಜರ್‌ಗಳು
  • ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳು
  • ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳು ಮೇಲಿನ ಕಸ್ಟಮ್ ಸುಂಕಗಳುಸ್ಟೀಲ್ ಸ್ಕ್ರ್ಯಾಪ್

ಬೆಲೆಯೇರಿಕೆ:

  • ಎಲ್ಲ ಆಮದು ವಸ್ತುಗಳು
  • ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ
  • ಛತ್ರಿಗಳ ಮೇಲಿನ ಸುಂಕ ಹೆಚ್ಚಳ